/newsfirstlive-kannada/media/post_attachments/wp-content/uploads/2024/05/ANANTH_AMBANI.jpg)
ಮುಖೇಶ್​ ಅಂಬಾನಿ ಭಾರತದ ಅಗರ್ಭ ಶ್ರೀಮಂತರಾಗಿದ್ದು ಅವರ ಕುಟುಂಬ ಅದ್ಧೂರಿ ಜೀವನಶೈಲಿ ಮತ್ತು ಐಷಾರಾಮಿಯಿಂದ ಯಾವಾಗಲೂ ಗಮನ ಸೆಳೆಯುತ್ತಿರುತ್ತದೆ. ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಸೇರಿ ಸದ್ಯದಲ್ಲೇ ಹಸೆಮಣೆ ಏರಲಿರೋ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ಗೆ ಅತ್ಯಂತ ದುಬಾರಿ ಬೆಲೆಯ ಗಿಫ್ಟ್​ಗಳನ್ನ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮುಕೇಶ್ ಹಾಗೂ ನೀತಾ ಅಂಬಾನಿ ಸೇರಿ ತಮ್ಮ ಕಿರಿಯ ಮಗ ಅನಂತ್ ಅಂಬಾನಿಗೆ ದುಬೈನಲ್ಲಿರುವ ಪಾಮ್ ಜುಮೇರಾದಲ್ಲಿನ 640 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬೀಚ್ ವಿಲ್ಲಾವನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಅನಂತ್ ಅಂಬಾನಿ 2023ರಲ್ಲಿ ಎಂಗೇಜ್ಮೆಂಟ್​​ಗೂ ಮೊದಲು 4.5 ಕೋಟಿ ರೂಪಾಯಿ ಮೌಲ್ಯದ ದುಬಾರಿ ಕಾರು ಬೆಂಟ್ಲಿ ಕಾಂಟಿನೆಂಟಲ್ GTCಯನ್ನು ತಂದೆ, ತಾಯಿಯಿಂದ ಗಿಫ್ಟ್​ ಆಗಿ ಪಡೆದುಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ಬಸ್ ಪಲ್ಟಿ.. ಹೊನ್ನಾವರ ಘಾಟಿ ಬಳಿ ಭೀಕರ ಅಪಘಾತ; 80 ಮಂದಿಯಲ್ಲಿ ಹಲವರ ಕೈ, ಕಾಲು ಕಟ್
/newsfirstlive-kannada/media/post_attachments/wp-content/uploads/2024/05/AMBANI.jpg)
ಭಾವಿ ಸೊಸೆಗೆ ಉಡುಗೊರೆ
2022ರಲ್ಲಿ ನೀತಾ ಅಂಬಾನಿಯವರು ರಾಧಿಕಾ ಮರ್ಚೆಂಟ್ ತನ್ನ ಸೊಸೆ ಆಗುತ್ತಾರೆ ಎಂದು ತಿಳಿಯುತ್ತಿದ್ದಂತೆ ಮುತ್ತು ಹವಳ, ವಜ್ರದಿಂದ ಮಾಡಿದಂತ ನಕ್ಲೇಸ್​ ಅನ್ನು ಭಾವಿ ಸೊಸೆಗೆ ಉಡುಗೊರೆಯಾಗಿ ನೀಡಿದ್ದರು. ಇದನ್ನು ಧರಿಸಿಕೊಂಡು ರಾಧಿಕಾ ಮರ್ಚೆಂಟ್ ಬಾಲಿವುಡ್​ನ ಸೋನಂ ಕಪೂರ್ ಅವರ ಆರತಕ್ಷತೆಗೆ ಬಂದಿದ್ದರು. ಈ ವೇಳೆ ಎಲ್ಲರ ಕಣ್ಣು ಆ ಡೈಮೆಂಡ್​ ನಕ್ಲೇಸ್ ಮೇಲೆಯೇ ಇತ್ತು ಎನ್ನುವುದು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ:ಬಿಸಿಲಿನ ತಾಪಮಾನ; ರಾಯಚೂರನ್ನೇ ಸೈಡ್ ಮಾಡಿದ ಮಂಡ್ಯ.. ಎಷ್ಟು ಡಿಗ್ರಿ ಸೆಲ್ಸಿಯಸ್​ ದಾಖಲಾಯ್ತು?
2019 ರಲ್ಲಿ ಮುಕೇಶ್ ಅಂಬಾನಿಯ ಹಿರಿಯ ಮಗ ಆಕಾಶ್​ ಅಂಬಾನಿ ಶ್ಲೋಕಾಳನ್ನು ವಿವಾಹವಾದಾಗ 451 ಕೋಟಿ ರೂಪಾಯಿ ಮೌಲ್ಯದ ವಜ್ರದ ನೆಕ್ಲೇಸ್ ಅನ್ನು ಗಿಫ್ಟ್​ ಆಗಿ ನೀಡಿದ್ದರು. ಆದರೆ ಇದೀಗ ಅನಂತ್ ಅಂಬಾನಿಯ ಮದುವೆ ಹಲವು ದಿನಗಳಲ್ಲಿ ನಡೆಯಲಿದೆ. ಇದಕ್ಕಿಂತ ಮೊದಲೇ 640 ಕೋಟಿ ರೂಪಾಯಿಯ ದುಬೈ ವಿಲ್ಲಾ ಕೊಡಲು ಮುಂದಾಗಿರುವುದು ಎಲ್ಲರ ಹುಬ್ಬೇರಿಸಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us