/newsfirstlive-kannada/media/post_attachments/wp-content/uploads/2024/10/MYS-MUDA-1.jpg)
ಮೈಸೂರಿನ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಗ್ಗೆ ಇಟ್ಟಿದ್ದು, ದಾಖಲೆಗಳಿಗಾಗಿ ತಲಾಶ್ ನಡೆಸಿದ್ದಾರೆ. ಜೆಎಲ್​ ಬಿ ರಸ್ತೆಯಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಮುಡಾ ಹಗರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.
ಇಡಿ ಅಧಿಕಾರಿಗಳ ದಾಳಿ ಹಿನ್ನೆಲೆಯಲ್ಲಿ ಮುಡಾ ಕಚೇರಿಗೆ ಸಿಆರ್​​ಪಿಎಫ್ ಬಿಗಿ ಭದ್ರತೆ ಓದಗಿಸಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಸೆಕ್ಯುರಿಟಿ ಫೋರ್ಸ್ ಅಧಿಕಾರಿಗಳು ಬಂದೋಬಸ್ತ್​ ಮಾಡಿದ್ದಾರೆ. ಕಚೇರಿಗೆ ಯಾರೂ ಬರದಂತೆ ತಡೆಯುತ್ತಿದ್ದು, ಇಂದಿನ ಸಾರ್ವಜನಿಕ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ:VIDEO: ಮುಡಾ ಕೇಸ್​ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ!
ಶೋಧಕಾರ್ಯ ಬಳಿಕ 800 ಪುಟಗಳ ಜೆರಾಕ್ಸ್ ಪ್ರತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ದೂರುದಾರ ಸ್ನೇಹಮಯಿಕೃಷ್ಣ ನೀಡಿದ್ದ ದೂರಿನ ಪ್ರತಿ ಆಧರಿಸಿ ಅಧಿಕಾರಿಗಳು ಜೆರಾಕ್ಸ್ ಪಡೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿಯ 14 ಸೈಟ್ ವಿಚಾರಕ್ಕೆ ತಲಾಶ್ ಮಾಡುತ್ತಿದ್ದಾರೆ.
ದಾಳಿಗೆ ಸಂಬಂಧಿಸಿ ನ್ಯೂಸ್​ಫಸ್ಟ್​ ಜೊತೆ ಪ್ರತಿಕ್ರಿಯಿಸಿರುವ ಮುಡಾದ ಕಾರ್ಯದರ್ಶಿ, ಇಡಿ ಅಧಿಕಾರಿಗಳು ಬೆಳಗ್ಗೆ ಬಂದಿದ್ದಾರೆ. ದಾಖಲೆಗಳನ್ನು ನಮ್ಮ ಬಳಿ ಕೇಳಿದ್ದಾರೆ. ನಾವು ಅವರಿಗೆ ಎಲ್ಲವನ್ನೂ ಒದಗಿಸುತ್ತಿದ್ದೇವೆ. ಅವರು ಕೇಳಿದ ಎಲ್ಲಾ ಮಾಹಿತಿ ನೀಡಿದ್ದೇವೆ. ನಮಗೆ ಏನನ್ನೂ ಮಾತನಾಡಬೇಡ ಎಂದಿದ್ದಾರೆ. ಆ ಕಾರಣಕ್ಕೆ ನಾವು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us