Advertisment

ಇನ್ನೂ ಬುದ್ಧಿ ಕಲಿಯದ IPL ಸ್ಟಾರ್; ಗಾಯಕ್ವಾಡ್​ಗೆ ಅವಮಾನ ಮಾಡಿದ ಬೌಲರ್..!

author-image
Ganesh
Updated On
ಭಾರತ- ಬಾಂಗ್ಲಾ T20 ಪಂದ್ಯ ನಡೆಯೋದು ಡೌಟ್.. ಕೊನೆ ಮ್ಯಾಚ್​ಗೆ ಎಂಟ್ರಿ ಆಗುತ್ತಾ ಮಳೆ?
Advertisment
  • ನಿನ್ನೆಯಿಂದ ದುಲೀಪ್ ಟ್ರೋಫಿ ಟೂರ್ನಿ ಆರಂಭವಾಗಿದೆ
  • ಭಾರತದ ಡಿ ತಂಡದಲ್ಲಿ ಆಡುತ್ತಿರುವ ಹರ್ಷಿತ್ ರಾಣಾ
  • ಕಳೆದ ಐಪಿಎಲ್​ನಲ್ಲಿ ಭಾರೀ ಪ್ರಮಾಣದಲ್ಲಿ ಬಿದ್ದಿತ್ತು ದಂಡ

ಐಪಿಎಲ್ ಸ್ಟಾರ್​ ಹರ್ಷಿತ್ ರಾಣಾ ದುಲೀಪ್ ಟ್ರೋಫಿಯಲ್ಲಿ ಭಾರತ ಡಿ ಪರ ಆಡುತ್ತಿದ್ದಾರೆ. 2024ರ ಐಪಿಎಲ್​ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ರಾಣಾ ಮತ್ತೆ ಅದೇ ತಪ್ಪು ಮಾಡಿ ಸುದ್ದಿಯಾಗಿದ್ದಾರೆ.

Advertisment

ದುಲೀಪ್ ಟ್ರೋಫಿಯಲ್ಲಿ ಭಾರತ ಸಿ ತಂಡದ ನಾಯಕ ಋತುರಾಜ್ ಗಾಯಕ್ವಾಡ್​ಗೆ ಆಕ್ಷೇಪಾರ್ಹ ಸನ್ನೆ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ದುಲೀಪ್ ಟ್ರೋಫಿಯಲ್ಲಿ ಹರ್ಷಿತ್ ಐಪಿಎಲ್‌ನಂತೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಐಪಿಎಲ್ 2024ರಲ್ಲಿ, ಹರ್ಷಿತ್ ರಾಣಾ, ಮಯಾಂಕ್ ಅಗರ್ವಾಲ್‌ಗೆ ಫ್ಲೈಯಿಂಗ್ ಕಿಸ್ ನೀಡಿ ವಿವಾದಕ್ಕೆ ಕಾರಣರಾಗಿದ್ದರು. ಇದೇ ವಿಚಾರದಲ್ಲಿ ಭಾರೀ ಪ್ರಮಾಣದಲ್ಲಿ ದಂಡ ತುಂಬಿದ್ದರು. ಇದೀಗ ಗಾಯಕ್ವಾಡ್​ಗೆ ಫ್ಲೈಯಿಂಗ್ ಕಿಸ್ ಕೊಟ್ಟು ಯಡವಟ್ಟು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ದುಲೀಪ್​ ಟ್ರೋಫಿಯಲ್ಲಿ ಮುಷೀರ್​​ ಶತಕ ವೈಭವ; ಪಡಿಕ್ಕಲ್ ಹಿಂಗೆ ಆಡಿದ್ರೆ RCB ಕ್ಯಾರೇ ಮಾಡಲ್ಲ..!

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಹರ್ಷಿತ್ ರಾಣಾ ಬೌಲಿಂಗ್​ಗೆ ಗಾಯಕ್ವಾಡ್​ ಸ್ಪಿಪ್​ನಲ್ಲಿ ಕ್ಯಾಚ್ ನೀಡಿದ್ದಾರೆ. ಔಟ್ ಆಗ್ತಿದ್ದ ಸಿಗ್ನೇಚರ್ ಸ್ಟೈಲ್​ನಲ್ಲಿ ಫ್ಲೆಯಿಂಗ್ ಕಿಸ್ ನೀಡಿದ್ದಾರೆ. ಹರ್ಷಿತ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಭಾಗವಾಗಿದ್ದಾರೆ.

Advertisment

https://twitter.com/bill_gill76078/status/1831631094677926241

ಅದ್ಭುತ ಬೌಲಿಂಗ್
ಇಂಡಿಯಾ ಡಿ ಪರ ಆಡ್ತಿರುವ ಹರ್ಷಿತ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ನಿನ್ನೆ 7 ಓವರ್ ಬೌಲ್ ಮಾಡಿ 2 ವಿಕೆಟ್ ಪಡೆದಿದ್ದಾರೆ. ಹರ್ಷಿತ್ 7ರಲ್ಲಿ 5 ಮೇಡನ್ ಓವರ್ ಬೌಲ್ ಮಾಡಿದ್ದು ಅತ್ಯಂತ ಕುತೂಹಲಕಾರಿ ಸಂಗತಿ. ಇನ್ನು 13 ರನ್​ಗಳನ್ನು ಮಾತ್ರ ನೀಡಿದ್ದಾರೆ. ಆ ಮೂಲಕ ಹರ್ಷಿತ್ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲಿ RCB ಸ್ಟಾರ್ ಬಿರುಗಾಳಿ; ಅಯ್ಯರ್ ಕನಸು ಭಗ್ನಗೊಳಸಿದ ಕನ್ನಡಿಗ ವೈಶಾಕ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment