newsfirstkannada.com

ಪ್ರಿಯತಮೆ ಜೊತೆ ಗೆಳತನ‌ ಬೆಳಸಿ ಚಾಟ್.. ಯುವಕನ ಬಲಗೈ ಹೆಬ್ಬೆರಳು, ಎಡಗೈನ ಮುಂಗೈ ತುಂಡರಿಸಿದ ಪ್ರಿಯಕರ

Share :

Published May 1, 2024 at 11:33am

Update May 1, 2024 at 11:42am

  ಪ್ರಿಯಕರನ ಮಾರಣಾಂತಿಕ ಹಲ್ಲೆಗೆ ಬೆಚ್ಚಿಬಿದ್ದ ಬೆಂಗಳೂರು

  ವಾಟ್ಸ್​​ಆ್ಯಪ್ ಚಾಟ್ ನೋಡಿ ಕೋಪ.. ಅಂಥದ್ದು ಏನಿತ್ತು ಅದರಲ್ಲಿ?

  ಸ್ನೇಹಿತರಾಗಿದ್ದೇ ತಪ್ಪಾಗಿ ಹೋಯ್ತಾ? ಅಷ್ಟಕ್ಕೂ ಅಸಲಿಗೆ ಆಗಿದ್ದೇನು?

ಬೆಂಗಳೂರು: ಪ್ರಿಯತಮೆ ಜೊತೆಗೆ ಗೆಳತನ‌ ಬೆಳೆಸಿದ್ದ ಯುವಕನ ಮೇಲೆ ಪುಡಂಗನೊಬ್ಬ ಸ್ನೇಹಿತನ ಕರೆದುಕೊಂಡು ಬಂದು ಯದ್ವಾ-ತದ್ವಾ ಮಚ್ಚು ಬೀಸಿದ ಘಟನೆಗೆ ಬೆಂಗಳೂರು ಬೆಚ್ಚಿಬಿದ್ದಿದೆ. ನಗರದ ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್​ ಬಳಿ ಏಪ್ರಿಲ್ 28 ರಂದು ರಾತ್ರಿ 8.30ರ ಸುಮಾರಿಗೆ ಕೃತ್ಯ ನಡೆದಿದೆ.

ಮಚ್ಚಿನಿಂದ ಹಲ್ಲೆಯಾದ ಯುವಕನ ಸ್ಥಿತಿ ಗಂಭೀರವಾಗಿದೆ. ಬಲಗೈನ ಹೆಬ್ಬೆರಳು ಕಟ್ ಆಗಿದ್ದರೆ, ಎಡಗೈನ ಮುಂಗೈ ತುಂಡಾಗಿದೆ. ಬಿಕಾಂ ಪದವೀಧರ ಹರ್ಷಿತ್ ಎಂಬಾತನ ಮೇಲೆ ಮಚ್ಚು ಬೀಸಿದ್ದಾರೆ. ಶಶಾಂಕ್ ಹಾಗೂ ಹಾಗೂ ಚಂದನ್ ಆರೋಪಿಗಳಾಗಿದ್ದಾರೆ.

ಮಚ್ಚಿನೇಟಿಗೆ ಗಂಭೀರ ಗಾಯಗಳಾಗಿದ್ದರೂ ಹರ್ಷಿತ್, ರಸ್ತೆಯಿಂದ ಎದ್ದು ಬಂದು ಫುಟ್​ಪಾತ್ ಮೇಲೆ ಬಂದು ನಿಂತಿದ್ದ. ತುಂಡಾದ ಕೈಯನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೇಪರ್​ನಲ್ಲಿ ಲಾಂಗ್ ಸುತ್ತಿಕೊಂಡು ಬಂದಿದ್ದ ಆರೋಪಿಗಳು, ಹರ್ಷಿತ್ ಮೇಲೆ ಯದ್ವಾ ತದ್ವಾ ಮಚ್ಚು ಬೀಸಿದ್ದಾರೆ. ಸದ್ಯ ಆರೋಪಿಗಳನ್ನು ಶಂಕರಪುರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ:ಚಿನ್ನ, ಬೆಳ್ಳಿ, ದುಡ್ಡು ಕಳ್ಳತನ ಮಾಡಲಿಲ್ಲ.. ಇವರು ಕದ್ದಿರೋ ವಸ್ತು ಅಂತಿಂಥದ್ದು ಅಲ್ಲವೇ ಅಲ್ಲ..!

ಏನಿದು ಗಲಾಟೆ..?
ಹರ್ಷಿತ್, ಶಶಾಂಕ್ ಮತ್ತು ಚಂದನ್ ಮಧ್ಯೆ ದ್ವೇಷ ಬೆಳೆಯಲು ಕಾರಣ ಒಬ್ಬ ಯುವತಿ. ಬಿಕಾಂ ಮುಗಿಸಿದ್ದ ಹರ್ಷಿತ್ ಕೆಲಸಕ್ಕೆ ಹೋಗುತ್ತಿರಲಿಲ್ಲ. ತಮ್ಮ ತಂದೆಯ ಫ್ಲವರ್ ಡೆಕೊರೇಷನ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಅದೇ ಕಟ್ಟಡದಲ್ಲಿ ಒಂದು ಡಯೋಗ್ನಾಸ್ಟಿಕ್ ಸೆಂಟರ್ ಇದೆ. ಇಲ್ಲಿ ಓರ್ವ ಯುವತಿ ಕೆಲಸ ಮಾಡ್ತಿದ್ದಳು. ಒಮ್ಮೆ ಚಿಲ್ಲರೆ ಕೇಳಲು ಹೋಗಿ‌ ಬಂದಾಗ ಯುವತಿ ಮತ್ತು ಹರ್ಷಿತ್ ಮಧ್ಯೆ ಗೆಳೆತನ ಬೆಳೆದಿದೆ.

ಇದನ್ನೂ ಓದಿ: ಗ್ರಾಹಕರಿಗೆ ಗುಡ್​ ನ್ಯೂಸ್.. ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ಅದೇ ಗೆಳೆತನ ನಂಬರ್ ಎಕ್ಸ್​ಚೇಂಜ್ ಆಗಿ, ಚಾಟ್ ಮಾಡುವ ಹಂತಕ್ಕೆ ಬಂದಿತ್ತು. ಇತ್ತ ಆ ಯುವತಿಯನ್ನು ಶಶಾಂಕ್ ಪ್ರೀತಿ ಮಾಡುತ್ತಿದ್ದ. ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದು ಶಶಾಂಕ್​ಗೆ ಅನುಮಾನ ಬಂದಿತ್ತು. ಯುವತಿಯ ಮೊಬೈಲ್ ಪರಿಶೀಲನೆ ವೇಳೆ ಚಾಟ್ ಮಾಡಿರೋದು ಕಂಡು ಬಂದಿದೆ. ಇದರಿಂದ ಶಶಾಂಕ್ ಸಿಟ್ಟಿಗೆದ್ದಿದ್ದ. ಆದರೆ ಅದರಲ್ಲಿ ಕೇವಲ ಸ್ನೇಹಿತರ ರೀತಿಯಲ್ಲಿ ಮೆಸೇಜ್​​ಗಳಿದ್ದವು. ಆದರೆ ಅದನ್ನು‌ ಸಹಿಸಿಕೊಳ್ಳಲು ಶಶಾಂಕ್ ಸಿದ್ಧವಿರಲಿಲ್ಲ. ಹರ್ಷಿತ್​ಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದ್ದ.

ಅದರಂತೆ ಏಪ್ರಿಲ್ 28 ರಂದು ಸ್ನೇಹಿತ ಚಂದನ್​ನನ್ನು ಕರೆಸಿಕೊಂಡು ಬಾರ್​ನಲ್ಲಿ ಕುಡಿದಿದ್ದಾನೆ. ಕೊನೆಗೆ ಲಾಂಗ್ ಜೊತೆಗೆ ಬೈಕ್​​ನಲ್ಲಿ ಹರ್ಷಿತ್ ಅಂಗಡಿಗೆ ಬಂದಿದ್ದಾನೆ. ಬಂದವರೇ ಲಾಂಗ್​ನಿಂದ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ. ತಕ್ಷಣ ಹರ್ಷಿತ್​ನನ್ನು ಪಕ್ಕದಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಆರೋಪಿಗಳನ್ನು ಬಂಧಿಸಿರುವ ಶಂಕರಪುರ ಪೊಲೀಸರು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ:ಭಾರೀ ಮಳೆಗೆ ಕುಸಿದ ಅಣೆಕಟ್ಟು.. ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ.. ಪ್ರವಾಹ ಹೋದಲೆಲ್ಲ ನರಕದರ್ಶನ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿಯತಮೆ ಜೊತೆ ಗೆಳತನ‌ ಬೆಳಸಿ ಚಾಟ್.. ಯುವಕನ ಬಲಗೈ ಹೆಬ್ಬೆರಳು, ಎಡಗೈನ ಮುಂಗೈ ತುಂಡರಿಸಿದ ಪ್ರಿಯಕರ

https://newsfirstlive.com/wp-content/uploads/2024/05/BNG-GIRL-FIEND-1.jpg

Load More