/newsfirstlive-kannada/media/post_attachments/wp-content/uploads/2024/04/DUBAI_RAINS.jpg)
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ವಿಶ್ವದ ಅತ್ಯಂತ ಜನನಿಬಿಡ ನಿಲ್ದಾಣ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನೀರಿನಿಂದ ತುಂಬಿದ್ದು ನದಿಯಂತೆ ಆಗಿದೆ. ಈ ಹಿನೆಲೆಯಲ್ಲಿ ಏರ್ಪೋರ್ಟ್ಗೆ ಬರುವ ಸಾಕಷ್ಟು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
Dubai Airport right now
pic.twitter.com/FX992PQvAU— Science girl (@gunsnrosesgirl3) April 16, 2024
ಇದನ್ನೂ ಓದಿ:RCB ವಿರುದ್ಧ ಗೆದ್ದ ಮೇಲೆ ಐಪಿಎಲ್ ಟ್ರೋಫಿ ಗೆಲ್ಲೋ ಭರವಸೆ ಹೆಚ್ಚಾಯ್ತಾ.. SRHಗೆ ಪವರ್ ಯಾರು?
ದುಬೈನಲ್ಲಿ ವರುಣಾರ್ಭಟ ಜೋರಾದ ಹಿನ್ನೆಲೆಯಲ್ಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಎಲ್ಲ ನದಿಯಂತೆ ಆಗಿದೆ. ನಿಲ್ದಾಣದ ಒಳಗೆ ಕೆಲಸ ಮಾಡುವಂತ ವಾಹನಗಳೆಲ್ಲ ನೀರಿನಲ್ಲಿ ಮುಳುಗಿ ಹೋಗಿವೆ. ಮಾಹಿತಿ ಪ್ರಕಾರ 100ಕ್ಕೂ ಹೆಚ್ಚು ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಮಳೆಯ ಜೊತೆಗೆ ಗಾಳಿ ಬೀಸುತ್ತಿದ್ದರಿಂದ ನಿಲ್ದಾಣದಿಂದ ಯಾವುದೇ ವಿಮಾನ ಟೇಕ್ ಆಫ್ ಕೂಡ ಆಗಲಿಲ್ಲ. ಇದರಿಂದ ಪ್ರಯಾಣಿಕರು ಕೂಡ ಸಾಕಷ್ಟು ಸಮಸ್ಯೆ ಅನುಭವಿಸಿದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ‘ಬದುಕು ಎನ್ನುವುದು ಒಂದು ಅವಕಾಶ’.. ದ್ವಾರಕೀಶ್ ಅಂತಿಮ ದರ್ಶನ ಪಡೆದ ಬಳಿಕ ಯಶ್ ಹೇಳಿದ್ದೇನು?
Current weather in Dubai pic.twitter.com/v6dqxaA97A
— CLEAN CAR CLUB (@TheCleanCarClub) April 16, 2024
ಇದನ್ನೂ ಓದಿ: ಉಡುಪಿಯಲ್ಲಿ ಹೃದಯ ವಿದ್ರಾವಕ ಘಟನೆ; ವೋಟ್ ಮಾಡಿದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ಹಿರಿಯ ಜೀವ
ಮರಳುಗಾಡಿನ ನಗರದಲ್ಲಿ ಮಳೆರಾತ ಅವಾಂತರವನ್ನೇ ಸೃಷ್ಟಿದ್ದು ದುಬೈನಾ ದೊಡ್ಡ ಅಂಗಡಿಗಳು, ರಸ್ತೆಗಳು ಹಾಗೂ ಮಾಲ್ ಆಫ್ ಎಮಿರೇಟ್ಸ್‌ನಂತ ಪ್ರಮುಖ ಶಾಪಿಂಗ್ ಸೆಂಟರ್‌ಗಳು ನೀರಿನಿಂದ ಆವೃತ್ತವಾಗಿವೆ. ಒಂದು ಮೆಟ್ರೋ ನಿಲ್ದಾಣವಂತೂ ನೀರಿನಿಂದ ತುಂಬಿ ಹೋಗಿದೆ. ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು ರಸ್ತೆಗಳು ಕುಸಿದರೆ, ಕೆಲ ಮನೆಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಮಳೆ ಜೊತೆಗೆ ಗಾಳಿ ಕೂಡ ಬೀಸಿದ್ದರಿಂದ ಮರಗಳು, ಕರೆಂಟ್ ಕಂಬಗಳು ನೆಲಕ್ಕೆ ಉರುಳಿವೆ ಎನ್ನಲಾಗಿದೆ. ಇನ್ನು ಯುಎಇ ಮತ್ತು ಇತರ ಪ್ರದೇಶಗಳಲ್ಲಿನ ತೀವ್ರ ಮಳೆ ಆಗುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಲಾಗ್ತಿದೆ.
https://twitter.com/i/status/1780470191283225078
ಇದನ್ನೂ ಓದಿ: ಇದನ್ನೂ ಓದಿ: ಸಿಲಿಕಾನ್ ಸಿಟಿಯ ಈ ಬ್ರಿಡ್ಜ್ ಮೇಲೆ ಇಂದಿನಿಂದ ಬೈಕ್ಗಳಿಗೆ ಮಾತ್ರ ಅವಕಾಶ.. ಉಳಿದೆಲ್ಲವೂ ಬ್ಯಾನ್, ಕಾರಣ?
ದುಬೈನಲ್ಲಿ ಗುಡುಗು, ಮಿಂಚು ಸಮೇತ ಮಳೆ ಮುಂದುವರೆಯಲಿದ್ದು ಹೀಗಾಗಿ ಜನರು ಹೆಚ್ಚು ಹೊರಗಡೆ ಓಡಾಡದಂತೆ ಮಾಹಿತಿ ನೀಡಲಾಗಿದೆ. ಈಗಾಗಲೇ ರಸ್ತೆಗಳಲ್ಲಿ ನಿಂತಿದ್ದ ನೀರಿನಲ್ಲಿ ವಾಹನಗಳು ಸಿಕ್ಕಿಕೊಂಡು ಸಾಕಷ್ಟು ಜನ ತೊಂದರೆಗೆ ಒಳಗಾಗಿದ್ದಾರೆ. ಕೆಲ ರಸ್ತೆಯ ಅಂಡರ್ಗ್ರೌಂಡ್ಗಳು ನೀರು ತುಂಬಿ ಸ್ವಿಮ್ಮಿಂಗ್ ಪೂಲ್ನಂತೆ ಆಗಿವೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ