ಮೋಹಕ್ಕೆ ಬಿದ್ದ ಗರುಡ ಭಾರೀ ಗೊಂದಲಕ್ಕೆ ಒಳಗಾಗಿದೆ.. ಯಾಕೆಂದು ಹೇಳಿ ನೋಡುವ..! Photos..!

author-image
Ganesh
Updated On
ಮೋಹಕ್ಕೆ ಬಿದ್ದ ಗರುಡ ಭಾರೀ ಗೊಂದಲಕ್ಕೆ ಒಳಗಾಗಿದೆ.. ಯಾಕೆಂದು ಹೇಳಿ ನೋಡುವ..! Photos..!
Advertisment
  • ಆಹಾರ ಹುಡುಕುತ್ತ ಬಂದ ಗರುಡ ಅಲ್ಲಿ ಕೂತಿದ್ದೇ ತಪ್ಪಾಯ್ತು
  • ಸಂಗಾತಿಗಾಗಿ ಶತತ ಪ್ರಯತ್ನ ನಡೆಸಿ ಪರದಾಟ ನಡೆಸಿದ ಗರುಡ
  • ಉಡುಪಿಯಲ್ಲಿ ನಡೆದ ‘ಗರುಡ ಪ್ರಸಂಗ’ ಭಾರೀ ವೈರಲ್

ಉಡುಪಿಯಲ್ಲಿ ಅಚ್ಚರಿಯ ಪ್ರಸಂಗವೊಂದು ಇತ್ತೀಚೆಗೆ ನಡೆದಿದೆ. ಮೈಜುಮ್ಮೆನಿಸುವ ಸ್ವರದೊಂದಿಗೆ ಆಕಾಶದಿಂದಲೇ ಬೇಟೆಗಾಗಿ ಗುರಿಯಿಡುವ ಆ ಗರುಡ ಹಕ್ಕಿಗೆ ಅದೇನಾಯ್ತೋ ಏನೋ, ಗೊತ್ತಿಲ್ಲ. ತನ್ನ ಪ್ರತಿಬಿಂಬವನ್ನು ಕಂಡು ಮೋಹಕ್ಕೆ ಬಿದ್ದು ಪರದಾಡಿದೆ.

ಇದನ್ನೂ ಓದಿ:CSK vs RCB ನಡುವಿನ ಮ್ಯಾಚ್​ಗೆ ಮಳೆ ಬಂದರೆ ಏನಾಗುತ್ತದೆ..?

publive-image

ಒಂದು ದಿನ ಆಹಾರ ಹುಡುಕತ್ತ ಬಂದ ಗರುಡ.. ಮನೆಯ ಕಟ್ಟಡ ಒಂದರ ಕಿಟಗಿ ಮೇಲೆ ಕೂತಿದೆ. ಕಿಟಗಿಯ ಗಾಜಿನ ಮೇಲೆ ಅದರ ಪ್ರತಿಬಿಂಬ ಬಿದ್ದಿದೆ. ಅದನ್ನು ನೋಡಿದ ಗರುಡ ಆಕರ್ಷಣೆಗೆ ಒಳಗಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಕಟ್ಟಡವೊಂದರ ಕಿಟಕಿ ಗಾಜಿನಲ್ಲಿ ಪ್ರತಿಬಿಂಬಿತವಾದ ತನ್ನ ಮುಖವನ್ನ ಕಂಡು ಮನಸ್ಸೋತು ಗಾಜನ್ನ ಕೊಕ್ಕಿನಿಂದ ಕುಕ್ಕಿ, ಕಾಲಿಂದ ಪರಚಿ ಪ್ರತಿಬಿಂಬದೊಂದಿಗೆ ಸೇರಲು ಯತ್ನಿಸಿದೆ.

ಇದನ್ನೂ ಓದಿ:ಬೇಸರದಲ್ಲೇ ವಿಮಾನ ಹತ್ತಿದ RCB ವಿಲ್ ಜಾಕ್ಸ್.. ಈ ಆಟಗಾರನ ಸಹಾಯ ಸ್ಮರಿಸಿ ಜಾಕ್ಸ್ ಭಾವುಕ

publive-image

ಈ ಗರುಡನ ಶತಪ್ರಯತ್ನದ ವೀಡಿಯೋ ಎಲ್ಲರ ಗಮನ ಸೆಳೆಯುವಂತಿತ್ತು. ಒಂದು ಕ್ಷಣ ಆಹಾರ ಹುಡುಕಲು ಹೋಗುತ್ತಿದ್ದ ಪಕ್ಷಿ ಮತ್ತೆ ಅದೇ ಜಾಗಕ್ಕೆ ಬಂದು ಕೂತು ಹಾಗೆಯೇ ಮಾಡುತ್ತಿತ್ತು. ಸಂಜೆ ಬಳಿಕ ಎಲ್ಲಾ ಪ್ರಯತ್ನ ವಿಫಲವಾಗಿ ಆಹಾರವೂ ಸಿಗದೆ ಸಂಗಾತಿಯೂ ಸಿಗದೆ ಸೋತು ಗೂಡು ಸೇರಿದೆ ಎನ್ನುತ್ತಾರೆ ಮನೆ ಮಾಲೀಕರು. ಸದ್ಯ ಗಿಡುಗದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

publive-image

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment