newsfirstkannada.com

ಊಟಿಗೆ ಹೋಗುವ ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್; ಹೊಸ ರೂಲ್ಸ್ ಜಾರಿ; ಏನದು?

Share :

Published April 30, 2024 at 9:45pm

Update April 30, 2024 at 10:04pm

    ಊಟಿಯಲ್ಲಿ 1986ರ ಬಳಿಕ ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ ತಾಪಮಾನ

    ಮೇ 7ರಿಂದ ಈ ಹೊಸ ನಿಯಮ ಜಾರಿಗೆ ತರಲು ಮಹತ್ವದ ಆದೇಶ

    ಕೊಡೈಕೆನಾಲ್‌ ಭೇಟಿ ನೀಡಲು ಪ್ರವಾಸಿಗರಿಗೆ ಇ‌-ಪಾಸ್ ಕಡ್ಡಾಯ

ಚುಮು, ಚುಮು ಚಳಿ.. ಮನಸಿಗೆ ಮುದ ನೀಡುವ ಸುಂದರ ವಾತಾವರಣ. ಹನಿಮೂನ್‌ಗೆ ಬೆಸ್ಟ್‌ ಪ್ಲೇಸ್ ಅಂದ್ರೆ ಥಟ್ ಅಂತ ನೆನಪಾಗೋದು ಊಟಿ. ತಮಿಳುನಾಡಿನ ಬೆಟ್ಟಗಳ ರಾಣಿ, ನೀಲಗಿರಿ ತಪ್ಪಲಿನ ಉದಗಮಂಡಲಂ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಬೇಸಿಗೆ, ಮಳೆ, ಚಳಿಗಾಲ ಎಲ್ಲಾ ಸೀಸನ್‌ನಲ್ಲೂ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ.

ಬ್ಯೂಟಿಫುಲ್‌ ಊಟಿ ಇದೀಗ ಬದಲಾಗಿದೆ. ಬರೋಬ್ಬರಿ 38 ವರ್ಷದ ಬಳಿಕ ಊಟಿಯ ತಾಪಮಾನ ಹೊಸ ದಾಖಲೆ ಬರೆದಿದೆ. ಏಪ್ರಿಲ್ ತಿಂಗಳಲ್ಲಿ ಸರಾಸರಿ ತಾಪಮಾನ 5.4 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿದೆ. ಅಂದ್ರೆ 1986ರ ಬಳಿಕ ಏಪ್ರಿಲ್ ತಿಂಗಳಲ್ಲಿ ಊಟಿ ಅತ್ಯಧಿಕ ತಾಪಮಾನದ ಬಿಸಿಲಿಗೆ ಕಾರಣವಾಗಿದೆ.

ಈ ಬಾರಿಯ ಬೇಸಿಗೆಯಲ್ಲಿ ಊಟಿ ಅಸಾಮಾನ್ಯವಾದ ಬಿಸಿಲಿಗೆ ಸಾಕ್ಷಿಯಾಗಿದೆ. ಚೆನ್ನೈ ಹವಾಮಾನ ಇಲಾಖೆಯ ವರದಿ ಪ್ರಕಾರ ಊಟಿ ಈ ಬಾರಿ ಅತ್ಯಧಿಕ ತಾಪಮಾನ ದಾಖಲಾಗಿದೆ. ಏಪ್ರಿಲ್ 29ರಂದು 29 ಡಿಗ್ರಿ ಸೆಲ್ಸಿಯಷ್ ಉಷ್ಣಾಂಶ ದಾಖಲಾಗಿದೆ. ಇದುವರೆಗೂ ಏಪ್ರಿಲ್ ತಿಂಗಳಲ್ಲಿ 28.5 ಡಿಗ್ರಿ ಸೆಲ್ಸಿಯಷ್ ತಾಪಮಾನ ಇತ್ತು. 1986ರ ಬಳಿಕ ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ.

ಇದನ್ನೂ ಓದಿ: VIDEO: ನಡು ರಸ್ತೆಯಲ್ಲಿ 4 ಯುವತಿಯರ ಮಾರಾಮಾರಿ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ತಮಿಳುನಾಡಿನಲ್ಲಿ ಸದ್ಯ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ. ಚೆನ್ನೈನಲ್ಲಿ 38.6 ಡಿಗ್ರಿ ಉಷ್ಣಾಂಶದ ವಾತಾವರಣ ಇದೆ. ಈ ಬಿಸಿಲಿನ ವಾತಾವರಣದ ಮಧ್ಯೆ ಊಟಿಯಲ್ಲಿ ದಿಢೀರನೇ ವಾತಾವರಣ ಬದಲಾಗಿದ್ದು ಪ್ರವಾಸಿಗರ ಅಚ್ಚರಿಗೆ ಕಾರಣವಾಗಿದೆ.

ಪ್ರವಾಸಿಗರಿಗೆ E-ಪಾಸ್ ಕಡ್ಡಾಯ!
ತಮಿಳುನಾಡಿನ ಊಟಿ, ಕೊಡೈಕೆನಾಲ್‌ಗೆ ಭೇಟಿ ನೀಡಲು ಪ್ರವಾಸಿಗರಿಗೆ ಇ‌-ಪಾಸ್ ಕಡ್ಡಾಯಗೊಳಿಸಲಾಗುತ್ತಿದೆ. ಮದ್ರಾಸ್ ಹೈಕೋರ್ಟ್‌ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಮೇ 7ರಿಂದ ಈ ಹೊಸ ನಿಯಮ ಜಾರಿಗೆ ತರಲು ಹೈಕೋರ್ಟ್ ಸೂಚಿಸಿದೆ.

ಊಟಿ, ಕೊಡೆಕೆನಾಲ್‌ಗೆ ಇಂತಿಷ್ಟೇ ವಾಹನ ಪ್ರವೇಶಿಸಬೇಕು ಅನ್ನೋ ನಿರ್ಬಂಧ ಇಲ್ಲ. ಹೀಗಾಗಿ ಊಟಿ ಪ್ರವಾಸಿಗರ ವಾಹನಗಳಿಂದ ತುಂಬಿ ಹೋಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಮೇ 7ರಿಂದ ಜೂನ್ 30ರವರೆಗೆ ಊಟಿ, ಕೊಡೈಕೆನಾಲ್‌ಗೆ ಭೇಟಿ ನೀಡಲು ಇ-ಪಾಸ್ ಪಡೆಯಬೇಕು ಎಂದು ಆದೇಶಿಸಲಾಗಿದೆ. ಸ್ಥಳೀಯರಿಗೆ ಇ-ಪಾಸ್‌ನಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಊಟಿಗೆ ಹೋಗುವ ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್; ಹೊಸ ರೂಲ್ಸ್ ಜಾರಿ; ಏನದು?

https://newsfirstlive.com/wp-content/uploads/2024/04/Ooty-Weather.jpg

Load More