ಕ್ರಿಕೆಟ್ ಮಹಾಜಾತ್ರೆಯ ನಡುವೆ ಮತ್ತೊಂದು ಮಹಾಹಬ್ಬ.!
35ನೇ ವಸಂತಕ್ಕೆ ಕಾಲಿಡಲಿದ್ದಾರೆ ಡೆಲ್ಲಿಯ ವಿರಾಟ್ ಕೊಹ್ಲಿ
ಕೊಹ್ಲಿ ಸ್ಪೆಷಲ್ ಇನ್ನಿಂಗ್ಸ್ ಕಟ್ಟಲಿ ಅನ್ನೋದೇ ಫ್ಯಾನ್ಸ್ ಆಸೆ
ಕ್ರಿಕೆಟ್ ಲೋಕದ ಮಹಾ ಜಾತ್ರೆಯ ನಡುವೆ ಮತ್ತೊಂದು ದೊಡ್ಡ ಹಬ್ಬ ಬಂದಿದೆ. ಈ ಫೆಸ್ಟಿವಲ್ ಸಂಭ್ರಮಿಸಲು ಅಸಂಖ್ಯ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರೋ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಮೆಗಾ ಪ್ಲಾನ್ ರೂಪಿಸಿದೆ. ಯಾವುದಪ್ಪಾ ಈ ಹಬ್ಬ, ಯಾಕೆ ಇಷ್ಟೇಲ್ಲ ಸಡಗರ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ವಿಶ್ವಕಪ್ ಮೆಗಾ ಟೂರ್ನಿಯ ಫಸ್ಟ್ ಹಾಫ್ ಸಕ್ಸಸ್ಫುಲ್ ಆಗಿ ಅಂತ್ಯ ಕಂಡಿದ್ರೆ, ಸೆಕೆಂಡ್ ಹಾಫ್ನಲ್ಲಿ ಟ್ವಿಸ್ಟ್ & ಟರ್ನ್ಗಳೊಂದಿಗೆ ಭರ್ಜರಿ ಮನರಂಜನೆ ನೀಡ್ತಿದೆ. ಕ್ರಿಕೆಟ್ ಜಾತ್ರೆಯ ಗುಂಗು ಸದ್ಯ ವಿಶ್ವವನ್ನ ಆವರಿಸಿದೆ. ಎಲ್ಲೇ ಹೋದರೂ, ಕ್ರಿಕೆಟ್ನದ್ದೇ ಮಾತು, ಚರ್ಚೆ. ಕ್ರಿಕೆಟ್ ಫೀವರ್ ಎಲ್ಲೆಡೆ ಆವರಿಸಿರೋ ಈ ಹೊತ್ತಲ್ಲಿ ಮತ್ತೊಂದು ದೊಡ್ಡ ಹಬ್ಬ ಬಂದೇ ಬಿಟ್ಟಿದೆ.
ಕಿಂಗ್ ಕೊಹ್ಲಿಯ ಹುಟ್ಟುಹಬ್ಬಕ್ಕೆ ಕೌಂಟ್ಡೌನ್ ಶುರು..!
ನಾವ್ ಹೇಳ್ತಿರೋ ಮತ್ತೊಂದು ಹಬ್ಬ ವಿರಾಟ್ ಕೊಹ್ಲಿಯ ಹುಟ್ಟು ಹಬ್ಬ. ರನ್ಮಷಿನ್, ಚೇಸ್ ಮಾಸ್ಟರ್, ರೆಕಾರ್ಡ್ ಬ್ರೇಕರ್, ಫ್ಯಾನ್ಸ್ ಫೇವರಿಟ್ ಕಿಂಗ್ ಕೊಹ್ಲಿಯ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ. ಇನ್ನು 4 ದಿನ ಕಳೆದ್ರೆ ವಿರಾಟ್, 35ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕ್ರಿಕೆಟ್ ಜಾತ್ರೆಯ ನಡುವೆ ಬಂದಿರೋ ಡೆಲ್ಲಿ ಡ್ಯಾಷರ್ ಹುಟ್ಟುಹಬ್ಬವನ್ನ ಸಂಭ್ರಮಿಸಲು ಫ್ಯಾನ್ಸ್ ಕಾತರರಾಗಿದ್ದಾರೆ.
ನ. 5ರಂದು ಟೀಮ್ ಇಂಡಿಯಾ ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ನಲ್ಲಿ ಕಣಕ್ಕಿಳಿಯಲಿದೆ. ಸೌತ್ ಆಫ್ರಿಕಾ ವಿರುದ್ಧದ ಆ ಪಂದ್ಯದ ಆರಂಭಕ್ಕೂ ಮುನ್ನ ಸ್ಪೆಷಲ್ ಸೆಲಬ್ರೇಷನ್ ನಡೆಸಲು ಪ್ಲಾನ್ ರೆಡಿಯಾಗಿದೆ. ಇನ್ಫ್ಯಾಕ್ಟ್.. ಪಂದ್ಯದ ಆರಂಭದಲ್ಲಿ ಮಾತ್ರವಲ್ಲ.. ಪಂದ್ಯದುದ್ದಕ್ಕೂ ವಿರಾಟ ಸಂಭ್ರಮ ನಡೆಯಲಿದೆ.
ವಿರಾಟಮಯವಾಗಲಿದೆ ಈಡನ್ ಗಾರ್ಡನ್ ಮೈದಾನ.!
ವಿಶ್ವಕಪ್ ಫೀವರ್ ಹೆಚ್ಚಾಗ್ತಿದ್ದಂತೆ ಸ್ಟೇಡಿಯಂಗಳೆಲ್ಲ ತುಂಬಿ ತುಳುಕ್ಕುತ್ತಿವೆ. ಇನ್ನು, ಟೀಮ್ ಇಂಡಿಯಾದ ಪಂದ್ಯ ಅಂದ್ರೆ, ಸ್ಟೇಡಿಯಂ ಫುಲ್ ಜಾಮ್ಪ್ಯಾಕ್ಡ್ ಆಗೋದು ಪಕ್ಕಾ. ಅದ್ರಲ್ಲೂ ಕೊಹ್ಲಿ ಬರ್ತಡೇ ಅಂದ್ರೆ, ಕ್ರೇಜ್ ಡಬಲ್ ಆಗಿರುತ್ತೆ. ಅಲ್ಲಿನ ವೈಬ್ ಬೇರೆಯೇ ಇರುತ್ತೆ. ಹೀಗಾಗಿ ಕೊಹ್ಲಿ ಬರ್ತ್ಡೇಗೆ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಸ್ಪೆಷಲ್ ಪ್ಲಾನ್ ರೂಪಿಸಿದೆ. ಅವತ್ತು ಮೈದಾನದಲ್ಲಿ ಒಬ್ಬ ವಿರಾಟ್ ಇದ್ರೆ, ಸ್ಟ್ಯಾಂಡ್ಸ್ನಲ್ಲಿ 70 ಸಾವಿರಕ್ಕೂ ಅಧಿಕ ವಿರಾಟ್ ಮುಖಗಳು ಕಾಣಿಸಲಿವೆ.
ಸ್ಪೆಷಲ್ ಕೇಕ್, 70 ಸಾವಿರ ಮಾಸ್ಕ್.. ಪಟಾಕಿ ಸುರಿಮಳೆ.!
ವಿರಾಟ ಸಂಭ್ರಮಕ್ಕಾಗಿ ಸ್ಪೆಷಲ್ ಕೇಕ್ ಅನ್ನ ಸಿಎಬಿ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ತರಿಸಲು ಮುಂದಾಗಿದ್ದಾರಂತೆ. ಇದರ ಜೊತೆಗೆ ಮೈದಾನಕ್ಕೆ ಬರುವ ಅಭಿಮಾನಿಗಳಿಗೆ ಸುಮಾರು 70 ಸಾವಿರ ಕೊಹ್ಲಿ ಚಿತ್ರವಿರೋ ಫೇಸ್ ಮಾಸ್ಕ್ಗಳನ್ನ ನೀಡಲು ಕೂಡ ತೀರ್ಮಾನಿಸಲಾಗಿದೆ. ಕೊಹ್ಲಿ ಮೈದಾನ ಬಂದಾಗ ಎಲ್ಲರಿಗೂ ಧರಿಸುವಂತೆ ಕೋರುವುದು ಮ್ಯಾನೇಜ್ಮೆಂಟ್ ಪ್ಲಾನ್. ಇದ್ರ ಜೊತೆಗೆ ವಿಶೇಷವಾಗಿ ಪಂದ್ಯದ ನಡುವೆ ಲೇಸರ್ ಶೋ ಹಾಗೂ ಪಟಾಕಿ ಸಿಡಿಸಿ ಸಂಭ್ರಮಕ್ಕೆ ಮೆರಗು ತುಂಬಲು ಕೂಡ ಪ್ಲಾನ್ಗಳು ನಡೆದಿದೆ.
ವಿರಾಟ್ ಕೊಹ್ಲಿಯ ಹುಟ್ಟುಹಬ್ಬವನ್ನ ಸಂಭ್ರಮಿಸಲು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಸಖತ್ ಪ್ಲಾನ್ ರೂಪಿಸಿದೆ. ಅಭಿಮಾನಿಗಳು ಕೂಡ ಇದನ್ನ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಅದ್ರ ಜೊತೆಗೆ ಸ್ಪೆಷಲ್ ಡೇ. ಕೊಹ್ಲಿಯ ಸ್ಪೆಷಲ್ ಇನ್ನಿಂಗ್ಸ್ ಕಟ್ಟಲಿ ಅನ್ನೋದು ಫ್ಯಾನ್ಸ್ ಮನದಾಳವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ