/newsfirstlive-kannada/media/post_attachments/wp-content/uploads/2024/04/turtle.jpg)
ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ (Cooch Behar) ಜಿಲ್ಲೆಯಲ್ಲಿ ಮತದಾನದ ಸಂದೇಶ ಸಾರಲು ಆಮೆಗಳನ್ನು ಬಳಸಿಕೊಂಡಿದೆ. ಕಪ್ಪು ಬಣ್ಣದ softshell ಪ್ರಭೇದದ ಆಮೆಗಳನ್ನು ಬಳಸಿಕೊಂಡಿದ್ದು, ಇವು ವಿನಾಶದ ಅಂಚಿನಲ್ಲಿವೆ. ಪಶ್ಚಿಮ ಬಂಗಾಳದ ಬಾಣೇಶ್ವರ ದೇವಸ್ಥಾನದ ಕೊಳದಲ್ಲಿ ಮಾತ್ರ ಈ ಆಮೆಗಳಿವೆ.
ಇದನ್ನೂ ಓದಿ:ಆರ್​ಸಿಬಿ ಪಾಲಿನ ವಿಲನ್ ಇವರು, ತಂಡ ಹಳ್ಳ ಹಿಡಿಯಲು ಕಾರಣನೂ ಇವರೇ..!
ಆಮೆಗಳು ಮೊದಲ ಬಾರಿಗೆ ಚುನಾವಣೆಗೆ ಕೊಡುಗೆ ನೀಡುತ್ತಿವೆ. ಒಂದು ಕಾಲದಲ್ಲಿ ಈ ಆಮೆಗಳು ಅಳಿವಿನಂಚಿನಲ್ಲಿದೆ ಎಂದು ಪರಿಗಣಿಸಲಾಗಿತ್ತು. ಇವು ವಿಷ್ಣುವಿನ ಅವತಾರವೆಂದು ನಂಬಲಾಗಿದೆ. ಅವುಗಳನ್ನು ‘ಮೋಹನ ಬಾಬು’ (Mohan Babu) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿನ ಜಿಲ್ಲಾಡಳಿತ ಈ ಆಮೆಗಳನ್ನು ಮ್ಯಾಸ್ಕಾಟ್‌ಗಳಾಗಿ ಮಾಡುವಂತೆ ಆಯೋಗಕ್ಕೆ ಮನವಿ ಮಾಡಿತ್ತು. ಅದನ್ನು ಚುನಾವಣಾ ಆಯೋಗ ಸ್ವೀಕಾರ ಮಾಡಿದೆ.
ಇದನ್ನೂ ಓದಿ:ಆರ್​ಸಿಬಿ ಪಾಲಿನ ವಿಲನ್ ಇವರು, ತಂಡ ಹಳ್ಳ ಹಿಡಿಯಲು ಕಾರಣನೂ ಇವರೇ..!
ಆಮೆಗಳ ಮೇಲೆ ನಂಬಿಕೆ..!
ಕೂಚ್ ಬೆಹಾರ್ ಜಿಲ್ಲೆಯ ಜನರು, ಈ ಆಮೆಗಳ ಮೇಲೆ ಆಳವಾದ ನಂಬಿಕೆ ಹೊಂದಿದ್ದಾರೆ. ಇವುಗಳಿಂದಾಗಿಯೇ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಹೆಚ್ಚುತ್ತಿದೆ. ಹೀಗಾಗಿ ಇಲ್ಲಿನ ಜನ ಆಮೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಾಣೇಶ್ವರದ ಆಮೆ ​​ಕೊಳದ ಬಳಿಯ ರಸ್ತೆಗಳಲ್ಲಿ ವಾಹನಗಳು ಬಹಳ ನಿಧಾನವಾಗಿ ಚಲಿಸುತ್ತವೆ. ನಿಯಮದ ಪ್ರಕಾರ ಗಂಟೆಗೆ 20 ಕಿಲೋ ಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಾಡುವಂತಿಲ್ಲ. ರಸ್ತೆ ಅಪಘಾತದಲ್ಲಿ ಹಲವು ಆಮೆಗಳು ಸಾವನ್ನಪ್ಪಿವೆ. ಈ ಕಾರಣಕ್ಕೆ ಜಿಲ್ಲಾಡಳಿತ ಕಠಿಣ ನಿಯಮ ಜಾರಿಗೆ ತಂದಿದೆ. 2002ರಲ್ಲಿ ಬಾಣೇಶ್ವರ ಕೊಳ ಸ್ವಚ್ಛಗೊಳಿಸುವ ವೇಳೆ ‘ಮೋಹನ’ ಆಮೆಗಳು ಇರುವುದನ್ನು ಜನ ಗುರುತಿಸಿದರು. ಅಂದಿನಿಂದ ಅವುಗಳ ಉಳಿಸುವ ಪ್ರಯತ್ನ ಮುಂದುವರಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ