/newsfirstlive-kannada/media/post_attachments/wp-content/uploads/2024/10/Road-Cross.jpg)
ದುಬೈ ಅಂದರೆ ನೆನಪಾಗೋದೆ ಐಷಾರಾಮಿ ಜೀವನ, ಅಲ್ಲಿನ ರೂಲ್ಸ್. ಕಠಿಣ ಕಾನೂನಿಗೆ ಹೆಸರುವಾಸಿಯಾಗಿದೆ ದುಬೈ. ಇಲ್ಲಿ ಯಾರೇ ತಪ್ಪು ಮಾಡಿದ್ರೆ ದಂಡ ತೆರೆಬೇಕಾದ ನಿಯಮವಿದೆ. ಇನ್ನು ಟ್ರಾಫಿಕ್ಸ್ ರೂಲ್ಸ್ ಬಗ್ಗೆ ಹೇಳೋದೆ ಬೇಡ. ಅಪ್ಪಿ ತಪ್ಪಿ ನಿಯಮ ಪಾಲಿಸದೆ ಹೋದರೆ ತಕ್ಷಣವೇ ನೋಟಿಸ್ ಬರುತ್ತೆ. ಆದರೀಗ ಟ್ರಾಫಿಕ್ಸ್ ರೂಲ್ಸ್ಗೆ ಪಾದಚಾರಿಗಳು ತಲೆಕೆಡಿಸಿಕೊಂಡಿದ್ದಾರೆ. ರೂಲ್ಸ್ ಬ್ರೇಕ್ ಮಾಡಿದವರು ಕೂಡ ದಂಡ ತೆರೆಬೇಕಾದ ಪರಿಸ್ಥಿತಿಗೆ ಕಂಗೆಟ್ಟಿದ್ದಾರೆ.
ದುಬೈ ಪೊಲೀಸರು ನಿಯಮ ಮೀರಿ ರಸ್ತೆ ದಾಟಿದ ಮತ್ತು ಟ್ರಾಫಿಕ್ ಸಿಗ್ನಲ್ಗಳನ್ನು ನಿರ್ಲಕ್ಷಿಸಿದ 37 ಜನರಿಗೆ ದಂಡ ವಿಧಿಸಿದೆ. ಇದರಿಂದಾಗಿ ಅಲ್ಲಿನ ಪಾದಚಾರಿಗಳಿಗೆ ಸರಿಯಾದ ನಿಯಮ ಪಾಲಿಸುವಂತೆ ಹೆಚ್ಚು ಒತ್ತಡ ನೀಡಿದೆ. ಕಾರಣ ಅಪಘಾತ ತಡೆಯಲು ಈ ನಿಯಮವನ್ನು ಪಾಲಿಸುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಅಮ್ಮನನ್ನು ನೆನೆದಿದ್ದ ಕಿಚ್ಚ.. ಶೂಟಿಂಗ್ ಮುಗಿಸಿ ಆಸ್ಪತ್ರೆ ಓಡಿ ಹೋಗಿದ್ರು
ದುಬೈ ಸಂಚಾರ ನಿಯಮದ ಪ್ರಕಾರ, ಅನುಮತಿ ಇಲ್ಲದೆ ರಸ್ತೆ ದಾಟುವುದು, ಟ್ರಾಫಿಕ್ ಸಿಗ್ನಲ್ ರೂಲ್ಸ್ ಬ್ರೇಕ್ ಮಾಡುವುದು ಅಪಾಯ. ಒಂದು ವೇಳೆ ನಿಯಮ ಮೀರಿದರೆ 400 ಯುಎಇ ದಿರ್ಹಮ್ ದಂಡವನ್ನು ವಿಧಿಸಲಾಗುತ್ತದೆ.
ಜೆ-ವಾಕಿಂಗ್ ಮಾಡಿದ್ರೆ ಬೀಳುತ್ತೆ ದಂಡ
ಜೆ-ವಾಕಿಂಗ್ ಅಂದ್ರೆ ಅನುಮತಿ ಅಥವಾ ಗೊತ್ತುಪಡಿಸಿದ ಸ್ಥಳದಲ್ಲಿ ರಸ್ತೆ ದಾಟುವಂತಿಲ್ಲ. ಪಾದಚಾರಿಗಳು ಟ್ರಾಫಿಕ್ ಸಿಗ್ನಲ್, ಜೀಬ್ರಾ ಕ್ರಾಸಿಂಗ್ ಅನ್ನು ನಿರ್ಲಕ್ಷಿಸಿದರೆ ಅಥವಾ ಅನುಮತಿಸದ ಸ್ಥಳದಲ್ಲಿ ರಸ್ತೆ ದಾಟುವಂತಿಲ್ಲ.
ಇದನ್ನೂ ಓದಿ: ಕಾವಿ ತೊಟ್ಟಿಲ್ಲ, ಮಠ ಕಟ್ಟಿಲ್ಲ.. ಜಸ್ಟ್ ಮುಟ್ಟಿದ್ರೆ ಎಲ್ಲಾ ನೋವು ಮಾಯ! ಇದು ‘ಚಡ್ಡಿ ಬಾಬಾ’ನ ಪವಾಡ
ಕಳೆದ ವರ್ಷ ನಿಯಮ ಮೀರಿದ ರಸ್ತೆ ದಾಟಿದ 8 ಪಾದಚಾರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. 339 ಜನರು ಗಾಯಗೊಂಡಿದ್ದಾರೆ. 2023ರಲ್ಲಿ ಜೆ-ವಾಕಿಂಗ್ ಮಾಡಿದ 44,000ಕ್ಕೂ ಹೆಚ್ಚು ಪಾದಚಾರಿಗಳಿಗೆ ದಂಡ ವಿಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ