newsfirstkannada.com

ದುಬೈನಲ್ಲಿ ಭರ್ಜರಿ ಮಳೆ; ನೆರೆರಾಷ್ಟ್ರದಲ್ಲಿರೋ ಭಾರತೀಯರಿಗೆ ಮಹತ್ವದ ಸೂಚನೆ

Share :

Published April 20, 2024 at 5:15pm

Update April 20, 2024 at 5:17pm

  ಧಾರಾಕಾರ ಮಳೆಗೆ ತತ್ತರಿಸಿದ ನೆರೆರಾಷ್ಟ್ರ ಯೂನೈಟೆಡ್​​ ಅರಬ್​​​ ಎಮಿರೇಟ್ಸ್​

  ರಣ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದ ಶಾಲಾ ಬಸ್​​, ದುಬಾರಿ ಕಾರುಗಳು

  ವಿಮಾನಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಸೀಮಿತಗೊಳಿಸಿದೆ ರಾಯಭಾರ ಕಚೇರಿ

ದುಬೈ: ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಗೆ ದುಬೈನ ಜನ ತತ್ತರಿಸಿ ಹೋಗಿದ್ದಾರೆ. ಸಣ್ಣ ಹನಿಗಳಿಂದ ಶುರುವಾದ ಮಳೆ ಇಂದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ರಣ ಭೀಕರ ಮಳೆಗೆ ರಸ್ತೆ, ಮನೆಗಳು ಜಲಾವೃತಗೊಂಡಿದ್ದು ಅಲ್ಲಿನ ಜನ ಜೀವನವೇ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: Heavy Rain: ಭರ್ಜರಿ ಮಳೆಗೆ ತತ್ತರಿಸಿದ ಮಹಾ ನಗರ; 20ಕ್ಕೂ ಹೆಚ್ಚು ಸಾವು

ಈ ಮಟ್ಟಿಗೆ ಸುರಿಯ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ದುಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಅಥವಾ ಅದರ ಮೂಲಕ ಹಾದು ಹೋಗುವ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯರಿಗೆ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆಯೊಂದನ್ನು ನೀಡಿದೆ.

ಇದನ್ನೂ ಓದಿ: ನೇಹಾಳ ಒಳ್ಳೆಯ ಗುಣ ನೋಡಿ ಡ್ರೈವರ್ ತನ್ನ ಮಗಳಿಗೆ ಆಕೆಯ ಹೆಸರನ್ನೇ ಇಟ್ಟಿದ್ದರು..!

ಯುಎಇ ಅಧಿಕಾರಿಗಳು ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ. ನಿಮಾನಗಳ ನಿರ್ಗಮನ ದಿನಾಂಕ ಮತ್ತು ಸಮಯದ ಕುರಿತು ಆಯಾ ವಿಮಾನಯಾನ ಸಂಸ್ಥೆಗಳಿಂದ ಅಂತಿಮ ದೃಢೀಕರಣದ ನಂತರವೇ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ವಾರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಳಬರುವ ವಿಮಾನಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಸೀಮಿತಗೊಳಿಸಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಇನ್ನು, ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನಲ್ಲಿ ಸುರಿದ ಧಾರಾಕಾರ ಮಳೆಗೆ ದುಬೈ ಸೇರಿದಂತೆ ಹಲವಾರು ನಗರದಲ್ಲಿನ ವಾಹನಗಳು ನೀರಿನಲ್ಲಿಯೇ ಸಿಲುಕಿಕೊಂಡಿವೆ. ಅದರಲ್ಲೂ 10 ಶಾಲಾ ಬಸ್​​ ಸೇರಿ ಬೈಕ್​​, ದುಬಾರಿ ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಯುಎಇ ಆಡಳಿತವು ಶಾಲೆಗಳು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿವೆ. ಸರ್ಕಾರಿ ನೌಕರರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಬೈನಲ್ಲಿ ಭರ್ಜರಿ ಮಳೆ; ನೆರೆರಾಷ್ಟ್ರದಲ್ಲಿರೋ ಭಾರತೀಯರಿಗೆ ಮಹತ್ವದ ಸೂಚನೆ

https://newsfirstlive.com/wp-content/uploads/2024/04/dubai-rain-2.jpg

Load More