ಭೂಮಿ ಸುತ್ತ ಸುತ್ತಲಿದ್ದಾನೆ ಮಿನಿ ಚಂದ್ರ.. 2 ತಿಂಗಳು ಇರುವ ಇದರ ವಿಶೇಷತೆ ಏನು ಗೊತ್ತಾ?

author-image
Gopal Kulkarni
ರಾಹು ಗ್ರಸ್ತ ಚಂದ್ರ ಗ್ರಹಣಕ್ಕೆ ಕ್ಷಣಗಣನೆ; ಎಷ್ಟು ಗಂಟೆಗೆ ನೋಡಬಹುದು? ವಿಜ್ಞಾನಿಗಳು ಹೇಳೋದೇನು?
Advertisment
  • ಕೆಲವೇ ದಿನಗಳಲ್ಲಿ ಆಗಸದಲ್ಲಿ ನಡೆಯಲಿದೆ ಅಪರೂಪದ ಘಟನೆ
  • ಚಂದ್ರನಿಗೆ ಒಡನಾಡಿಯಾಗಿ ಬರಲಿದ್ದಾನೆ ಜೂನಿಯರ್​ ಚಂದಮಾಮ
  • ಎರಡು ತಿಂಗಳು ಆಗಸದಲ್ಲಿ ಕಾಣಿಸಿಕೊಳ್ಳುವ ಈ ಶಶಿಯ ವಿಶೇಷತೆ ಏನು?

ಬಾನಂಗಳದಿಂದ ಸದಾ ಶ್ವೇತ ಬೆಳದಿಂಗಳು ಚೆಲ್ಲುವ ಚಂದಿರನೆಂದರೆ ಅದೆಷ್ಟು ಮುದ್ದು. ಚಂದ್ರ ಕೇವಲ ಒಂದು ಗ್ರಹವಾಗಿ ಅಲ್ಲ, ಪ್ರೇಮಿಗಳಿಗೆ ಸ್ಪೂರ್ತಿಯಾಗಿ, ಮಕ್ಕಳಿಗೆ ಆಟಿಗೆಯಾಗಿ, ತಾಯಿಗೆ ಮಕ್ಕಳ ಹಠವನ್ನು ನೀಗಿಸುವ ಆಟಿಕೆಯಾಗಿ, ಕವಿಗಳಿಗೆ ಪ್ರೇರಣೆಯಾಗಿ ನಿಲ್ಲುವ ಶುದ್ಧ ಶ್ವೇತವರ್ಣದ ಒಂದು ಅನುಭೂತಿ. ಸಾಮಾನ್ಯ ಜನರಿಗೆ ಚಂದ್ರ ಹೀಗೆಲ್ಲಾ ಕಾಣಿಸಿದರೆ, ವಿಜ್ಞಾನಿಗಳಿಗೆ ಖಗೋಳಶಾಸ್ತ್ರಜ್ಞರಿಗೆ ಚಂದ್ರ ಎಂದಿಗೂ ತೀರದ ಒಂದು ಅಧ್ಯಯನದ ವಸ್ತು. ಈಗ ಅದೇ ಚಂದ್ರನಿಗೆ ತಾತ್ಕಾಲಿಕ ಒಡನಾಡಿಯಾಗಿ ಜೂನಿಯರ್ ಚಂದ್ರನೊಬ್ಬ ಸದ್ಯದಲ್ಲಿಯೇ ಆಗಸದಲ್ಲಿ ಕಾಣಿಸಿಕೊಳ್ಳಲಿದ್ದಾನೆ.

ಇದನ್ನೂ ಓದಿ:ಒಂದು ಬಾರಿ ಚಾರ್ಜ್​ ಮಾಡಿದ್ರೆ 500km ಕ್ರಮಿಸುತ್ತೆ! ಮಾರುತಿ ಸುಜುಕಿ ಪರಿಚಯಿಸಲು ಸಜ್ಜಾಗಿದೆ ಹೊಸ ಎಲೆಕ್ಟ್ರಿ ವಾಹನ

ಬಾಹ್ಯಾಕಾಶ ವಿಜ್ಞಾನಿಗಳು ಹೇಳುವ ಪ್ರಕಾರ ನಭೋಮಂಡಲದಲ್ಲಿ ಒಂದು ವೈಶಿಷ್ಟ್ಯ ಸದ್ಯದಲ್ಲಿಯೇ ಜರುಗಲಿದೆ. ಮಿನಿ ಚಂದ್ರ ಭೂಮಿಯ ಸುತ್ತ ಎರಡು ತಿಂಗಳುಗಳ ಕಾಲ ಸುತ್ತಲಿದ್ದಾನೆ. ಇದೇ ಸೆಪ್ಟಂಬರ್ 29 ರಿಂದ ನವೆಂಬರ್ 25ರವರೆಗೂ ಈ ಜೂನಿಯರ್ ಚಂದಮಾಮ ಆಗಸದಲ್ಲಿ ಭೂಮಿಯ ಸುತ್ತ ಸುತ್ತಲಿದ್ದಾನೆ. ಭೂಮಿಯ ಗುರುತ್ವಾಕರ್ಷಣೆಯ ಬಲ ಇಂತಹ ಹಲವು ವಿಶೇಷತೆಗಳಿಗೆ ಆಗಾಗ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

publive-image

ಇದನ್ನೂ ಓದಿ:ಒಂದು ವೇಳೆ ತುರ್ತುಪರಿಸ್ಥಿತಿ ಬಂದಿದ್ದೇ ಆದಲ್ಲಿ ಸುನೀತಾ ಗತಿಯೇನು? ನಾಸಾ ಮಾಡಿಕೊಂಡಿದೆ ಮತ್ತೊಂದು ಯೋಜನೆ

Research Notes of the American Astronomical Society ವರದಿ ಹೇಳುವ ಪ್ರಕಾರ. ಮಿನಿ ಚಂದ್ರನಾಕೃತಿ ಹೋಲುವ ಒಂದು ಕ್ಷುದ್ರಗ್ರಹ ಸೆಪ್ಟಂಬರ್ 29 ರಿಂದ ಆಗಸದಲ್ಲಿ ಕಾಣಿಸಿಕೊಳ್ಳಲಿದೆಯಂತೆ. ಇದನ್ನು ಜೂನಿಯರ್ ಮೂನ್ ಎಂದೇ ಕರೆಯಲಾಗುತ್ತದೆ. 53 ಅಡಿ ವೃತ್ತಾಕಾರದಲ್ಲಿರುವ ಈ ಒಂದು ಕ್ಷುದ್ರಗ್ರಹ ಸುಮಾರು 53 ದಿನಗಳ ಕಾಲ ಈ ಭೂಮಿಯನ್ನು ಸುತ್ತಲಿದೆಯಂತೆ. ಭೂಮಿ ಕ್ಷುದ್ರಗ್ರಹಗಳನ್ನು ತನ್ನತ್ತ ಸೆಳೆದುಕೊಂಡು ಅವುಗಳ ಕಕ್ಷೆಗೆ ತಳ್ಳುವ ಪ್ರವೃತ್ತಿಯಿದೆ ಎನ್ನುತ್ತದೆ RSAASನ ವರದಿ. ಸದ್ಯ ನಭೋಮಂಡಲದಲ್ಲಿ ಕೆಲವು ದಿನಗಳ ಮಟ್ಟಿಗೆ ಜೂನಿಯರ್ ಚಂದಮಾಮ ಕಾಣಿಸಿಕೊಳ್ಳಲಿದ್ದಾನೆ. ನಂತರ ಭೂಮಿಯ ಕಕ್ಷೆಯಿಂದ ದೂರ ಸರಿಯಲಿದ್ದಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದೊಂದು ವಿಶೇಷ ಘಟನೆಯಾಗಿದ್ದು. ಇದನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಸದ್ಯದ ಪೀಳಿಗೆಯದ್ದಾಗಲಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment