newsfirstkannada.com

ಆರ್​ಸಿಬಿ ಪಾಲಿನ ವಿಲನ್ ಇವರು, ತಂಡ ಹಳ್ಳ ಹಿಡಿಯಲು ಕಾರಣನೂ ಇವರೇ..!

Share :

Published April 13, 2024 at 1:17pm

  ಕಳೆದ ಸೀಸನ್​​ನ ಆಪದ್ಬಾಂಧವನೇ ಖಳನಾಯಕ

  ಆರ್​ಸಿಬಿ ಪಾಲಿನ ಖಳನಾಯಕರು ಮ್ಯಾಕ್ಸಿ-ಸಿರಾಜ್

  ಇದು ಪವರ್ ಸ್ಟ್ರೈಕರ್​ನ ಪವರ್​ಲೆಸ್ ಆಟ..!

ಈ ಸೀಸನ್​​ನಲ್ಲಿ ಆರ್​ಸಿಬಿ ದುಸ್ಥಿತಿಗೆ ಕಾರಣ ಇಬ್ಬರು. ಆ ಇಬ್ಬರು ನಿರೀಕ್ಷೆಗೆ ತಕ್ಕಂತ ಆಟವಾಡಿದ್ರೆ, ಸೋಲಿನ ಸುಳಿಯಲ್ಲೇ ರಾಯಲ್ ಚಾಲೆಂಜರ್ಸ್ ಇರುತ್ತಿರಲ್ಲ. ಈ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಆ ಖಳ ನಾಯಕರು ಯಾರು?

ಗ್ಲೆನ್ ಮ್ಯಾಕ್ಸ್​ವೆಲ್.. ಮೊಹಮ್ಮದ್ ಸಿರಾಜ್.. ರಾಯಲ್ ಚಾಲೆಂಜರ್ಸ್​ ಬೆಂಗಳೂರಿನ ಬಿಗ್ ಫಿಷ್​​ಗಳು. ಈ ಬಿಗ್​​ ಗನ್​​ಗಳೇ ರಾಯಲ್ ಚಾಲೆಂಜರ್ಸ್​ ಬೆಂಗಳೂರಿನ ಮ್ಯಾಚ್ ವಿನ್ನರ್​ ಪ್ಲೇಯರ್ಸ್​. ಕಳೆದ ಆವೃತ್ತಿಯಲ್ಲಿ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡಿದ್ದ ಇವರ ಮೇಲೆ, ಈ ಸಲ ಬೆಟ್ಟದಷ್ಟು ನಿರೀಕ್ಷೆಗಳನ್ನೇ ಇಡಲಾಗಿತ್ತು. ಆ ನಿರೀಕ್ಷೆಗಳನ್ನೆಲ್ಲ ಹುಸಿಯಾಗಿಸಿರುವ ಇವರಿಬ್ಬರು.. ಈಗ ಆರ್​ಸಿಬಿ ಪಾಲಿನ ಖಳನಾಯಕರಾಗಿದ್ದಾರೆ.

ಇದನ್ನೂ ಓದಿ: ಮೂವರು ಮಕ್ಕಳ ಸ್ಕೂಲ್​ ಫೀಸ್ ಕಟ್ಟದೇ ಧೋನಿ ನೋಡಲು 64,000 ಖರ್ಚು ಮಾಡಿದ ಅಭಿಮಾನಿ..!

ಮ್ಯಾಕ್ಸ್‌ವೆಲ್ ಅಲ್ಲ.. ಈತ ಆರ್​ಸಿಬಿ ‘ಫ್ರಾಡ್‌ವೆಲ್’.!
ಮ್ಯಾಕ್ಸ್​ವೆಲ್..ಕಳೆದ ಸೀಸನ್​​ನಲ್ಲಿ ಆಕ್ಷರಶಃ ಆರ್​ಸಿಬಿಯ ಆಪದ್ಬಾಂಧವರಾಗಿದ್ರು. ಆರ್​ಸಿಬಿ ಸಂಕಷ್ಟದಲ್ಲಿದ್ದಗೆಲ್ಲ ತಂಡದ ಕೈ ಹಿಡಿದಿದ್ರು. ಈ ಸೀಸನ್​​ನಲ್ಲಿ ಮ್ಯಾಕ್ಸ್​ವೆಲ್, ಆರ್​​ಸಿಬಿ ಪಾಲಿನ ಖಳನಾಯಕರಾಗಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಆರ್​ಸಿಬಿಯ ಆಪದ್ಬಾಂದವ ಎಂಬ ಪಟ್ಟದಿಂದ ಆರ್​ಸಿಬಿಯ ಫ್ರಾಡ್​ ವೆಲ್ ಎನಿಸಿಕೊಳ್ತಿದ್ದಾರೆ. ಇದಕ್ಕೆ ಕಾರಣ ಪ್ರಸಕ್ತ ಸೀಸನ್​​ನಲ್ಲಿ ನೀಡ್ತಿರುವ ಅತಿ ಕೆಟ್ಟ ಪರ್ಫಾಮೆನ್ಸ್​

6 ಪಂದ್ಯ.. ಮೂರು ಡಕೌಟ್​.. ಒಟ್ಟು ರನ್​​​​​​​​​ 32
ಇದು ಬೇರ್ಯಾರದ್ದೋ ಬೌಲರ್​​ನ ಟ್ಯಾಕ್​ ರೆಕಾರ್ಡ್ ಅಲ್ಲ. ಸೋ ಕಾಲ್ಡ್ ಸ್ಫೋಟಕ ದಾಂಡಿಗನ​ ಮ್ಯಾಕ್ಸಿಯ​ ಬ್ಯಾಟಿಂಗ್ ಕಥೆ. ಗೇಮ್ ಚೇಂಜರ್, ಪವರ್ ಸ್ಟ್ರೈಕರ್ ಎನಿಸಿಕೊಂಡ ಮ್ಯಾಕ್ಸಿಯ ಪವರ್​​ಲೆಸ್​ ಬ್ಯಾಟಿಂಗ್ ಕಥೆ. ಇಂಟ್ರೆಸ್ಟಿಂಗ್ ಅಂದ್ರೆ ಈತ ಕ್ರೀಸ್​ನಲ್ಲಿ ಉಳಿದಿದ್ದಕ್ಕಿಂತ ಡಕೌಟ್​ ಆಗಿ ಡಗೌಟ್​​​ನಲ್ಲಿ ಕೂಲ್​ ಡ್ರಿಕ್ಸ್​ ಕುಡಿದಿದ್ದೇ ಹೆಚ್ಚು. ಮತ್ತಷ್ಟು ಕ್ಯೂರಿಯಾಸಿಟಿ ವಿಷ್ಯ ಅಂದ್ರೆ, ಆರ್​ಸಿಬಿ ಪರ ಬ್ಯಾಟ್​ ಬೀಸಿದರ ಪೈಕಿ, ಅತಿ ಕಳಪೆ ಸ್ಟ್ರೈಕ್​ರೇಟ್​ನ ಕುಖ್ಯಾತಿ ಈತನಿಗೆ ಸೇರುತ್ತೆ.

ಪ್ರಸಕ್ತ ಆವೃತ್ತಿಯಲ್ಲಿ ಮ್ಯಾಕ್ಸ್​ವೆಲ್​
ಹೌದು! 6 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸ್​ವೆಲ್, ಎದುರಿಸಿದ 34 ಎಸೆತಗಳಿಂದ 32 ರನ್ ಸಿಡಿಸಿದ್ದಾರೆ. ಅದು ಕೂಡ 94.11ರ ಸ್ಟ್ರೈಕ್​ರೇಟ್​ನಲ್ಲಿ.. ಇದು ಆರ್​ಸಿಬಿ ಪರ ಬ್ಯಾಟ್ ಬೀಸಿದ 13 ಮಂದಿ ಪೈಕಿ ದಾಖಲಾದ ಅತಿ ಕಡಿಮೆ ಸ್ಟ್ರೈಕ್​ರೇಟ್​ ಅನ್ನೋದು ವಿಪರ್ಯಾಸ.

ಇದನ್ನೂ ಓದಿ: RCBಗೆ ಪ್ಲೇ-ಆಫ್ ದಾರಿ ಕಷ್ಟವೇನೂ ಅಲ್ಲ​.. ಕಮರುತ್ತಿರುವ ಕನಸುಗಳಿಗೆ ಜೀವ ತುಂಬಲು ಇನ್ನೂ ಇವೆ ದಾರಿಗಳು..!

ಇಂಟ್ರೆಸ್ಟಿಂಗ್ ಅಂದ್ರೆ ಈ 6 ಪಂದ್ಯಗಳಲ್ಲಿ ಮೂರು ಬಾರಿ ಡಕೌಟ್​​ಗೆ ಗುರಿಯಾಗಿರೋ ಮ್ಯಾಕ್ಸಿ, ನಂತರದ 3 ಪಂದ್ಯಗಳಲ್ಲಿ ಕ್ರಮವಾಗಿ ದಾಖಲಿಸಿರುವುದು 3, 28, 1 ರನ್ ಮಾತ್ರ. ಈ ಅತಿ ಕೆಟ್ಟ ಇನ್ನಿಂಗ್ಸ್​ ಈಗ ಆರ್​​ಸಿಬಿ ಪಾಲಿಗೆ ವಿಲನ್ ಆಗಿ ಮಾರ್ಪಟ್ಟಿದೆ.

ಸಿಡಿಗುಂಡು ಸಿರಾಜ್​​​ ಬೌಲಿಂಗ್​​​​ನಲ್ಲಿ ಇಲ್ಲ ಧಮ್​​​..!
ಮೊಹಮ್ಮದ್ ಸಿರಾಜ್.. ಆರ್​ಸಿಬಿ ಬೌಲಿಂಗ್ ಶಕ್ತಿ.. ಆದ್ರೆ, ಪ್ರಸಕ್ತ ಆವೃತ್ತಿಯಲ್ಲಿ ಸಿರಾಜ್​​ರ ಪವರ್ ಲೆಸ್ ಬೌಲಿಂಗ್, ನಿಜಕ್ಕೂ ತಂಡಕ್ಕೆ ಮಾರಕವಾಗಿದೆ. ಪವರ್ ಪ್ಲೇ, ಡೆತ್​ ಓವರ್​ಗಳಲ್ಲಿ ದಾರಾಳ ರನ್ ನೀಡುವ ಸಿರಾಜ್, ವಿಕೆಟ್ ಬೇಟೆಯಾಡಲು ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಎದುರಾಳಿಗಳ ಪಾಲಿನ್ ರನ್ ಮಷಿನ್ ಆಗಿದ್ದಾರೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್… ಈ ಅಂಕಿಅಂಶಗಳು..

ಪ್ರಸಕ್ತ ಆವೃತ್ತಿಯಲ್ಲಿ ಸಿರಾಜ್
ಪ್ರಸಕ್ತ ಆವೃತ್ತಿಯಲ್ಲಿ 6 ಪಂದ್ಯಗಳಿಂದ 4 ವಿಕೆಟ್ ಉರುಳಿಸಿರುವ ಸಿರಾಜ್, 26 ರನ್ ನೀಡಿ 2 ವಿಕೆಟ್ ಉರುಳಿಸಿರುವುದು ಬೆಸ್ಟ್ ಪರ್ಫಾಮೆನ್ಸ್​ ಆಗಿದೆ. 10.40ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಇದಿಷ್ಟೇ ಅಲ್ಲ.! ಪ್ರಸಕ್ತ ಆವೃತ್ತಿಯಲ್ಲಿ ಪವರ್​​ ಪ್ಲೇನಲ್ಲಿ ಗರಿಷ್ಠ 10 ಸಿಕ್ಸರ್​ ಬಿಟ್ಟುಕೊಟ್ಟ ಅಪಖ್ಯಾತಿಯೂ ಸಿರಾಜ್​​ಗೆ ಸೇರುತ್ತೆ. ಸಿರಾಜ್​ರ ಈ ದುಬಾರಿ ಸ್ಪೆಲ್, ಆರ್​ಸಿಬಿಗೆ ಮಾತ್ರವಲ್ಲ. ಮುಂದಿನ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾಗೂ ಮಾರಕವೇ ಆಗಿದೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ; ಮುನಿಸು ಮರೆತು ಮತ್ತೆ ಚಿಗುರಿದ ಸ್ನೇಹ..!

ಒಟ್ನಲ್ಲಿ! ಆರ್​ಸಿಬಿ ಪಾಲಿನ ಮ್ಯಾಚ್ ವಿನ್ನರ್​ಗಳು ಎನಿಸಿಕೊಂಡ ಇವರಿಬ್ಬರು, ಪ್ರಸಕ್ತ ಆವೃತ್ತಿಯಲ್ಲಿ ಆರ್​ಸಿಬಿ ದಿಕ್ಕು ತಪ್ಪಲು ನೇರ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​ಸಿಬಿ ಪಾಲಿನ ವಿಲನ್ ಇವರು, ತಂಡ ಹಳ್ಳ ಹಿಡಿಯಲು ಕಾರಣನೂ ಇವರೇ..!

https://newsfirstlive.com/wp-content/uploads/2024/04/RCB-22.jpg

Load More