newsfirstkannada.com

ನೇಹಾಳ ಒಳ್ಳೆಯ ಗುಣ ನೋಡಿ ಡ್ರೈವರ್ ತನ್ನ ಮಗಳಿಗೆ ಆಕೆಯ ಹೆಸರನ್ನೇ ಇಟ್ಟಿದ್ದರು..!

Share :

Published April 20, 2024 at 2:33pm

    ಯಾರನ್ನೂ ದೂಷಿಸುತ್ತಿರಲಿಲ್ಲ ನೇಹಾ, ಎಲ್ಲರಿಗೂ ಅಚ್ಚುಮೆಚ್ಚು

    ರಾಜಕೀಯ ಇಷ್ಟ ಇರಲಿಲ್ಲ, ಸಮಾಜ ಸೇವೆ ಮೇಲೆ ಆಸಕ್ತಿ

    ಮೊನ್ನೆಯಷ್ಟೇ ಬೀದಿ ಗಲಾಟೆ ನಿಲ್ಲಿಸಿ ಬಂದಿದ್ದ ನೇಹಾ ಹಿರೇಮಠ್

ನೇಹಾ ಹಿರೇಮಠ್ ಕೊಲೆ ಪ್ರಕರಣವು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇಡೀ ರಾಜ್ಯವೇ ಆರೋಪಿ ಫಯಾಜ್​ನ ಕೃತ್ಯವನ್ನು ಖಂಡಿಸ್ತಿದೆ. ಹಂತಕನಿಗೆ ಕಠಿಣ ಶಿಕ್ಷೆ ಆಗಬೇಕು, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಧ್ವನಿ ಜೋರಾಗಿದೆ.

ಇತ್ತ ಮಗಳನ್ನು ಕಳೆದುಕೊಂಡ ನೇಹಾ ಪೋಷಕರಾದ ನಿರಂಜನ್ ಹಿರೇಮಠ್ ಹಾಗೂ ಗೀತಾ ಹಿರೇಮಠ್ ದಿಗ್ಬ್ರಾಂತರಾಗಿದ್ದಾರೆ. ಇದ್ದ ಮಗಳನ್ನು ಕಳೆದುಕೊಂಡು ಬದುಕಿನ ಅತಿ ದೊಡ್ಡ ಸಂಕಷ್ಟವನ್ನು ಅನುಭವಿಸ್ತಿದ್ದಾರೆ. ಮನೆ ತುಂಬಾ ಓಡಾಡಿಕೊಂಡಿದ್ದ ಮಗಳು ಈಗಿಲ್ಲ ಎಂದು ಯೋಚಿಸುತ್ತಿರುವಾಗಲೇ ಆಕೆಯ ಮಾತುಗಳು, ಓಡಾಟಗಳು, ಮಮ್ಮಿ, ಡ್ಯಾಡಿ ಎಂದು ಬಾಯಿ ತುಂಬಾ ಕೆರೆಯುತ್ತಿದ್ದ ಕ್ಷಣಗಳು ಕಣ್ಮುಂದೆ ಬರುತ್ತಿವೆ.

ಇದನ್ನೂ ಓದಿ:ಮೂರು ತಿಂಗಳ ಹಿಂದೆ ಸ್ವಂತ ತಂದೆಯ ಮೇಲೆ ಹಲ್ಲೆ ನಡೆಸಿ ಠಾಣೆಗೆ ಹೋಗಿದ್ದ ಫಯಾಜ್..!

ಮನೆಯ ಮಹಾಲಕ್ಷ್ಮಿ ಆಗಿದ್ದಳು
ಇಂದು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗಿದ್ದರು. ಈ ವೇಳೆ ನೇಹಾಳ ತಂದೆ ಮಗಳ ಗುಣವನ್ನು ನೆನೆದು ಕಣ್ಣೀರು ಇಟ್ಟಿದ್ದಾರೆ. ಅವರೇ ಹೇಳುವಂತೆ.. ಆಕೆಯ ಹೆಸರೇ ಹೇಳುವಂತೆ ನೇಹಾ. ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಿದ್ದಳು. ಯಾರನ್ನೂ ದ್ವೇಷಿಸುತ್ತಿರಲಿಲ್ಲ. ನಮಗೆ ಮಗಳು ಹುಟ್ಟಿದ ಮೇಲೆ ಎಲ್ಲ ಯೋಗವೂ ಕೂಡಿಬಂದಿತ್ತು. ಅವಳು ಮನೆಯ ಮಹಾಲಕ್ಷ್ಮಿ ಆಗಿದ್ದಳು. ಮನೆಯ ಕೆಲಸಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದಳು.

ಇದನ್ನೂ ಓದಿ: ನೇಹಾ ಹಿರೇಮಠ್ ಕೊಲೆ ಕೇಸ್; ರಾಜ್ಯದ ಕ್ಷಮೆ ಕೇಳಿ ಗಳಗಳನೇ ಕಣ್ಣೀರಿಟ್ಟ ಆರೋಪಿ ಫಯಾಜ್ ತಾಯಿ

ಬಡ ಮಕ್ಕಳ ಸ್ಥಿತಿಗೆ ಮರಗುತ್ತಿದ್ದಳು
ಯಾರಿಗೇ ಅನ್ಯಾಯ ಆಗಿದ್ದರೂ ಆಕೆ ಸಹಿಸುತ್ತಿರಲಿಲ್ಲ. ರಾಜಕೀಯ ಆಕೆಗೆ ಇಷ್ಟ ಇರಲಿಲ್ಲ. ಸಮಾಜ ಸೇವೆ ಮಾಡಬೇಕು ಎಂಬ ಆಸೆ ಇತ್ತು. ಅವಳ ಒಳ್ಳೆತನ ನೋಡಿಯೇ ನಮ್ಮನೆ ಡ್ರೈವರ್​ ತನ್ನ 2ನೇ ಮಗಳಿಗೆ ನೇಹಾ ಎಂದು ಹೆಸರಿಟ್ಟಿದ್ದಾನೆ. ಯಾರ ಜೊತೆಯೂ ಜೋರಾಗಿ ಮಾತನಾಡ್ತಿರಲಿಲ್ಲ. ಬದಲಿಗೆ ಅಣ್ಣ, ಅಕ್ಕ, ಕಾಕಾ, ಆಂಟಿ, ದೊಡ್ಡಮ್ಮ ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಮನೆಗೆ ಬಂದವರು ನನ್ನನ್ನ ಕೇಳುತ್ತಿರಲಿಲ್ಲ, ನೇಹಾ ಎಲ್ಲಿ ಎನ್ನುತ್ತಿದ್ದರು. ಬಡವರ ಮಕ್ಕಳಿಗೆ ಏನಾದರೂ ಆಗಿದ್ದರೆ ಅಯ್ಯೋ ಎಂದು ಮರಗುತ್ತಿದ್ದಳು ಎಂದು ಕಣ್ಣೀರು ಇಟ್ಟಿದ್ದಾರೆ.

ಮೊನ್ನೆಯಷ್ಟೇ ಅಯ್ಯೋ ಅಪ್ಪ ಎಂದಿದ್ದಳು
ಮೊನ್ನೆ ರೋಡ್​ನಲ್ಲಿ ಬರುವಾಗ ರಾತ್ರಿ 11ವರೆಗೆ ಒಂದು ಹುಡುಗಗೆ ಹೊಡೆಯುತ್ತಿದ್ದರು. ಆಗ ಕಾರಿನಲ್ಲಿ ಕೂತುಕೊಂಡೇ ಅಯ್ಯೋ ಅಪ್ಪ, ಅಮ್ಮ ಅಲ್ಲಿ ನೋಡಿ ಹುಡಗನಿಗೆ ಹೊಡೆಯುತ್ತಿದ್ದಾರೆ ನೋಡಿ. ಕಾರು ನಿಲ್ಲಿಸಿ ಎಂದು ಹೇಳಿದ್ದಳು. ಬಳಿಕ ನಾನು ಹೋಗಿ ಗಲಾಟೆ ನಿಲ್ಲಿಸಿ ಬಂದಿದ್ದೆ ಎಂದು ಮಗಳ ಗುಣವನ್ನು ನೆನಪಿಸಿಕೊಂಡು ದುಃಖಿಸುತ್ತಿದ್ದಾರೆ.

ಇದನ್ನೂ ಓದಿ:INSPIRING: ಹಳಿ ತಪ್ಪಿದ್ದ SRH​​ಗೆ ಹೊಸ ದಾರಿ ತೋರಿಸಿದ ದಂಡನಾಯಕ, ಕಮ್ಮಿನ್ಸ್ ​ಯಶಸ್ಸಿನ ರೋಚಕ ಸ್ಟೋರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾಳ ಒಳ್ಳೆಯ ಗುಣ ನೋಡಿ ಡ್ರೈವರ್ ತನ್ನ ಮಗಳಿಗೆ ಆಕೆಯ ಹೆಸರನ್ನೇ ಇಟ್ಟಿದ್ದರು..!

https://newsfirstlive.com/wp-content/uploads/2024/04/NEHA-HEREMUTH.jpg

Load More