newsfirstkannada.com

ಬ್ರೇಕ್ ಫೇಲ್ ಆಗಿ ಬಸ್‌ ಪಲ್ಟಿ.. ಹೊನ್ನಾವರ ಘಾಟಿ ಬಳಿ ಭೀಕರ ಅಪಘಾತ; 80 ಮಂದಿಯಲ್ಲಿ ಹಲವರ ಕೈ, ಕಾಲು ಕಟ್

Share :

Published May 3, 2024 at 7:46pm

Update May 3, 2024 at 7:47pm

  ಕ್ರಾಸ್​ನಲ್ಲಿ ಬಸ್ ಪಲ್ಟಿಯಾದ ಪರಿಣಾಮ ಹಲವರಿಗೆ ಗಂಭೀರ ಗಾಯ

  ಪ್ರವಾಸಕ್ಕೆ ಬಂದಿದ್ದ ಗ್ರಾಮಸ್ಥರ ಬಂಸ್​ವೊಂದು ಪಲ್ಟಿಯಾಗಿ ಅಪಘಾತ

  ಜೋಗ ಜಲಪಾತ ಮುಗಿಸಿ, ಗೋಕರ್ಣ ಕಡೆಗೆ ಹೊರಟಿದ್ದ ಪ್ರವಾಸಿಗರು

ಶಿವಮೊಗ್ಗ: ಬ್ರೇಕ್​ ಫೇಲ್ ಆಗಿದ್ದರಿಂದ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಶಿವಮೊಗ್ಗ -ಉತ್ತರ ಕನ್ನಡ ಜಿಲ್ಲೆಯ ಗಡಿಭಾಗ ಗೇರುಸೊಪ್ಪ ಸಮೀಪದ ಸುಳಿಮಕ್ಕಿ ಕ್ರಾಸ್​ನಲ್ಲಿ ನಡೆದಿದೆ.

ಪ್ರವಾಸಕ್ಕೆಂದು 2 ಬಸ್​ನಲ್ಲಿ ಬಂದಿದ್ದ ಗೌರಿಬಿದನೂರು ತಾಲೂಕಿನ ಗದರೆ- ಮಲಸಂದ್ರದ ಗ್ರಾಮಸ್ಥರು ಜೋಗ ಜಲಪಾತ ನೋಡಿಕೊಂಡು ಗೇರುಸೊಪ್ಪದಿಂದ ಹೊನ್ನಾವರ ಕಡೆಗೆ ಹೊರಟಿದ್ದರು. ಈ ವೇಳೆ ಗೇರುಸೊಪ್ಪ ಸಮೀಪದ ಸುಳಿಮಕ್ಕಿ ಕ್ರಾಸ್ ಬಳಿ ಬರುತ್ತಿದ್ದಂತೆ ಒಂದು ಬಸ್​ನ ಬ್ರೇಕ್ ಫೇಲ್ ಆಗಿದ್ದು ಪಲ್ಟಿಯಾಗಿದೆ. ಇದರ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯ, ಮೈಸೂರಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ವರುಣನ ಅಬ್ಬರಕ್ಕೆ ಜನ ಶಾಕ್; ಎಲ್ಲೆಲ್ಲಿ ಏನಾಯ್ತು?

ಇದನ್ನೂ ಓದಿ: ಯಶ್​ ಟಾಕ್ಸಿಕ್​​ನಿಂದ ಬಾಲಿವುಡ್​ ಬ್ಯೂಟಿ ಔಟ್​.. ಕರೀನಾ ಹೊರ ಬರಲು ಕಾರಣ?

ಸದ್ಯ ಘಟನೆಯಲ್ಲಿ ಹಲವರ ಕೈಕಾಲು ಕಟ್ ಆಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್​ನಲ್ಲಿ ಒಟ್ಟು 80 ಪ್ರಯಾಣಿಕರು ಇದ್ದರು. ಒಂದೇ ಬಸ್​ ಅಪಘಾತಕ್ಕೆ ಈಡಾಗಿದ್ದರಿಂದ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೋಗ ಜಲಪಾತ ಮುಗಿಸಿ, ಗ್ರಾಮಸ್ಥರು ಗೋಕರ್ಣಕ್ಕೆ ಹೊರಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರೇಕ್ ಫೇಲ್ ಆಗಿ ಬಸ್‌ ಪಲ್ಟಿ.. ಹೊನ್ನಾವರ ಘಾಟಿ ಬಳಿ ಭೀಕರ ಅಪಘಾತ; 80 ಮಂದಿಯಲ್ಲಿ ಹಲವರ ಕೈ, ಕಾಲು ಕಟ್

https://newsfirstlive.com/wp-content/uploads/2024/05/SMG_BUS.jpg

Load More