ದುಬೈನಲ್ಲಿ ಭರ್ಜರಿ ಮಳೆ; ನೆರೆರಾಷ್ಟ್ರದಲ್ಲಿರೋ ಭಾರತೀಯರಿಗೆ ಮಹತ್ವದ ಸೂಚನೆ

author-image
Veena Gangani
Updated On
ದುಬೈನಲ್ಲಿ ಭರ್ಜರಿ ಮಳೆ; ನೆರೆರಾಷ್ಟ್ರದಲ್ಲಿರೋ ಭಾರತೀಯರಿಗೆ ಮಹತ್ವದ ಸೂಚನೆ
Advertisment
  • ಧಾರಾಕಾರ ಮಳೆಗೆ ತತ್ತರಿಸಿದ ನೆರೆರಾಷ್ಟ್ರ ಯೂನೈಟೆಡ್​​ ಅರಬ್​​​ ಎಮಿರೇಟ್ಸ್​
  • ರಣ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದ ಶಾಲಾ ಬಸ್​​, ದುಬಾರಿ ಕಾರುಗಳು
  • ವಿಮಾನಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಸೀಮಿತಗೊಳಿಸಿದೆ ರಾಯಭಾರ ಕಚೇರಿ

ದುಬೈ: ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಗೆ ದುಬೈನ ಜನ ತತ್ತರಿಸಿ ಹೋಗಿದ್ದಾರೆ. ಸಣ್ಣ ಹನಿಗಳಿಂದ ಶುರುವಾದ ಮಳೆ ಇಂದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ರಣ ಭೀಕರ ಮಳೆಗೆ ರಸ್ತೆ, ಮನೆಗಳು ಜಲಾವೃತಗೊಂಡಿದ್ದು ಅಲ್ಲಿನ ಜನ ಜೀವನವೇ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ:Heavy Rain: ಭರ್ಜರಿ ಮಳೆಗೆ ತತ್ತರಿಸಿದ ಮಹಾ ನಗರ; 20ಕ್ಕೂ ಹೆಚ್ಚು ಸಾವು

publive-image

ಈ ಮಟ್ಟಿಗೆ ಸುರಿಯ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ದುಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಅಥವಾ ಅದರ ಮೂಲಕ ಹಾದು ಹೋಗುವ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯರಿಗೆ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆಯೊಂದನ್ನು ನೀಡಿದೆ.

ಇದನ್ನೂ ಓದಿ: ನೇಹಾಳ ಒಳ್ಳೆಯ ಗುಣ ನೋಡಿ ಡ್ರೈವರ್ ತನ್ನ ಮಗಳಿಗೆ ಆಕೆಯ ಹೆಸರನ್ನೇ ಇಟ್ಟಿದ್ದರು..!

publive-image

ಯುಎಇ ಅಧಿಕಾರಿಗಳು ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ. ನಿಮಾನಗಳ ನಿರ್ಗಮನ ದಿನಾಂಕ ಮತ್ತು ಸಮಯದ ಕುರಿತು ಆಯಾ ವಿಮಾನಯಾನ ಸಂಸ್ಥೆಗಳಿಂದ ಅಂತಿಮ ದೃಢೀಕರಣದ ನಂತರವೇ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ವಾರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಳಬರುವ ವಿಮಾನಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಸೀಮಿತಗೊಳಿಸಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

publive-image

ಇನ್ನು, ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನಲ್ಲಿ ಸುರಿದ ಧಾರಾಕಾರ ಮಳೆಗೆ ದುಬೈ ಸೇರಿದಂತೆ ಹಲವಾರು ನಗರದಲ್ಲಿನ ವಾಹನಗಳು ನೀರಿನಲ್ಲಿಯೇ ಸಿಲುಕಿಕೊಂಡಿವೆ. ಅದರಲ್ಲೂ 10 ಶಾಲಾ ಬಸ್​​ ಸೇರಿ ಬೈಕ್​​, ದುಬಾರಿ ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಯುಎಇ ಆಡಳಿತವು ಶಾಲೆಗಳು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿವೆ. ಸರ್ಕಾರಿ ನೌಕರರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment