newsfirstkannada.com

ಯಶ್​ ಟಾಕ್ಸಿಕ್​​ನಿಂದ ಬಾಲಿವುಡ್​ ಬ್ಯೂಟಿ ಔಟ್​.. ಕರೀನಾ ಹೊರ ಬರಲು ಕಾರಣ?

Share :

Published May 3, 2024 at 6:04pm

    ಟಾಕ್ಸಿಕ್ ಸಿನಿಮಾ ನಿರ್ದೇಶನ ಮಾಡುತ್ತಿರೋ ಗೀತು ಮೋಹನ್

    KGF- 2 ಬಳಿಕ ಯಶ್ ಅಭಿನಯ ಮಾಡುತ್ತಿರೋ ಸಿನಿಮಾವಿದು

    ಚಿತ್ರತಂಡದಿಂದ ಬಾಲಿವುಡ್ ಚೆಲುವೆ ಹೊರಗೆ ಬಂದಿದ್ದು ಯಾಕೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಸಿನಿಮಾ ಸಖತ್ ಹವಾ ಕ್ರಿಯೇಟ್ ಮಾಡುತ್ತಿದೆ. ಕೆಜಿಎಫ್- 2 ಬಳಿಕ ಯಶ್ ತಮ್ಮ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಕೆವಿಎನ್​ ನಿರ್ಮಾಣದಲ್ಲಿ ತಯಾರಾಗ್ತಿರುವ ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಡೈರೆಕ್ಟ್ ಮಾಡುತ್ತಿದ್ದಾರೆ. ಸದ್ಯ ಇದೀಗ ಬಿಗ್ ಅಪ್​ಡೇಟ್​ ಒಂದು ಸಿಕ್ಕಿದ್ದು ಯಶ್​ಗೆ ಬಾಲಿವುಡ್​ ಬ್ಯೂಟಿ ಜೋಡಿ ಆಗಲ್ವಂತೆ.

ಟಾಕ್ಸಿಕ್​ನಲ್ಲಿ ಯಶ್​ ಜೋತೆಗೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕರೀನಾ ಕಪೂರ್ ಅವರು ಟಾಕ್ಸಿಕ್​ ಸಿನಿಮಾ ತಂಡದಿಂದ ಹೊರ ಬಂದಿದ್ದಾರೆ. ಸಿನಿಮಾಕ್ಕಾಗಿ ಶೂಟಿಂಗ್ ಮಾಡಲು ಡೇಟ್ಸ್ ಸರಿಯಾಗಿ ಹೊಂದಿಕೆ ಆಗದ ಕಾರಣ ಚೆಲುವೆ ಟಾಕ್ಸಿಕ್​ನಲ್ಲಿ ಅಭಿನಯ ಮಾಡುತ್ತಿಲ್ಲ. ಈ ಮೂಲಕ ಕರೀನಾ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದ, ಪ್ರಾಜೆಕ್ಟ್ ಅವರ ಕೈ ಬಿಟ್ಟು ಹೋಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಂಡ್ಯ, ಮೈಸೂರಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ವರುಣನ ಅಬ್ಬರಕ್ಕೆ ಜನ ಶಾಕ್; ಎಲ್ಲೆಲ್ಲಿ ಏನಾಯ್ತು? 

ಇದನ್ನೂ ಓದಿ: ಸಿಲಿಕಾನ್​ ಸಿಟಿಗೆ ತಂಪೆರೆದ ವರುಣ.. ಇಂದು ರಾತ್ರಿ ಭರ್ಜರಿ ಮಳೆ ಬೀಳುವ ಸಾಧ್ಯತೆ

ಇನ್ನು ಬಾಲಿವುಡ್ ಚೆಲುವೆ ಕರೀನಾ ಕಪೂರ್ ಅವರು ಈ ಹಿಂದೆ ಯಶ್​ ತಮ್ಮ ಫೇವರಿಟ್ ನಟ ಎಂದು ಹೇಳಿಕೊಂಡಿದ್ದರು. ಅಂದ ಹಾಗೆಯೇ ಇದು ಗ್ಯಾಂಗ್​ಸ್ಟರ್​ ಸಿನಿಮಾ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಟಾಕ್ಸಿಕ್​ ಚಿತ್ರದಲ್ಲಿ ಕರೀನಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಸಿನಿಮಾದಲ್ಲಿ ಯಾವ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನುವುದು ಚಿತ್ರ ತಂಡ ಬಹಿರಂಗ ಪಡಿಸಿರಲಿಲ್ಲ. ಆದರೆ ಈಗ ಟಾಕ್ಸಿಕ್​​ನಿಂದಲೇ ಕರೀನಾ ದೂರ ಸರಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಶ್​ ಟಾಕ್ಸಿಕ್​​ನಿಂದ ಬಾಲಿವುಡ್​ ಬ್ಯೂಟಿ ಔಟ್​.. ಕರೀನಾ ಹೊರ ಬರಲು ಕಾರಣ?

https://newsfirstlive.com/wp-content/uploads/2024/05/YASH_KAREENA.jpg

Load More