newsfirstkannada.com

ಮಂಡ್ಯ, ಮೈಸೂರಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ವರುಣನ ಅಬ್ಬರಕ್ಕೆ ಜನ ಶಾಕ್; ಎಲ್ಲೆಲ್ಲಿ ಏನಾಯ್ತು?

Share :

Published May 3, 2024 at 5:30pm

    ನಗರದಲ್ಲಿ ದಿಢೀರ್ ಮಳೆಯಿಂದ ದ್ವಿಚಕ್ರ ವಾಹನ ಸವಾರರು ಪರದಾಟ

    ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ವರುಣರಾಯ ಆರ್ಭಟಿಸ್ತಿದ್ದಾನೆ ಗೊತ್ತಾ?

    ಬಹಳ ದಿನಗಳಿಂದ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಈಗ ಭಾರೀ ಸಂತಸ

ಕೋಲಾರ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಬಿಸಿಲಿನಿ ಬೆಗೆಯಿಂದ ಬೆಂದ ಬೆಂಗಳೂರು ಜನರಿಗೆ ತುಂತುರು ಮಳೆ ಹಾಯ್ ಹೇಳಿದ್ದರಿಂದ ಖುಷಿಯಾಗಿದ್ದಾರೆ. ಇನ್ನು ಕೋಲಾರದ ಹಲವೆಡೆ ಗುಡುಗು ಸಮೇತ ಧಾರಾಕಾರ ಮಳೆಯಾಗುತ್ತಿದ್ದು ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿಯಲ್ಲಿ ಸಿಡಿಲು ಬಡಿದು 1 ಲಕ್ಷ ಮೌಲ್ಯದ 2 ಹಸುಗಳು ಸಾವನ್ನಪ್ಪಿವೆ.

ತಾಲೂಕಿನ ದೇಶಿಹಳ್ಳಿಯ ರವಿಕಿರಣ್ ಎಂಬುವರ 1 ಲಕ್ಷ ರೂಪಾಯಿ ಮೌಲ್ಯದ 2 ಹಸುಗಳು ಸಿಡಿಲು ಬಡಿದು ಮೃತಪಟ್ಟಿವೆ. ಇವುಗಳನ್ನು ಹೊಲದಲ್ಲಿ ಕಟ್ಟಿ ಹಾಕಿದ್ದಾಗ ಗುಡುಗು ಸಮೇತ ಮಳೆ ಸುರಿದಿದ್ದು ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿವೆ. ಇದರಿಂದ ಮಾಲೀಕ ಕಂಗಾಲಾಗಿದ್ದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿಲಿಕಾನ್​ ಸಿಟಿಗೆ ತಂಪೆರೆದ ವರುಣ.. ಇಂದು ರಾತ್ರಿ ಭರ್ಜರಿ ಮಳೆ ಬೀಳುವ ಸಾಧ್ಯತೆ

ಇದನ್ನೂ ಓದಿ: ಅಮೇಥಿ ಬಿಟ್ಟು ರಾಯ್​ಬರೇಲಿ ಅಖಾಡಕ್ಕಿಳಿದ ರಾಹುಲ್ ಗಾಂಧಿ; ಕಾಂಗ್ರೆಸ್ ಮೆಗಾ ಪ್ಲಾನ್ ಏನು?

ಮಂಡ್ಯ
ಇಷ್ಟು ದಿನ ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಸಕ್ಕರೆ ನಾಡಿನಲ್ಲಿ ಗುಡುಗು-ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಕಳೆದ ಅರ್ಧ ಗಂಟೆಯಿಂದ‌ ಸುರಿಯುತ್ತಿದ್ದು ಮಂಡ್ಯ ನಗರ, ಮಳವಳ್ಳಿ ಹಾಗೂ ಸುತ್ತಮುತ್ತಾಲಿನ  ಪ್ರದೇಶಗಳಲ್ಲಿ ಮಳೆ ಬರುತ್ತಿದೆ. ಮಳೆಯಿಂದ ರೈತರು ಮುಖದಲ್ಲಿ ಮಂದಹಾಸ ಮೂಡಿದೆ.

ಮೈಸೂರು

ಆಲಿಕಲ್ಲು ಸಮೇತ ದಿಢೀರ್ ಎಂದು ಧಾರಾಕಾರವಾಗಿ ವರುಣರಾಯ ಆರ್ಭಟಿಸುತ್ತಿದ್ದು ಮೈಸೂರಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಹಲವು ದಿನಗಳಿಂದ ರಣ ಬಿಸಿಲಿನಿಂದ‌ ಬಸವಳಿದಿದ್ದ ಅರಮನೆ ನಗರಿಯ ಜನರಿಗೆ ಮಳೆ ಕೂಲ್.. ಕೂಲ್ ಮಾಡಿದೆ. ದಿಢೀರ್ ಮಳೆಯಿಂದ ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದವರು ಮಳೆಯಲ್ಲಿ ಸಿಲುಕಿ ಪರದಾಡಿದ್ದಾರೆ. ನರಸೀಪುರ ತಾಲೂಕಿನ ಹಲವೆಡೆ ಧಾರಾಕಾರವಾಗಿ ಮಳೆ ಉಯ್ಯುತ್ತಿದ್ದು ಆಲಿಕಲ್ಲು ಕೂಡ ಬಿದ್ದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ, ಮೈಸೂರಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ವರುಣನ ಅಬ್ಬರಕ್ಕೆ ಜನ ಶಾಕ್; ಎಲ್ಲೆಲ್ಲಿ ಏನಾಯ್ತು?

https://newsfirstlive.com/wp-content/uploads/2024/05/RAIN_NEW_1.jpg

Load More