ಇಂದು ಆಂಗ್ಲರಿಗೆ ಪ್ರತ್ಯುತ್ತರ ನೀಡಲು ರೋಹಿತ್ ಪಣ
ಏಕಾಂಗಿ ಹೋರಾಟ.. ಓಲಿ ಪೋಪ್ಗೆ ಶತಕ ಸಂಭ್ರಮ!
ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್- 436/10
ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ನಿನ್ನೆಯೇ ಟೀಮ್ ಇಂಡಿಯಾ, ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದ ವಿಯೋತ್ಸವನ್ನ ಮೂರೇ ದಿನಕ್ಕೆ ಆಚರಿಸುತ್ತಿತ್ತು. ಆದರೆ, ಇದೆಲ್ಲವೂ ನಿನ್ನೆ ಉಲ್ಟಾ ಆಯ್ತು. ಇಂಗ್ಲೆಂಡ್ ತಂಡದ ಒಬ್ಬನ ಆಟ ಗೆಲುವನ್ನ ಒಂದು ದಿನದ ಮಟ್ಟಿಗೆ ಪೋಸ್ಟ್ ಫೋನ್ ಮಾಡ್ತು.
7 ವಿಕೆಟ್ ನಷ್ಟಕ್ಕೆ 421 ರನ್. ಶತಕದ ಅಂಚಿನಲ್ಲಿದ್ದ ಜಡೇಜಾ. ಸಾಥ್ ನೀಡಲು ಅಕ್ಷರ್ ಪಟೇಲ್. ಬಿಗ್ ಸ್ಕೋರ್ ಕೆಲಹಾಕುವ ಲೆಕ್ಕಚಾರ. ಇದೆಲ್ಲವೂ ಇಂಗ್ಲೆಂಡ್ ದರ್ಬಾರ್ ಮುಂದೆ ನುಚ್ಚುನೂರಾಯ್ತು.
ಹೌದು! 421 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ, ನಿನ್ನೆಯೇ ಜಸ್ಟ್ 15 ರನ್ ಕೂಡಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡು 436 ರನ್ಗಳಿಗೆ ಆಲೌಟ್ ಆಯ್ತು. ಶತಕದ ನಿರೀಕ್ಷೆಯಲ್ಲಿದ್ದ ಜಡೇಜಾ ಕನಸು ಭಗ್ನಗೊಳ್ತು.
Can anyone from England team replicate this.#INDvsENG pic.twitter.com/CcqsTgbAWb
— SillyFCB (@darfedar) January 23, 2024
190 ರನ್ಗಳ ಹಿನ್ನಡೆ.. ಇಂಗ್ಲೆಂಡ್ಗೆ ಭರ್ಜರಿ ಓಪನಿಂಗ್..!
190 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ಜಾಕ್ ಕ್ರಾವ್ಲಿ, ಬೆನ್ ಡಕ್ಕೆಟ್ ಉತ್ತಮ ಆರಂಭ ನೀಡಿದರು. ಏಕದಿನ ಶೈಲಿಯಲ್ಲೇ ಬ್ಯಾಟ್ ಬೀಸಿದ ಇವರು ಬಿಗ್ ಸ್ಕೋರ್ ಕಲೆಹಾಕೋ ನಿರೀಕ್ಷೆ ಮೂಡಿಸಿದ್ರು. ಆದರೆ, ಈ ವೇಳೆ 31 ರನ್ ಗಳಿಸಿದ್ದ ಜಾಕ್ ಕ್ರಾವ್ಲೆಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿದ್ರೆ. 47 ರನ್ ಗಳಿಸಿ ಬ್ಯಾಟ್ ಬೀಸ್ತಿದ್ದ ಬೆನ್ ಡೆಕೆಟ್ಗೆ ಬೂಮ್ರಾ ಕ್ಲೀನ್ ಬೋಲ್ಡ್ ಮಾಡಿದ್ರು.
Bumrah showing is quality bowling
Ben stokes gone #INDvsENG #INDvENGpic.twitter.com/4eTHghDaUD— ЅᏦᎽ (@13hamdard) January 25, 2024
ಈ ಬೆನ್ನಲ್ಲೇ ಬಂದ ಜೋ ರೂಟ್ ಕೂಡ ಬೂಮ್ರಾರ ಎಲ್ಬಿಡ್ಲೂ ಬಲೆಗೆ ಸಿಲುಕಿದ್ರೆ. ಬಳಿಕ ಬಂದ ಜಾನಿ ಬೇರ್ಸ್ಟೋ, ಜಡೇಜಾ ಜಾದೂ ಮುಂದೆ ಮಂಡಿಯೂರಿದ್ರು. ಇವ್ರೇ ಅಲ್ಲ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮಗದೊಮ್ಮೆ ಅಶ್ವಿನ್ಗೆ ಬಲಿಯಾದರು. ಇದರೊಂದಿಗೆ ಇಂಗ್ಲೆಂಡ್, 163 ರನ್ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
6ನೇ ವಿಕೆಟ್ಗೆ ಶತಕದ ಜೊತೆಯಾಟ.. ಬೌಲರ್ಸ್ ಸುಸ್ತು.!
ವಿಕೆಟ್ ಉರುಳುತ್ತಿದ್ದರು ಓತ್ತಡಕ್ಕೆ ಸಿಲುಕದ ಓಲಿ ಪೋಪ್, ಲೀಲಾಜಾಲವಾಗಿ ಬ್ಯಾಟ್ ಬೀಸಿದ್ರು. 6ನೇ ವಿಕೆಟ್ಗೆ ಫೋಕ್ಸ್ ಜೊತೆಗೂಡಿ 112 ರನ್ಗಳ ಅಮೋಘ ಜೊತೆಯಾಟವಾಡಿದ್ರು.
ಅಷ್ಟೇ ಅಲ್ಲ.! 154 ಎಸೆತಗಳಲ್ಲಿ 10 ಬೌಂಡರಿ ಒಳಗೊಂಡ ಶತಕ ಸಿಡಿಸಿದ ಪೋಪ್, ನಂತರ ರನ್ ಗಳಿಕೆಗೆ ಮತ್ತಷ್ಟು ವೇಗ ನೀಡಲು ಮುಂದಾದ್ರು. ಈ ವೇಳೆ ಪೋಪ್ಗೆ ಸಾಥ್ ನೀಡ್ತಿದ್ದ ಫೋಕ್ಸ್, ಅಕ್ಷರ್ ಪಟೇಲ್ರ ಅದ್ಬುತ ಬಾಲ್ಗೆ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು.
ಮೂರನೇ ದಿನದಾಟದ ಗೌರವ ಇಂಗ್ಲೆಂಡ್ ಪಾಲು..!
110 ರನ್ ಗಳಿಸಿ ಮುನ್ನುಗ್ಗತ್ತಿದ್ದ ಪೋಪ್ಗೆ ಅಕ್ಷರ್ ಪಟೇಲ್ ಜೀವದಾನ ನೀಡಿದರು. ಇದರ ಪರಿಣಾಮವಾಗಿ ಅಜೇಯ 148 ಗಳಿಸಿರುವ ಪೋಪ್, ಇಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 126 ರನ್ಗಳ ಲೀಡ್ ಸಾಧಿಸಿದ ಇಂಗ್ಲೆಂಡ್, 3ನೇ ದಿನದಾಟದ ಗೌರವ ಸಂಪಾದಿಸಿತು.
Ollie Pope has scored a Test hundred in India against Bumrah, Ashwin, Jadeja, Axar, Siraj. 🫡 #Olipope #INDvsENG #Hyderabad #Test pic.twitter.com/4PVintGHrC
— IMTIYAJ RIZWAN (@Imtiyajrizwann) January 27, 2024
ಒಟ್ಟಿನಲ್ಲಿ.! ಮೂರನೇ ದಿನದಾಟ ಟೀಮ್ ಇಂಡಿಯಾಗೆ ತಿರುಗೇಟು ನೀಡಿರುವ ಇಂಗ್ಲೆಂಡ್ಗೆ, ಇಂದು ರೋಹಿತ್ ಪಡೆ ಟಕ್ಕರ್ ನೀಡಬೇಕಾಗಿದೆ. ಇಲ್ಲ ಸಂಕಷ್ಟಕ್ಕೆ ಸಿಲುಕಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ