newsfirstkannada.com

ಕರೆಂಟ್ ಶಾಕ್​ನಿಂದ ದಿನಗೂಲಿ ಕಾರ್ಮಿಕ ಸಾವು.. ಕ್ಯಾರೇ ಅನ್ನದ ಅಧಿಕಾರಿಗಳ ಮೇಲೆ ತೀವ್ರ ಆಕ್ರೋಶ

Share :

Published March 29, 2024 at 1:48pm

Update March 29, 2024 at 1:58pm

    ಯುವಕ ಮೃತಪಟ್ಟರೂ ಸಾಂತ್ವನ ಹೇಳಲು ಬಾರದ ಅಧಿಕಾರಿಗಳು

    ವಿದ್ಯುತ್ ತಂತಿಗೆ ಅಡ್ಡವಾಗಿ ಬೆಳೆದಿದ್ದ ಮರ ಕಡಿಯುವಾಗ ಘಟನೆ

    ಮಗನನ್ನು ಕಳೆದುಕೊಂಡು ತೀರ ದುಃಖದಲ್ಲಿರುವ ಕುಟುಂಬಸ್ಥರು

ತುಮಕೂರು: ಕರೆಂಟ್ ಶಾಕ್​ನಿಂದ ದಿನಗೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಕ್ಯಾದಗೊಂಡನಹಳ್ಳಿಯಲ್ಲಿ ನಡೆದಿದೆ.

ತಾಲೂಕಿನ ದೊಡ್ಡಯಲ್ಕೂರು ಗ್ರಾಮದ ನಿವಾಸಿ ನರೇಂದ್ರ ಕುಮಾರ್ (25) ಮೃತ ದುರ್ದೈವಿ. ಕ್ಯಾದಗೊಂಡನಹಳ್ಳಿಯಲ್ಲಿ ವಿದ್ಯುತ್ ತಂತಿಗೆ ಅಡ್ಡವಾಗಿ ಮರವೊಂದು ಬೆಳೆದಿತ್ತು. ಇದರಿಂದ ಆಗಾಗ ವಿದ್ಯುತ್ ಸಮಸ್ಯೆ ಎದುರಾಗುತ್ತಿತ್ತು. ಹೀಗಾಗಿ ಮರ ಕಡಿಯಲೆಂದು ಹೋಗಿದ್ದಾಗ ವಿದ್ಯುತ್ ತಗುಲಿ ಯುವಕ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಏಲಕ್ಕಿ ಕದ್ದನೆಂದು ವ್ಯಕ್ತಿ ಮೇಲೆ ಹಲ್ಲೆ, ಮಾಲೀಕನ ಶೂ ನೆಕ್ಕುವಂತೆ ಬಲವಂತ ಮಾಡಿದ ಸಿಬ್ಬಂದಿ

ಯುವಕನನ್ನ ಕಳೆದುಕೊಂಡ ಆಕ್ರೋಶದಲ್ಲಿರುವ ಸಂಬಂಧಿಗಳು ಪರಿಹಾರ ನೀಡುವಂತೆ ಆಗ್ರಹಿಸಿ ಮಧುಗಿರಿ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಾವಾದರೂ ನಮಗೇನು ಗೊತ್ತೇ ಇಲ್ಲ ಎನ್ನುವಂತೆ ವಿದ್ಯುತ್ ಇಲಾಖೆ ಅಧಿಕಾರಿಗಳಿದ್ದಾರೆ. ಮೃತನ ಕುಟುಂಬಸ್ಥರಿಗೆ ಸಾಂತ್ವನ ಕೂಡ ಹೇಳಿಲ್ಲ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರೆಂಟ್ ಶಾಕ್​ನಿಂದ ದಿನಗೂಲಿ ಕಾರ್ಮಿಕ ಸಾವು.. ಕ್ಯಾರೇ ಅನ್ನದ ಅಧಿಕಾರಿಗಳ ಮೇಲೆ ತೀವ್ರ ಆಕ್ರೋಶ

https://newsfirstlive.com/wp-content/uploads/2024/03/TMK_DIED.jpg

Load More