newsfirstkannada.com

ಶಾಕಿಂಗ್ ನ್ಯೂಸ್‌.. ಬೇಸಿಗೆಯಲ್ಲಿ 20 ಲಕ್ಷ ಕಿಡ್ನಿ ಸಮಸ್ಯೆಯ ಕೇಸ್ ದಾಖಲು; ಅಪಾಯ ಗ್ಯಾರಂಟಿ!

Share :

Published May 1, 2024 at 12:35pm

    20 ರಿಂದ 40 ವರ್ಷದವರಲ್ಲೇ ಕಿಡ್ನಿ ಸ್ಟೋನ್‌ ಕಾಣಿಸಿಕೊಳ್ಳುವ ಕೇಸ್‌!

    ಬಿಸಿಲಿಗೆ ಬೆವರು, ನೀರಿನಾಂಶದ ಕೊರತೆಯಿಂದ ಕಿಡ್ನಿ ಸ್ಟೋನ್ ಹೆಚ್ಚಳ

    ಬಿಸಿಲು ಹೆಚ್ಚಾದಂತೆ ಪುರುಷರಲ್ಲಿ ಕಿಡ್ನಿ ಸ್ಟೋನ್‌ ಹೆಚ್ಚಾಗಿ ಕಾಣಿಸುತ್ತಿದೆ

ಬೆಂಗಳೂರು: ದೇಶಾದ್ಯಂತ ಬೇಸಿಗೆ ಬಿಸಿ ಎಷ್ಟಿದೆ ಅಂದ್ರೆ ನೆತ್ತಿ ಸುಡುವ ಬಿಸಿಲು ಆತಂಕವನ್ನು ಸೃಷ್ಟಿಸುತ್ತಿದೆ. ತಾಪಮಾನ ಏರಿಕೆಯಿಂದ ಹಲವು ಆರೋಗ್ಯ ಸಮಸ್ಯೆಗಳ ಜೊತೆಗೆ ಕಿಡ್ನಿ ಸಮಸ್ಯೆ ಪ್ರಕರಣ ದುಪ್ಪಟ್ಟಾಗಿದೆ. ಅದರಲ್ಲೂ ಮಹಿಳೆಯರಿಗಿಂತ ಪುರುಷರಲ್ಲಿ ಕಿಡ್ನಿ ಸಮಸ್ಯೆ ಮೂರು ಪಟ್ಟು ಹೆಚ್ಚಾಗಿರುವ ವರದಿಯಾಗಿದೆ.

ಹೌದು.. ಸಾಮಾನ್ಯ ಅವಧಿಗಿಂತ ಬೇಸಿಗೆಯಲ್ಲಿ ದೇಶಾದ್ಯಂತ ಶೇಕಡಾ 40ರಷ್ಟು ಕಿಡ್ನಿ ಸಮಸ್ಯೆಗೆ ಬಳಲುವವರ ಪ್ರಕರಣ ಹೆಚ್ಚಾಗಿದೆ. ಸುಮಾರು 10 ರಿಂದ 20 ಲಕ್ಷ ಕಿಡ್ನಿ ಸಮಸ್ಯೆಯ ಕೇಸ್ ದಾಖಲಾಗಿದೆ. 20 ರಿಂದ 40 ವರ್ಷದವರಲ್ಲೇ ಕಿಡ್ನಿ ಸ್ಟೋನ್‌ ಕಾಣಿಸಿಕೊಳ್ಳುವ ಕೇಸ್‌ ಜಾಸ್ತಿಯಾಗಿದೆ. ಬಿಸಿಲಿಗೆ ಬೆವರು, ನೀರಿನಾಂಶದ ಕೊರತೆಯಿಂದ ಮೂತ್ರದಲ್ಲಿ ಸೋಂಕು ಹಾಗೂ ಕಿಡ್ನಿ ಸ್ಟೋನ್‌ ಪ್ರಕರಣ ಹೆಚ್ಚಳವಾಗಿದೆ. ತಾಪಮಾನ ಏರಿಕೆಯು ಜನರಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಪ್ರಿಯತಮೆ ಜೊತೆ ಗೆಳತನ‌ ಬೆಳಸಿ ಚಾಟ್.. ಯುವಕನ ಬಲಗೈ ಹೆಬ್ಬೆರಳು, ಎಡಗೈನ ಮುಂಗೈ ತುಂಡರಿಸಿದ ಪ್ರಿಯಕರ

ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್‌ಗೆ ಕಾರಣಗಳೇನು?
ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್‌ ಉಂಟಾಗಲು ಪ್ರಮುಖ ಕಾರಣವೆಂದರೆ ದೇಹದಲ್ಲಿನ ನಿರ್ಜಲೀಕರಣ. ಮನುಷ್ಯನ ದೇಹಕ್ಕೆ ದಿನವೊಂದಕ್ಕೆ 2 ರಿಂದ 3 ಲೀಟರ್‌ ನೀರು ಅಗತ್ಯವಾಗಿದೆ. ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಹೋಗುವ ಜತೆಗೆ ದೇಹದಲ್ಲಿರುವ ನೀರಿನ ಅಂಶವನ್ನು ಕಸಿದುಕೊಳ್ಳುತ್ತದೆ. ಇದು ನೇರವಾಗಿ ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತದೆ.

ಮೂತ್ರದಿಂದ ಫಿಲ್ಟರ್‌ ಮಾಡಲಾದ ಕ್ಯಾಲ್ಸಿಯಂ ಮತ್ತು ಇತರ ವಸ್ತುಗಳಿಂದ ಕಿಡ್ನಿ ಸ್ಟೋನ್‌ ರೂಪುಗೊಳ್ಳುತ್ತವೆ. ವಿಶೇಷವಾಗಿ ಮಹಿಳೆಯರಲ್ಲಿ ಉರಿ ಮೂತ್ರದ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಆದರೆ ಪುರುಷರಲ್ಲಿ ಕಿಡ್ನಿ ಸ್ಟೋನ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪ್ರತಿಯೊಬ್ಬರು ದಿನಕ್ಕೆ 2ರಿಂದ 3 ಲೀಟರ್‌ನಷ್ಟು ನೀರು ಅವಶ್ಯವಾಗಿ ಕುಡಿಯಬೇಕು. ಮೂತ್ರ ವಿಸರ್ಜನೆಯನ್ನು ತಡೆಯಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಕಿಂಗ್ ನ್ಯೂಸ್‌.. ಬೇಸಿಗೆಯಲ್ಲಿ 20 ಲಕ್ಷ ಕಿಡ್ನಿ ಸಮಸ್ಯೆಯ ಕೇಸ್ ದಾಖಲು; ಅಪಾಯ ಗ್ಯಾರಂಟಿ!

https://newsfirstlive.com/wp-content/uploads/2024/05/Heat-wave-Kidney-Problem.jpg

Load More