newsfirstkannada.com

RCB ವಿರುದ್ಧ ಗೆದ್ದ ಮೇಲೆ ಐಪಿಎಲ್ ಟ್ರೋಫಿ ಗೆಲ್ಲೋ ಭರವಸೆ ಹೆಚ್ಚಾಯ್ತಾ.. SRHಗೆ ಪವರ್ ಯಾರು?

Share :

Published April 17, 2024 at 12:52pm

    ಆರ್​ಸಿಬಿ ವಿರುದ್ಧ ಗೆದ್ದ ಮೇಲೆ SRHಗೆ ಐಪಿಎಲ್ ಟ್ರೋಫಿ ಗೆಲ್ಲುವ ಕನಸು

    ಧೋನಿ, ರೋಹಿತ್, ವಿರಾಟ್ ಇದ್ದಂತ ತಂಡಗಳನ್ನ ಸೋಲಿಸಿದ ಕಮಿನ್ಸ್

    ಐಪಿಎಲ್​ ಟೂರ್ನಿಗಳಲ್ಲಿ ಮಂಕಾಗಿರ್ತಿದ್ದ ಎಸ್​ಆರ್​ಹೆಚ್​ಗೆ ಶಕ್ತಿ ಯಾರು?

ಒಬ್ಬ ಸರಿಯಾದ ಲೀಡರ್​​​ ಸಿಕ್ರೆ ಪಾತಾಳಕ್ಕೆ ಕುಸಿದ ತಂಡ ಕೂಡ ಪುಟಿದೇಳುತ್ತೆ ಅನ್ನೋ ಮಾತಿಗೆ ಸನ್​ರೈಸರ್ಸ್​ ಹೈದ್ರಾಬಾದ್​ ಬೆಸ್ಟ್​ ಎಕ್ಸಾಂಪಲ್​. ಈ ಸಕ್ಸಸ್​ ಹಿಂದಿನ ಸೂತ್ರದಾರ ಪ್ಯಾಟ್ ಕಮಿನ್ಸ್. ಹಳಿ ತಪ್ಪಿ ಹೋಗಿದ್ದ ಸನ್​ ರೈಸರ್ಸ್​ಗೆ ಹೊಸ ದಾರಿ ತೋರಿಸಿರುವ ಕಮಿನ್ಸ್​​ ಐಪಿಎಲ್​ ಟ್ರೋಫಿ ಗೆಲ್ಲಿಸಿಕೊಡುವ ಭರವಸೆ ಹುಟ್ಟು ಹಾಕಿದ್ದಾರೆ. ದಂಡನಾಯಕ ಕಮಿನ್ಸ್​​ ಸಕ್ಸಸ್​ ಕಂಡಿದ್ದೇಗೆ.?

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅದೆಷ್ಟೋ ನಾಯಕರು ಬಂದಿದ್ದಾರೆ. ಹೋಗಿದ್ದಾರೆ. ಆದ್ರೆ, ಕೆಲವೇ ಕೆಲ ನಾಯಕರಷ್ಟೇ ನೆನಪಿನಲ್ಲಿ ಇರ್ತಾರೆ. ಈ ಪೈಕಿ ನಾಯಕ ಮಹೇಂದ್ರ ಸಿಂಗ್ ಧೋನಿ, ಹಿಟ್​ಮ್ಯಾನ್ ರೋಹಿತ್ ಶರ್ಮಾ ಮೊದಲ ಪಂಕ್ತಿಯಲ್ಲಿ ಇದ್ದಾರೆ. 5 ಬಾರಿ ತಂಡವನ್ನ ಚಾಂಪಿಯನ್​​ ಮಾಡಿರೋ ಹೆಗ್ಗಳಿಕೆ ಇವ್ರದ್ದು. ಆದ್ರೆ, ಐಪಿಎಲ್​ನಲ್ಲಿ ಮೊದಲ ಬಾರಿಗೆ ತಂಡವನ್ನ ಮುನ್ನಡೆಸ್ತಿರೋ ಪ್ಯಾಟ್​ ಕಮಿನ್ಸ್​, ಇವ್ರ ಸಾಲು ಸೇರಿದ್ದಾರೆ.

ಇದನ್ನೂ ಓದಿ: ಸಿಲಿಕಾನ್​ ಸಿಟಿಯ ಈ ಬ್ರಿಡ್ಜ್​ ಮೇಲೆ ಇಂದಿನಿಂದ ಬೈಕ್​ಗಳಿಗೆ ಮಾತ್ರ ಅವಕಾಶ.. ಉಳಿದೆಲ್ಲವೂ ಬ್ಯಾನ್​, ಕಾರಣ?

ದಾಖಲೆ ಮೊತ್ತಕ್ಕೆ ಖರೀದಿ.. ನಾಯಕತ್ವ.. ಟೀಕೆಗೆ ಉತ್ತರ.!

ಪ್ಯಾಟ್ ಕಮಿನ್ಸ್​​ ನಾಯಕತ್ವದಲ್ಲಿ ಆಸ್ಟ್ರೇಲಿಯಾ 2023ರ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈ ಬೆನ್ನಲ್ಲೇ ಐಪಿಎಲ್ ಹರಾಜಿನಲ್ಲಿ ದಾಖಲೆಯ 20.5 ಕೋಟಿಗೆ ಪ್ಯಾಟ್ ಕಮಿನ್ಸ್​ನ ಸನ್ ರೈಸರ್ಸ್ ಹೈದ್ರಾಬಾದ್​ ಖರೀದಿಸಿತು. ಆಗ ಕೋಟಿ ಕೋಟಿ ಹಣವನ್ನ ಸುರಿದ ಬಗ್ಗೆ ಭಾರೀ ಟೀಕೆಗಳೇ ವ್ಯಕ್ತವಾಗಿತ್ತು. ಇನ್ನು, ಸೀಸನ್​ಗೂ ಮುನ್ನ ನಾಯಕನ ಪಟ್ಟ ಕಟ್ಟಿತು. ಆಗ ಟೀಕೆಗಳು ಮತ್ತಷ್ಟು ಹೆಚ್ಚಾಗಿದ್ವು. ಆ ಟೀಕೆಗೆಲ್ಲ ಇದೀಗ ಫಲಿತಾಂಶದ ಉತ್ತರ ನೀಡ್ತಿದ್ದಾರೆ.

ಸನ್ ರೈಸರ್ಸ್ ಎದುರು ಮುಂಬೈ ಮಕಾಡೆ.. ಚೆನ್ನೈ ಚಿಂದಿ..!

ಐಪಿಎಲ್​ನಲ್ಲಿ ಮುಂಬೈ ಹಾಗೂ ಚೆನ್ನೈ ತಂಡಗಳನ್ನ ಬಗ್ಗು ಬಡೆಯೋದು ಬಿಗೆಸ್ಟ್ ಚಾಲೆಂಜ್. ಇನ್​ಫ್ಯಾಕ್ಟ್​_ ಈ ತಂಡಗಳ ಎದುರು ಗೆಲ್ಲೋದು ಎದುರಾಳಿ ನಾಯಕರ ಡ್ರೀಮ್​​ ಕೂಡ ಆಗಿರುತ್ತೆ. ಅಂಥಹ ಬಿಗ್​ ಡ್ರೀಮ್​​ನ ಮೊದಲ ಬಾರಿಯೇ ಈಡೇರಿಸಿಕೊಂಡರವರು ಈ ಪ್ಯಾಟ್ ಕಮಿನ್ಸ್​.

ಇದನ್ನೂ ಓದಿ: ಇದನ್ನೂ ಓದಿ: ಅಕ್ರಮ ಸಂಬಂಧ.. ಕಾರಿನಲ್ಲಿ ಸಿಕ್ಕಿಬಿದ್ದ ಹೆಂಡತಿ, ಬೇಸ್​ ಬಾಲ್​ ಬ್ಯಾಟ್​ನಿಂದ ಹಿಗ್ಗಾಮುಗ್ಗಾ ಬಾರಿಸಿದ ಗಂಡ

ಹೈದ್ರಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಸನ್ ರೈಸರ್ಸ್, ಬಲಾಢ್ಯ ಮುಂಬೈ ಎದುರು ದಾಖಲೆಯ 277 ರನ್ ಪೇರಿಸಿತ್ತು. ಆ ಬಳಿಕ ಮುಂಬೈ ಇಂಡಿಯನ್ಸ್​ನ ಕಟ್ಟಿ ಹಾಕಿ ವಿಜಯ ಪತಾಕೆ ಹಾರಿಸಿತ್ತು. ಇನ್ನು, ಹಾಲಿ ಚಾಂಪಿಯನ್ಸ್​ ಚೆನ್ನೈ ತಂಡವನ್ನ ಚೆಪಾಕ್​​ನಲ್ಲೇ 165 ರನ್​​​​ಗಳಿಗೆ ಕಟ್ಟಿಹಾಕಿದ್ದ ಸನ್ ರೈಸರ್ಸ್, ಈ ಟಾರ್ಗೆಟ್​ನ 18.1 ಓವರ್​​ನಲ್ಲೇ ಚೇಸ್ ಮಾಡಿತ್ತು.

ಮುಂಬೈ, ಚೆನ್ನೈ ಬಳಿಕ ಆರ್​ಸಿಬಿಗೆ ಸೋಲಿನ ರುಚಿ!

ಮುಂಬೈ ಹಾಗೂ ಚೆನ್ನೈ ತಂಡಗಳನ್ನ ಬಗ್ಗು ಬಡೆದಿದ್ದ ಸನ್ ರೈಸರ್ಸ್​ಗೆ ಸಹಜವಾಗೇ ಆರ್​ಸಿಬಿ ಎದುರು ಗೆಲ್ಲೋ ಚಾಲೆಂಜ್ ಇತ್ತು. ಆದ್ರೆ, ಈ ಚಾಲೆಂಜ್​​ನಲ್ಲಿ ಆಕ್ಷರಶಃ ವಿಶ್ವರೂಪವನ್ನೇ ಪ್ರದರ್ಶಿಸಿದ ಸನ್ ರೈಸರ್ಸ್​, ಚಿನ್ನಸ್ವಾಮಿಯಲ್ಲಿ ಜಯಭೇರಿ ಬಾರಿಸಿತು. ಇದರೊಂದಿಗೆ ಧೋನಿ, ರೋಹಿತ್ , ವಿರಾಟ್ ಕೊಹ್ಲಿಯವರನ್ನ ಒಳಗೊಂಡ ದಿಗ್ಗಜ ತಂಡಗಳನ್ನ ಬಗ್ಗು ಬಡೆದ ಸಾಧನೆ ಮಾಡಿತು. ​

ಇದನ್ನೂ ಓದಿ: ಉಡುಪಿಯಲ್ಲಿ ಹೃದಯ ವಿದ್ರಾವಕ ಘಟನೆ; ವೋಟ್ ಮಾಡಿದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ಹಿರಿಯ ಜೀವ

ಮಂಕಾಗಿದ್ದ SRH​ನಲ್ಲಿ ಅಟ್ಯಾಕಿಂಗ್ ಅಪ್ರೋಚ್

2021 ರಿಂದ 2023ರ ಅವಧಿ.. ಈ ಅವಧಿಯಲ್ಲಿ ಸನ್ ರೈಸರ್ಸ್​ ನಿಜಕ್ಕೂ ಮಕಾಡೆ ಮಲಗಿತ್ತು. 2021ರಲ್ಲಿ ಕೊನೆ ಸ್ಥಾನಕ್ಕೆ ಜಾರಿದ್ದ ಹೈದ್ರಾಬಾದ್, 2022ರಲ್ಲಿ 8ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಇನ್ನು ಕಳೆದ ಸೀಸನ್​​ನಲ್ಲೂ ಹೀನಾಯ ಪ್ರದರ್ಶನ ನೀಡಿ ಕೊನೆ ಸ್ಥಾನಕ್ಕೆ ಸಿಮೀತವಾಗಿತ್ತು. ಹೀಗಾಗಿ ನಾಯಕತ್ವ ವಹಿಸಿಕೊಂಡ ಪ್ಯಾಟ್ ಕಮಿನ್ಸ್​, ಬಿಗ್ ಚಾಲೆಂಜ್​ ಇತ್ತು. ಇದನ್ನ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಬದುಕು ಎನ್ನುವುದು ಒಂದು ಅವಕಾಶ’.. ದ್ವಾರಕೀಶ್ ಅಂತಿಮ ದರ್ಶನ ಪಡೆದ ಬಳಿಕ ಯಶ್ ಹೇಳಿದ್ದೇನು? 

ತಂಡದ ಚುಕ್ಕಾಣಿ ಹಿಡಿದ ಬಳಿಕ ಅಗ್ರೆಸ್ಸಿವ್​ ಅಪ್ರೋಚ್​ ಅಸ್ತ್ರ ಪ್ರಯೋಗಿಸಿದ ಕಮಿನ್ಸ್, ಆನ್​ಫೀಲ್ಡ್​ನಲ್ಲಿ ಹೆಜ್ಜೆ ಹೆಜ್ಜೆಗೂ ತಂತ್ರಕ್ಕೆ ಪ್ರತಿತಂತ್ರ ರೂಪಿಸ್ತಿದ್ದಾರೆ. ಕ್ರೂಶಿಯಲ್ ಟೈಮ್​ನಲ್ಲಿ ತಾವೇ ದಾಳಿಗೆ ಇಳಿದು ವಿಕೆಟ್ ಬೇಟೆಯಾಡಿದ್ದಾರೆ. ಈ ಮೂಲಕ ಸಹ ಆಟಗಾರರ ಮೇಲಿನ ಫ್ರೆಶರ್ ರಿಲೀಫ್ ಮಾಡಿ, ಪರ್ಫಾಮೆನ್ಸ್​ ಹೊರ ತೆಗಿತಿದ್ದಾರೆ. ನಾಯಕನಾಗಿ ಟೆಸ್ಟ್ ಚಾಂಪಿಯನ್​​​​ ಶಿಪ್, ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿರುವ ಕಮಿನ್ಸ್​, ಈಗ ಐಪಿಎಲ್ ಟ್ರೋಫಿ ಗೆಲ್ಲಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ವಿರುದ್ಧ ಗೆದ್ದ ಮೇಲೆ ಐಪಿಎಲ್ ಟ್ರೋಫಿ ಗೆಲ್ಲೋ ಭರವಸೆ ಹೆಚ್ಚಾಯ್ತಾ.. SRHಗೆ ಪವರ್ ಯಾರು?

https://newsfirstlive.com/wp-content/uploads/2024/04/RCB_SRH-1.jpg

Load More