ಇವತ್ತು ಪೂರ್ಣ ದಿನ ಅಭಿಮಾನಿಗಳೊಟ್ಟಿಗೆ ಕಳೆಯುವ ದುನಿಯಾ ವಿಜಯ್
ಬರ್ತ್ಡೇ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು
ವಿಜಯ್ ಕುಮಾರ್ ಅವರಿಗೆ ಇಂದು 50ನೇ ವರ್ಷದ ಜನ್ಮದಿನದ ಸಂಭ್ರಮ
ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್ ಅವರಿಗೆ ಇಂದು 50ನೇ ವರ್ಷದ ಜನ್ಮದಿನದ ಸಂಭ್ರಮ. ಕಳೆದ ವರ್ಷದಂತೆ ಈ ವರ್ಷವೂ ಕೂಡ ವಿಜಯ್ ಕುಮಾರ್ ಅವರು ತನ್ನ ಅಪ್ಪ-ಅಮ್ಮನ ಸಮಾಧಿ ಮುಂದೆ ಬರ್ತ್ಡೇಯನ್ನು ಅಭಿಮಾನಿಗಳೊಟ್ಟಿಗೆ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ.
ಆನೇಕಲ್ನಲ್ಲಿರುವ ಬಳಿಯ ಕುಂಬಾರನಹಳ್ಳಿಯಲ್ಲಿನ ತಮ್ಮ ಜಮೀನಿನಲ್ಲಿ ವಿಜಯ್ ಕುಮಾರ್ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ತನ್ನ ತಂದೆ-ತಾಯಿ ಸಮಾಧಿಯನ್ನ ದೇವಸ್ಥಾನದ ರೀತಿ ಕಟ್ಟಿಸಿ ವಿಶೇಷವಾಗಿ ಅಲಂಕಾರ ಮಾಡಿದ್ದರು. ಬಳಿಕ ಪೂಜೆ ಮಾಡಿ, ಬರೋ ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಟ್ಟಿಗೆ ದಿನ ಪೂರ್ತಿ ಕಳೆಯಲಿದ್ದಾರೆ.
ರಾತ್ರಿಯಿಂದಲೇ ಬರ್ತ್ಡೇಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಅಲ್ಲದೇ ಸಾಕಷ್ಟು ಅಭಿಮಾನಿಗಳು ರಾತ್ರಿಯೇ ಆಗಮಿಸಿ ವಿಶ್ ಮಾಡಿದ್ದರು. ಒಟ್ಟು 5 ಸಾವಿರ ಅಭಿಮಾನಿಗಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ.
ದುನಿಯಾ ವಿಜಯ್ ಬರ್ತ್ ಡೇ ಪ್ರಯುಕ್ತ ಈಗಾಗಲೇ ಭೀಮಾ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಸಲಗ ಬಳಿಕ ದುನಿಯಾ ವಿಜಯ್ ಅವರು ತಾವೇ ನಿರ್ದೇಶನ ಮಾಡಿ, ಅಭಿನಯಿಸಿದ ಭೀಮ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದ್ದು ಟೀಸರ್ ಫುಲ್ ಮಾಸ್ ಲುಕ್ನಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ