Advertisment

ರಾಕ್ಷಸನ ಅವತಾರದಲ್ಲಿ ಡೈನಾಮಿಕ್‌ ಪ್ರಿನ್ಸ್.. ಹಾರರ್​ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಪ್ರಜ್ವಲ್ ರೆಡಿ!

author-image
AS Harshith
Updated On
ರಾಕ್ಷಸನ ಅವತಾರದಲ್ಲಿ ಡೈನಾಮಿಕ್‌ ಪ್ರಿನ್ಸ್.. ಹಾರರ್​ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಪ್ರಜ್ವಲ್ ರೆಡಿ!
Advertisment
  • ಮೊದಲ ಬಾರಿಗೆ ಹಾರರ್ ಸಿನಿಮಾ ನಟ ಪ್ರಜ್ವಲ್​ ದೇವರಾಜ್
  • ಲೋಹಿತ್ ನಿರ್ದೇಶನದಲ್ಲಿ ಮೂಡಿ ಬಂದ ಹಾರರ್​​ ಸಿನಿಮಾ
  • ರಾಕ್ಷಸನ ಅವತಾರದಲ್ಲಿ ಕಾಣಿಸಿಕೊಂಡ ಪ್ರಜ್ವಲ್​ ದೇವರಾಜ್​

ಇತ್ತೀಚಿನ ದಿನಗಳಲ್ಲಿ ನಟ ಪ್ರಜ್ವಲ್ ದೇವರಾಜ್ ವಿಭಿನ್ನ ರೀತಿಯ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ಳೋದ್ರಲ್ಲಿ ಮುಂದಿದ್ದಾರೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ತದ್ದಾರೆ. ಹಾರರ್ ಸಿನಿಮಾ ಮೂಲಕವೇ ಪ್ರಖ್ಯಾತಿ ಗಳಿಸಿರೋ ನಿರ್ದೇಶಕ ಲೋಹಿತ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

Advertisment

ರಾಕ್ಷಸ ಸಿನಿಮಾ ಮೂಲಕ ಪ್ರಜ್ವಲ್ ಹಾಗೂ ಲೋಹಿತ್ ಹೊಸ ದಾಖಲೆ ಬರೆಯಲು ಸಿದ್ದರಾಗಿದ್ದಾರೆ. ಹೌದು ಇದೇ ಮೊದಲ ಬಾರಿಗೆ ವರ್ಲ್ಡ್ ಸಿನಿಮಾದಲ್ಲಿ ಹಾರರ್ ಟೈಂಲೂಪ್ ವರ್ಷನ್ ಟ್ರೈ ಮಾಡಿದ್ದಾರೆ ನಿರ್ದೇಶಕ ಲೋಹಿತ್.

ಇದನ್ನೂ ಓದಿ: ಬರೋಬ್ಬರಿ 4,50,000 ಗೂಬೆಗಳನ್ನು ಕೊಲ್ಲಲು ಮುಂದಾದ ಸರ್ಕಾರ! ಇದರ ಹಿಂದಿದೆ ಅಚ್ಚರಿಯ ಕಾರಣ!

ಇನ್ನು ಶಾನ್ವಿ ಎಂಟರ್ಪ್ರೈಸಸ್ ಅಡಿಯಲ್ಲಿ ಪ್ರದೀಪ್ ಮಹೀಶಿ ಪ್ರಸೆಂಟ್ಸ್ ನಲ್ಲಿ ದೀಪು ಬಿ ಎಸ್ ಮತ್ತು ನವೀನ್ ಗೌಡ ಹಾಗೂ ಮಾನಸ ಜಂಟಿಯಾಗಿ ರಾಕ್ಷಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನೋಬಿನ್ ಪೌಲ್ ಸಂಗೀತ ನಿರ್ದೇಶನ ಜೇಬಿನ್ ಪಿ ಜೋಕಬ್ ಕ್ಯಾಮೆರಾ ವರ್ಕ್ ಸಿನಿಮಾಗಿದೆ. ಸುಮಾರು 55 ದಿನಗಳ ಕಾಲ ರಾಕ್ಷಸ ಸಿನಿಮಾ ಚಿತ್ರೀಕರಣ ಮಾಡಲಾಗಿದ್ದು ಸಂಪೂರ್ಣ ಸಿನಿಮಾ ಚಿತ್ರೀಕರಣ ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿ ಮಾಡಿರೋದು ವಿಶೇಷ.

Advertisment

ಇದನ್ನೂ ಓದಿ: ನಿವೃತ್ತಿ ಬೆನ್ನಲ್ಲೇ ಕೊಹ್ಲಿಗೆ ಹೊಸ ಜವಾಬ್ದಾರಿ ಹೊರಿಸಿದ ರಾಹುಲ್​ ದ್ರಾವಿಡ್​.. ಆ ಕನಸು ನನಸು ಮಾಡ್ತಾರಾ ಕಿಂಗ್​!

ಪ್ರಜ್ವಲ್ ಜೊತೆಯಾಗಿ ಅರುಣ್ ರಾಥೋಡ್, ಶ್ರೀಧರ್, ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ ಜಯಂತ್ ಇನ್ನು ಅನೇಕರು ಅಭಿನಯಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ರಾಕ್ಷಸ ಸಿನಿಮಾ ಸಿದ್ದವಾಗಿದೆ. ಪ್ರಜ್ವಲ್ ಹುಟ್ಟುಹಬ್ಬದ ವಿಶೇಷವಾಗಿ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ತಂಡ ಚಿತ್ರದ ಪ್ರಚಾರದ ಕೆಲಸ ಶುರು ಮಾಡಿದೆ. ಇಷ್ಟು ದಿನಗಳ ಕಾಲ ಕಮರ್ಷಿಯಲ್ ಚಿತ್ರಗಲ್ಲಿ ಕಾಣಿಸಿಕೊಳ್ತಿದ್ದ ಪ್ರಜ್ವಲ್ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಹಾರರ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment