ಲಾರ್ಡ್ಸ್ ಇತಿಹಾಸದ ಪುಟಕ್ಕೆ ಕಪ್ಪುಚುಕ್ಕೆಯಾದ ವಿವಾದಗಳು
ಟೆಸ್ಟ್ ಮುಗಿದರೂ ವಿವಾದಗಳ ಬಗ್ಗೆ ಚರ್ಚೆ ಮಾತ್ರ ನಿಲ್ಲುತ್ತಿಲ್ಲ
ಈ ಟೆಸ್ಟ್ ಸರಣಿಗ್ಯಾಕೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಾರೆ?
ಆ್ಯಷಸ್ ಟೆಸ್ಟ್ ಸರಣಿಯ 2ನೇ ಪಂದ್ಯ ಮುಗಿದು 1 ದಿನ ಕಳೆದ್ರೂ, ಈ ಪಂದ್ಯದ ಬಗೆಗಿನ ಚರ್ಚೆಗಳು ಮಾತ್ರ ನಿಂತಿಲ್ಲ. ಯಾಕಂದ್ರೆ, ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳೋ ಲಾರ್ಡ್ಸ್ ಈ ಬಾರಿ ಮೇಲಿಂದ ಮೇಲೆ ಕಾಂಟ್ರವರ್ಸಿಗಳಿಗೆ ಸಾಕ್ಷಿಯಾಯಿತು. ಒಂದಲ್ಲ, ಎರಡಲ್ಲ 5 ವಿವಾದಗಳು ಶ್ರೀಮಂತ ಕ್ರಿಕೆಟ್ ಪರಂಪರೆಯನ್ನ ಹೊಂದಿರೋ ಲಾರ್ಡ್ಸ್ ಇತಿಹಾಸದ ಪುಟಕ್ಕೆ ಕಪ್ಪುಚುಕ್ಕೆಯಾಗಿ ಸೇರಿದವು.
ರೋಚಕ ಘಟ್ಟ ತಲುಪಿದ್ದ ಲಾರ್ಡ್ಸ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿತು. ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಪಡೆಯನ್ನ ಬಗ್ಗು ಬಡಿದ ಆಸಿಸ್, ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನ ಕಾಯ್ದುಕೊಂಡಿದೆ. ಈ ರಿಸಲ್ಟ್ ಬಂದು 2 ದಿನ ಕಳೆದಿದೆ. ಆದ್ರೆ ಲಾರ್ಡ್ಸ್ನಲ್ಲಾದ ವಿವಾದಗಳ ಬಗೆಗಿನ ಚರ್ಚೆ ಮಾತ್ರ ನಿಂತಿಲ್ಲ.
ವಿವಾದ ನಂ 1: ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರು
ಪಂದ್ಯದ ಮೊದಲ ದಿನದಾಟದಲ್ಲೇ ಹೈಡ್ರಾಮಾ ನಡೆಯಿತು. ಲಂಡನ್ನಲ್ಲಿ ಪ್ರತಿಭಟನೆ ನಡೆಸ್ತಾ ಇರೋ ಇಂಧನ ಪ್ರತಿಭಟನಾಕಾರರು ಮೈದಾನಕ್ಕೆ ನುಗ್ಗಿ ಪಿಚ್ ಹಾಳು ಮಾಡಲು ಯತ್ನಿಸಿದ್ರು. ಈ ವೇಳೆ ಇಂಗ್ಲೆಂಡ್ ಕೀಪರ್ ಜಾನಿ ಬೈರ್ಸ್ಟೋ, ಪ್ರತಿಭಟನಾಕಾರನನ್ನ ಹೊತ್ತೊಕೊಂಡು ಹೋದರು. ಭದ್ರತಾ ಸಿಬ್ಬಂದಿ ಬಂದು ಪಿಚ್ ಹಾಳಗದಂತೆ ತಡೆದರು. ಆದ್ರೆ, ಕ್ರಿಕೆಟ್ ಕಾಶಿ ಎಂದು ವಿಶೇಷವಾದ ಹಿನ್ನೆಲೆಯಳ್ಳ ಲಾರ್ಡ್ಸ್ ಅಂಗಳಕ್ಕೆ ಈ ಘಟನೆ ಕಪ್ಪುಚುಕ್ಕೆಯಾಗಿ ಉಳಿಯಿತು.
ವಿವಾದ ನಂ 2: ಸ್ಟೀವ್ ಸ್ಮಿತ್ ಕ್ಯಾಚ್
ಪಂದ್ಯದ 2 ದಿನದಾಟದಲ್ಲಿ ಇಂಗ್ಲೆಂಡ್ನ ಜೋ ರೂಟ್ ಬ್ಯಾಟ್ನಿಂದ ಸಿಡಿದ ಬೌಲರ್ ಅನ್ನ ಆಸಿಸ್ನ ಸ್ಟೀವ್ ಸ್ಮಿತ್ ಅದ್ಭುತವಾಗಿ ಕ್ಯಾಚ್ ಹಿಡಿದರು. ಇದಕ್ಕೆ ಅಂಪೈರ್ ಕೂಡ ಔಟ್ ಎಂದು ತೀರ್ಮಾನ ನೀಡಿದರು. ಆದ್ರೆ ರೀಪ್ಲೇಯಲ್ಲಿ ಬಾಲ್, ಮೈದಾನಕ್ಕೆ ಸವರಿದ್ದು ಕಂಡು ಬಂತು. ಆ ಬಳಿಕ ಔಟಾ..? ನಾಟೌಟ್ ಆನ್ನೋ ಚರ್ಚೆ ಜೋರಾಗಿ ನಡೀತು.
ವಿವಾದ ನಂ 3: ಮಿಚೆಲ್ ಸ್ಟಾರ್ಕ್ ಕ್ಯಾಚ್
ಪಂದ್ಯದ 4ನೇ ದಿನದಾಟದಲ್ಲಿ ಕ್ಯಾಮರೂನ್ ಗ್ರೀನ್ ಬೌಲಿಂಗ್ನಲ್ಲಿ, ಇಂಗ್ಲೆಂಡ್ನ ಬೆನ್ಡಕೆಟ್ ಪೈನ್ಲೆಗ್ನಡೆಗೆ ಶಾಟ್ ಬಾರಿಸಿದ್ರು. ಅದನ್ನ ಫೈನ್ಲೆಗ್ನಲ್ಲಿ ಫೀಲ್ಡ್ ಮಾಡ್ತಿದ್ದ ಮಿಚೆಲ್ ಸ್ಟಾರ್ಕ್ ಕ್ಯಾಚ್ ಹಿಡಿದ್ರು. ಕ್ಯಾಚ್ ಹಿಡಿದ ವೇಳೆ ಬೌಲ್ ನೆಲಕ್ಕೆ ತಾಗಿದ್ದು ಸ್ಪಷ್ಟವಾಗಿ ಕಂಡಿತು. ಬಳಿಕ ನಾಟೌಟ್ ಎಂದು ತೀರ್ಪು ನೀಡಲಾಯಿತು. ಆದ್ರೆ, ಸ್ಮಿತ್ ಕ್ಯಾಚ್ ಹಿಡಿದಾಗ ನೆಲಕ್ಕೆ ತಾಗಿದ್ರೂ ಔಟ್ ಕೊಟ್ಟು, ಸ್ಟಾರ್ಕ್ ಕ್ಯಾಚ್ ವಿಚಾರದಲ್ಲಿ ನಾಟೌಟ್ ಕೊಟ್ಟಿದ್ಯಾಕೆ ಅನ್ನೋದ್ರ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿವೆ.
ವಿವಾದ ನಂ 4: ಬೇರ್ ಸ್ಟೋ ಸ್ಟಂಪ್ಔಟ್
5ನೇ ದಿನದ ಆಟದ ವೇಳೆ ಪಂದ್ಯ ಕ್ರೂಷಿಯಲ್ ಹಂತ ತಲುಪಿತ್ತು. ಈ ವೇಳೆ ವಿವಾದಾತ್ಮಕ ರನೌಟ್ಗೆ ಇಂಗ್ಲೆಂಡ್ನ ಜಾನಿ ಬೇರ್ಸ್ಟೋ ಬಲಿಯಾದ್ರು. 52ನೇ ಓವರ್ನಲ್ಲಿ ಕ್ಯಾಮರೂನ್ ಗ್ರೀನ್ ಎಸೆತವನ್ನ ಬೇರ್ ಸ್ಟೋ ಡಾಟ್ ಮಾಡಿದ್ರು. ಆ ಬಳಿಕ ಬಾಲ್ ಡೆಡ್ ಆಯ್ತೆಂದು ತಿಳಿದು ಕ್ರೀಸ್ ಬಿಟ್ಟು ಮುಂದೆ ಬಂದ್ರು. ಆದ್ರೆ, ಕೀಪರ್ ಅಲೆಕ್ಸ್ ಕ್ಯಾರಿ ಸ್ಟಂಪ್ ಔಟ್ ಮಾಡಿದ್ರು.
ವಿವಾದ ನಂ 5: MCC ಮೆಂಬರ್ಸ್ VS ಉಸ್ಮಾನ್ ಖವಾಜ
ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್ಗೆ ಆಗಮಿಸಿದ ಆಸಿಸ್ ಆಟಗಾರರನ್ನ ಲಾಂಗ್ ರೂಮ್ನಲ್ಲಿ ನೆರೆದಿದ್ದ ಕೆಲ ಮೆಂಬರ್ಸ್ ನಿಂದಿಸಿದ್ದಾರೆ. ಈ ವೇಳೆ ಆಸಿಸ್ ಬ್ಯಾಟರ್ ಉಸ್ಮಾನ್ ಖವಾಜಾ ತಿರುಗೇಟು ನೀಡಲು ಹೋಗಿದ್ದಾರೆ. ಈ ವೇಳೆ ನೂಕಾಟ ಎಳೆದಾಟ ನಡೆದಿದೆ.
ಹಲವು ವರ್ಷಗಳ ಇತಿಹಾಸವಿರೋ ಲಾರ್ಡ್ಸ್ ಮೈದಾನದ ಲಾಂಗ್ ರೂಮ್ನಲ್ಲಿ ಎಂತದ್ದೇ ಸಿಚ್ಯುವೇಶನ್ ಇದ್ರೂ ಎದುರಾಳಿಗಳನ್ನ ಮೆಂಬರ್ಸ್ ಗೌರವಿಸ್ತಾ ಇದ್ರು. ಇದನ್ನ ಇಡೀ ಕ್ರಿಕೆಟ್ ಜಗತ್ತು ಕೊಂಡಾಡಿದ್ದೂ ಊಂಟು ಆದ್ರೆ, ಇದೇ ಮೊದಲ ಬಾರಿ ಹೀಗೆ ನೂಕಾಟ ನಡೆದಿದ್ದು. ಇಷ್ಟೇ ಅಲ್ಲ, ಕ್ರಿಕೆಟ್ ಕಾಶಿ ಲಾರ್ಡ್ಸ್ ಕೂಡ ಒಂದೇ ಪಂದ್ಯದಲ್ಲಿ ಐದೈದು ಕಾಂಟ್ರವರ್ಸಿಗಳಿಗೆ ಸಾಕ್ಷಿಯಾಗಿದ್ದು ಬಹುಶಃ ಇದೇ ಮೊದಲು ಅನ್ನಿಸುತ್ತೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ