newsfirstkannada.com

ಮತ್ತೆ ಹುಟ್ಟಿ ಬಾ ಪಾಪಾ.. ಕಿರುತೆರೆ ನಟಿ ಪವಿತ್ರಾ ಜಯರಾಮ್ ಸಾವಿಗೆ ಗೆಳೆಯನ ಭಾವುಕ ಪೋಸ್ಟ್‌; ಹೇಳಿದ್ದೇನು?

Share :

Published May 14, 2024 at 12:11pm

Update May 14, 2024 at 12:12pm

    ತೆಲುಗಿನ ತ್ರಿನಯನಿ ಧಾರಾವಾಹಿ ಖ್ಯಾತಿಯ ಪವಿತ್ರಾ ಸಾವಿಗೆ ಕಂಬನಿ

    ಪವಿತ್ರಾ ಜಯರಾಮ್ ಸಾವಿಗೆ ಭಾವುಕ ಪೋಸ್ಟ್ ಮಾಡಿದ ಚಂದ್ರಕಾಂತ್

    ಕಾರಿನಲ್ಲಿ ಹೋಗುತ್ತಿದ್ದಾಗ ಮಳೆ ಬಂತು.. ಆಮೇಲೆ ಆಗಿದ್ದೇನು ಗೊತ್ತಾ?

ಕಿರುತೆರೆ ನಟಿ ಪವಿತ್ರಾ ಜಯರಾಮ್ ಅವರ ಸಾವಿನ ಆಘಾತದಿಂದ ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ. ತ್ರಿನಯನಿ ಧಾರಾವಾಹಿ ಖ್ಯಾತಿಯ ಪವಿತ್ರಾ ಸಾವಿಗೆ ಇಡೀ ತೆಲುಗು ಕಿರುತೆರೆಯ ತಾರಾಲೋಕ ದಿಗ್ಭ್ರಮೆಗೊಂಡಿದೆ. ಪವಿತ್ರಾ ಜಯರಾಮ್ ಅವರ ಜೊತೆ ತೆಲುಗು ಸೀರಿಯಲ್‌ನಲ್ಲಿ ನಟಿಸಿದ್ದ ಚಂದ್ರಕಾಂತ್ ಅವರು ನಟಿಯ ಸಾವಿಗೆ ಭಾವುಕ ಪೋಸ್ಟ್ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ‘ಪವಿ ಉಸಿರು ನಿಲ್ಲಿಸಿಬಿಟ್ಟಳು..’ ಪವಿತ್ರ ಜಯರಾಂ ಸಾವಿನ ಕೊನೆ ಕ್ಷಣಗಳ ವಿವರಿಸಿ ಕಣ್ಣೀರಿಟ್ಟ ಸ್ನೇಹಿತ.. 

ಕಳೆದ ಮೇ 12ರಂದು ಪವಿತ್ರಾ ಜಯರಾಮ್ ಅವರು ಬೆಂಗಳೂರಿಂದ ಹೈದರಾಬಾದ್‌ಗೆ ತೆರಳುವಾಗ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪವಿತ್ರಾ ಜಯರಾಮ್ ಅವರ ಅಂತ್ಯಕ್ರಿಯೆ ನಿನ್ನೆ ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿಯಲ್ಲಿ ನೆರವೇರಿದೆ. ಪ್ರೀತಿಯ ಅಮ್ಮನನ್ನು ಕಳೆದುಕೊಂಡ ಮಕ್ಕಳು ಸಂಕಟ ಪಡುತ್ತಾ ಇದ್ದರೆ ಪವಿತ್ರಾ ಜಯರಾಮ್ ಅವರ ಇಂಡಸ್ಟ್ರಿ ಸ್ನೇಹಿತರು, ಗೆಳೆಯರು ಅತೀವ ದುಃಖ ವ್ಯಕ್ತಪಡಿಸುತ್ತಿದ್ದಾರೆ.

ಕಿರುತೆರೆ ನಟ ಚಂದ್ರಕಾಂತ್ ಅವರು ಪವಿತ್ರಾ ಜಯರಾಮ್ ಸಾವಿನ ಹಿನ್ನೆಲೆಯಲ್ಲಿ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಪವಿತ್ರಾ ಜೊತೆ ತೆಗೆದುಕೊಂಡ ಕೊನೇ ಫೋಟೋ ಪೋಸ್ಟ್‌ ಮಾಡಿ ಭಾವುಕರಾಗಿದ್ದಾರೆ. ಪಾಪಾ ಇದು ನಾನು ನಿನ್ನ ಜೊತೆ ತೆಗೆದುಕೊಂಡ ಕೊನೆಯ ಫೋಟೋ. ನನ್ನ ಬಿಟ್ಟು ನೀನು ಒಬ್ಬಳೇ ಹೋಗಿರೋದನ್ನ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನಗಾಗಿ ಮತ್ತೊಮ್ಮೆ ಬಾ. ನನ್ನ ಪವಿ ಇನ್ನಿಲ್ಲ. ದಯವಿಟ್ಟು ಮತ್ತೆ ಹುಟ್ಟಿ ಬಂದು ನನ್ನ ಕಣ್ಣೀರು ನಿಲ್ಲಿಸು ಎಂದು ಬರೆದುಕೊಂಡು ಕಣ್ಣೀರು ಹಾಕಿದ್ದಾರೆ.

ಚಂದ್ರಕಾಂತ್ ಅವರು ಪವಿತ್ರಾ ಜಯರಾಮ್ ಅವರ ಜೊತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಮೇ 12ರಂದು ಮದರ್ಸ್‌ ಡೇ ಆಚರಿಸಲಾಗಿತ್ತು. ಇದಾದ ಬಳಿಕ ಪವಿತ್ರಾ ಜಯರಾಮ್ ಅವರು ಕುಟುಂಬದ ಸದಸ್ಯರು ಹಾಗೂ ಗೆಳೆಯರ ಜೊತೆ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ಗೆ ತೆರಳಿದ್ದಾರೆ. ಅಂದು ಮಳೆ ಬಂದ ಹಿನ್ನೆಲೆಯಲ್ಲಿ 3 ಗಂಟೆ ತಡವಾಗಿದೆ. ಮಧ್ಯರಾತ್ರಿ 12.30ರ ಸಮಯದಲ್ಲಿ ಸಾರಿಗೆ ಬಸ್‌ ಪವಿತ್ರ ಜಯರಾಮ್ ಅವರ ಕಾರನ್ನು ಓವರ್ ಟೇಕ್ ಮಾಡಿದೆ. ಪವಿತ್ರಾ ಜಯರಾಮ್ ಅವರ ಕಾರು ಚಾಲಕ ಬಲಗಡೆಯಿದ್ದ ಡಿವೈಡರ್‌ಗೆ ಗುದ್ದಿದ್ದಾನೆ.

ಇದನ್ನೂ ಓದಿ: ಪವಿತ್ರ ಜಯರಾಮ್ ಸಾವಿಗೆ ಆ್ಯಂಬುಲೆನ್ಸ್​ ಬಾರದಿರೋದೇ ಕಾರಣ -ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಸ್ನೇಹಿತ 

ಭೀಕರ ರಸ್ತೆ ಅಪಘಾತದ ಬಳಿಕ ಆ್ಯಂಬುಲೆನ್ಸ್ ಬರುವುದು ತಡವಾಗಿದೆ. ಕೊನೆಗೂ ಪವಿತ್ರಾ ಜಯರಾಮ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ಬ್ರೈನ್ ಸ್ಟ್ರೋಕ್ ಆಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಪವಿತ್ರಾ ಅವರ ಜೊತೆಗಿದ್ದ ಚಂದ್ರಕಾಂತ್ ಅವರಿಗೆ ಗಾಯಗಳಾಗಿದೆ. ಮಧ್ಯರಾತ್ರಿ 1 ಗಂಟೆಗೆ ಆಸ್ಪತ್ರೆಗೆ ಹೋಗಿದ್ದು 4 ಗಂಟೆಯ ಹೊತ್ತಿಗೆ ನನಗೆ ಪ್ರಜ್ಞೆ ಬಂದಿದೆ. ಆಗ ಪವಿತ್ರಾ ಜಯರಾಮ್‌ ಸಾವನ್ನಪ್ಪಿದ್ದರು ಎಂದು ಚಂದ್ರಕಾಂತ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಹುಟ್ಟಿ ಬಾ ಪಾಪಾ.. ಕಿರುತೆರೆ ನಟಿ ಪವಿತ್ರಾ ಜಯರಾಮ್ ಸಾವಿಗೆ ಗೆಳೆಯನ ಭಾವುಕ ಪೋಸ್ಟ್‌; ಹೇಳಿದ್ದೇನು?

https://newsfirstlive.com/wp-content/uploads/2024/05/Pavithra-Jayaram-2-1.jpg

Load More