Advertisment

ಬಿಡದಿ ಮನೆಯ ‘ಹೊಸ ತೊಡಕು ಪಾಲಿಟಿಕ್ಸ್’​ಗೆ ಹೊಸ ತಿರುವು; ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಎಲೆಕ್ಷನ್ ಕಮಿಷನ್

author-image
Ganesh
Updated On
ಬಿಡದಿ ಮನೆಯ ‘ಹೊಸ ತೊಡಕು ಪಾಲಿಟಿಕ್ಸ್’​ಗೆ ಹೊಸ ತಿರುವು; ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಎಲೆಕ್ಷನ್ ಕಮಿಷನ್
Advertisment
  • ಬಿಡದಿ ತೋಟದ ಮನೆಗೆ ಚುನಾವಣಾ ಅಧಿಕಾರಿಗಳು ದಿಢೀರ್ ಭೇಟಿ
  • ಕಾಂಗ್ರೆಸ್​ ಟ್ವೀಟ್​ ಬೆನ್ನಲ್ಲೇ, ಕುಮಾರಸ್ವಾಮಿ ನಿವಾಸಕ್ಕೆ ಅಧಿಕಾರಿಗಳು ಭೇಟಿ
  • ಚುನಾವಣಾ ಅಧಿಕಾರಿಗಳು ಬಂದಿರೋದು ಸಂತೋಷ ಎಂದ ಹೆಚ್​ಡಿಕೆ

ಬಿಡದಿ ತೋಟದ ಮನೆಯ ‘ಹೊಸ ತೊಡಕು ಪಾಲಿಟಿಕ್ಸ್​’​​ ವಿಚಾರದಲ್ಲಿ ಚುನಾವಣಾ ಆಯೋಗ ಎಂಟ್ರಿಯಾಗಿದೆ. ಕರ್ನಾಟಕ ಕಾಂಗ್ರೆಸ್​ ಟ್ವೀಟ್ ಮಾಡಿದ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿಗಳ ಬಿಡದಿ ನಿವಾಸಕ್ಕೆ ಚುನಾವಣಾ ಅಧಿಕಾರಿಗಳು ದಿಢೀರ್ ಎಂಟ್ರಿಯಾಗಿದೆ.

Advertisment

ಕಾಂಗ್ರೆಸ್​ ಪ್ರಶ್ನೆ ಏನಾಗಿತ್ತು..?

ಜೆಡಿಎಸ್ ಪಕ್ಷದ ಹೆಡ್ಡಾಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಸೋಲಿನ ಭೀತಿಯಿಂದ ಹೊಸ ತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿಗಳಿದ್ದರೂ ಕರ್ನಾಟಕದ ಚುನಾವಣಾ ಅಧಿಕಾರಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ? ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ರಾಮನಗರ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇ? ಎಂದು ಪ್ರಶ್ನೆ ಮಾಡಿತ್ತು.

ಇದನ್ನೂ ಓದಿ: ಶ್ರೀಗಳು ಬಂದೋರಿಗೆ ಆಶೀರ್ವಾದ ಮಾಡಿ ವಿಭೂತಿ ಇಡ್ತಾರೆ ಅಷ್ಟೇ -ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್

Advertisment

ಈ ವಿಚಾರದಲ್ಲಿ ರಾಜಕೀಯ ಜೋರಾಗುತ್ತಿದ್ದಂತೆಯೇ, ಬಿಡದಿ ತೋಟದ ನಿವಾಸಕ್ಕೆ ಸಹಾಯಕ ಚುನಾವಣಾ ಅಧಿಕಾರಿ ರಮೇಶ್ ಹಾಗೂ ಮಾಗಡಿ ತಹಶಿಲ್ದಾರ್ ಶರತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರು, ಸ್ನೇಹಿತರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎನ್ನಲಾಗಿದೆ.

ಕುಮಾರಸ್ವಾಮಿ ಹೇಳಿದ್ದೇನು..?
ನನ್ನ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಸುಮಾರು ನೂರು ನೂರೈವತ್ತು ಜನರು ತೋಟದಲ್ಲಿ ಕೆಲಸ ಮಾಡ್ತಾರೆ. ಅವರಿಗೆ ಊಟದ ವ್ಯವಸ್ಥೆ ಮಾಡಿದ್ದು, ನಾಯಕರು ಸೇರುತ್ತೇವೆ, ಕಾರ್ಯಕರ್ತರಲ್ಲ. ನಾನು ಬಿಡದಿಗೆ ಹೋಗಲ್ಲ. ಅಲ್ಲಿ ಔತಣಕೂಟ ಏರ್ಪಡಿಸಿದ್ದು, ಬಿಡದಿ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಎಂದು ಸ್ಪಷ್ಟನೆ ನೀಡಿದ್ದಾರೆ.

publive-image

ಇದನ್ನೂ ಓದಿ: ತವರಲ್ಲೂ, ತವರಿನಾಚೆಯೂ ಮುಖಭಂಗ.. RCBಗೆ ಇರೋ ಮುಂದಿನ ಸವಾಲುಗಳು ಏನು?

ಚುನಾವಣಾಧಿಕಾರಿಗಳು ನಮ್ಮ ಮನೆಗೆ ಬಂದಿರೋದು ಸಂತೋಷ. ನನ್ನ ಮನೆಯ ಬಳಿ 100-150 ಕೆಲಸಗಾರರಿದ್ದಾರೆ. ಅವರಿಗಾಗಿ ಅಲ್ಲಿ ಊಟ ಮಾಡಿದ್ವಿ. ಎಲೆಕ್ಸನ್ ತಂತ್ರಗಾರಿಕೆ ಬಗ್ಗೆ ನಾವು ಸಭೆ ಮಾಡ್ತಿಲ್ಲ. ನನ್ನ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ಕೇಂದ್ರವೇ ನನ್ನ ತೋಟದ ಮನೆ. ಶಕ್ತಿ ಕೇಂದ್ರವನ್ನು ನಾನು ಕಾಂಗ್ರೆಸ್ ಕಚೇರಿಯಾಗಿ ಮಾಡೋಕೆ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment