newsfirstkannada.com

ಕಾಡಾನೆ ದಾಳಿ.. ಸಿದ್ದು ಸರ್ಕಾರದ 15 ಲಕ್ಷ ರೂ. ಪರಿಹಾರ ನಿರಾಕರಿಸಿದ ಕೇರಳದ ಕುಟುಂಬ; ಕಾರಣವೇನು?

Share :

Published February 27, 2024 at 8:42pm

Update February 27, 2024 at 8:45pm

    ರಾಜ್ಯದ ಆನೆ ಕೇರಳದ ಮನೆಗೆ ನುಗ್ಗಿ ತುಳಿದು ಸಾಯಿಸಿದ್ದ ದುರಂತ

    ಅಜೀಶ್ ಮನೆಗೆ ಭೇಟಿ ನೀಡಿದ್ದ ವಯನಾಡ್ ಸಂಸದ ರಾಹುಲ್ ಗಾಂಧಿ

    ಕರ್ನಾಟಕ ಸರ್ಕಾರದ ಪರಿಹಾರ ನಿರಾಕರಿಸಿದ ಕೇರಳದ ಅಜೀಶ್ ಕುಟುಂಬ

ವಯನಾಡ್‌: ಕಾಡಾನೆಯ ದಾಳಿಗೆ ಸಾವನ್ನಪ್ಪಿದ ಕೇರಳದ ಅಜೀಶ್ ಕುಟುಂಬ ಕರ್ನಾಟಕ ಸರ್ಕಾರದ ಪರಿಹಾರವನ್ನು ನಿರಾಕರಿಸಿದೆ. ರಾಜ್ಯದ ಆನೆ ಕೇರಳದ ಮನೆಗೆ ನುಗ್ಗಿ ಸಾವಿಗೆ ಕಾರಣವಾಗಿದೆ ಎಂದು ಅರಣ್ಯ ಇಲಾಖೆಯಿಂದ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿತ್ತು. ಆದರೆ, ಈ ಪರಿಹಾರದ ಮೊತ್ತವನ್ನು ಸ್ವೀಕರಿಸಲು ಕೇರಳದ ಬೇಲೂರು ಮಖ್ನಾದಲ್ಲಿರುವ ಅಜೀಶ್ ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ.

ಕಳೆದ ಫೆಬ್ರವರಿ 10ರಂದು ಮನೆಗೆ ನುಗ್ಗಿದ ಆನೆ ಕಾಲಿಗೆ ಸಿಕ್ಕ ಅಜೀಶ್ ಅವರನ್ನು ತುಳಿದು ಸಾಯಿಸಿತ್ತು. ಈ ಕಾಡಾನೆಯ ದಾಳಿ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಆನೆ ದಾಳಿಗೆ ಸಾವನ್ನಪ್ಪಿದ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.

ಅಜೀಶ್ ನಿವಾಸಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭೇಟಿ ನೀಡಿ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯನ್ನು ರಾಜ್ಯದ ನಾಗರಿಕ ಎಂದು ಪರಿಗಣಿಸಿ ಪರಿಹಾರ ಬಿಡುಗಡೆ ಮಾಡಲು ಮುಂದಾಗಿದ್ದರು. ರಾಜ್ಯ ಸರ್ಕಾರದ ಈ ನಿರ್ಧಾರವನ್ನ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ನಾಯಕರು ಖಂಡಿಸಿದ್ದರು. ರಾಜ್ಯದಲ್ಲಿ ಆನೆ ದಾಳಿಗೆ ಸಾವನ್ನಪ್ಪುವವರಿಗೆ 5 ಲಕ್ಷ ರೂಪಾಯಿಯೂ ಸರಿಯಾಗಿ ಸಿಗೋದಿಲ್ಲ. ಆದರೆ ಕೇರಳದಲ್ಲಿ ಆನೆಯಿಂದ ಸತ್ತ ವ್ಯಕ್ತಿ 15 ಲಕ್ಷ ರೂಪಾಯಿ ನೀಡುವುದು ಸರೀನಾ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಕೇರಳದ ವ್ಯಕ್ತಿ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ವಿಚಾರ ಕರ್ನಾಟಕದ ಅಧಿವೇಶನದಲ್ಲಿ ಪ್ರತಿಧ್ವನಿಸಿತ್ತು. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ನಾಯಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮೆಚ್ಚಿಸಲು ಅವರ ಲೋಕಸಭಾ ಕ್ಷೇತ್ರದ ವ್ಯಕ್ತಿಗೆ ಪರಿಹಾರ ನೀಡಲಾಗುತ್ತಿದೆ. ನಮ್ಮ ತೆರಿಗೆ ಹಣವನ್ನು ಪಕ್ಕದ ರಾಜ್ಯಕ್ಕೆ ನೀಡುವುದನ್ನು ಖಂಡಿಸಿತ್ತು.

ಇದನ್ನೂ ಓದಿ: ಕೇರಳದಲ್ಲಿ ಆನೆ ದಾಳಿಗೆ ಕರ್ನಾಟಕದಿಂದ ₹15 ಲಕ್ಷ ಪರಿಹಾರ ಯಾಕೆ? ಬಿಜೆಪಿ ನಾಯಕರ ಕೈಗೆ ಹೊಸ ಅಸ್ತ್ರ!

ಕಾಂಗ್ರೆಸ್ ಸರ್ಕಾರದ ಪರಿಹಾರದ ವಿವಾದ ಹಾಗೂ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇರಳದ ಅಜೀಶ್ ಕುಟುಂಬ 15 ಲಕ್ಷ ರೂಪಾಯಿ ಪರಿಹಾರ ಸ್ವೀಕರಿಸದಿರಲು ನಿರ್ಧಾರ ಮಾಡಿದೆ. ಮನೆಗೆ ಬಂದು ಸಾಂತ್ವನ ಹೇಳಿದ ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ತಿಳಿಸಿರುವ ಕುಟುಂಬಸ್ಥರು ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಪರಿಹಾರದ ಹಣ ಬೇಡ ಎಂದು ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಡಾನೆ ದಾಳಿ.. ಸಿದ್ದು ಸರ್ಕಾರದ 15 ಲಕ್ಷ ರೂ. ಪರಿಹಾರ ನಿರಾಕರಿಸಿದ ಕೇರಳದ ಕುಟುಂಬ; ಕಾರಣವೇನು?

https://newsfirstlive.com/wp-content/uploads/2024/02/Kerala-Elephant-Attack.jpg

Load More