newsfirstkannada.com

×

ಗಿಡ ಮರಗಳಿಗೂ ಪೊಲೀಸರಿಂದ ರಕ್ಷಣೆ.. ಪರಿಸರ ಪ್ರೇಮಕ್ಕೆ ಸಾಕ್ಷಿಯಾದ ಇಲ್ಲೊಂದು ಪೊಲೀಸ್ ಠಾಣೆ 

Share :

Published September 25, 2024 at 8:44am

    ಪೊಲೀಸರ ಪರಿಸರ ಪ್ರೇಮ.. ಗಿಡ ಮರಗಳಿಗೂ ರಕ್ಷಣೆ

    ಅಪರಾಧ ನಿಗ್ರಹದ ಜೊತೆಗೆ ಪೊಲೀಸರಿಂದ ಪರಿಸರ ಸಂರಕ್ಷಣೆ

    ಸುತ್ತಲೂ ಹಚ್ಚು ಹಸಿರು ವಾತಾವರಣ, ಸುಸಜ್ಜಿತವಾದ ಪೊಲೀಸ್ ಠಾಣೆ

ಪೊಲೀಸರಿಗೆ ಅಪರಾಧ ನಿಗ್ರಹ ಮಾಡುವ ಕೆಲಸವೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಇಲ್ಲೊಂದು ಪೊಲೀಸ್ ಠಾಣೆಯ ಪೊಲೀಸರು ಅಪರಾಧ ನಿಗ್ರಹದ ಜೊತೆಗೆ ಪರಿಸರ ಸಂರಕ್ಷಣೆಯನ್ನ ಕೂಡ ಮಾಡುತ್ತಿದ್ದಾರೆ. ಜನರಿಗೆ ರಕ್ಷಣೆ ಕೊಡುವದರ ಜೊತೆಗೆ ಗಿಡ ಮರಗಳಿಗೂ ಪೊಲೀಸರು ರಕ್ಷಣೆ ಕೊಡುತ್ತಿದ್ದಾರೆ.

ಹೌದು. ಹೀಗೆ ಪೊಲೀಸ್ ಠಾಣೆ ಸುತ್ತಲೂ ಹಚ್ಚು ಹಸಿರು ವಾತಾವರಣ, ಸುಸಜ್ಜಿತವಾದ ಪೊಲೀಸ್ ಠಾಣೆ, ಸ್ಚಚ್ಛಂದವಾದ ಪೊಲೀಸ್ ಠಾಣೆಯ ಆವರಣ, ಮರಗಳಿಗೆ ನೀರುಣಿಸುತ್ತಿರುವ ಪೊಲೀಸರು ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ. ಯಮಕನಮರಡಿ ಪೊಲೀಸ್ ಠಾಣೆ ಎಂದರೇ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬ್ಯೂಸಿ ಇರುವ ಪೊಲೀಸ್ ಠಾಣೆ. ಸಚಿವ ಸತೀಶ ಜಾರಕಿಹೊಳಿ ಅವರ ಸ್ವಕ್ಷೇತ್ರ, ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪಘಾತ, ಟ್ರಾಫಿಕ್ ಸಮಸ್ಯೆ, ಅಪರಾಧ ಪ್ರಕರಣಗಳು ಸೇರಿದಂತೆ ಹೆಚ್ಚಿನ ಕಾರ್ಯವಿರುವ ಈ ಠಾಣೆಯ ಸಿಬ್ಬಂದಿಗಳು ತಮ್ಮ ಠಾಣೆಯನ್ನ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಪೊಲೀಸ್ ಠಾಣೆಯ ಆವರಣದಲ್ಲಿ 550 ಕ್ಕೂ ಹೆಚ್ಚು ಮರಗಳನ್ನ ನೆಟ್ಟು ಪರಿಸರ ರಕ್ಷಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಯುವ ದಸರಾಗೆ ಶ್ರೀ ಮುರುಳಿ, ನಟಿ ರುಕ್ಮಿಣಿ ವಸಂತ್ ಚಾಲನೆ.. ಸಂಗೀತ ರಸದೌತಣ, ಹುಚ್ಚೆದ್ದು ಕುಣಿದ ಯುವ ಸಮೂಹ

ಇನ್ನೂ ಪೊಲೀಸ್ ಠಾಣೆ ಆವರಣದಲ್ಲಿ ಉದ್ಯಾನವನ ನಿರ್ಮಾಣ ಮಾಡಿಕೊಂಡಿರುವ ಪೊಲೀಸ್​ ಸಿಬ್ಬಂದಿ ದಿನನಿತ್ಯ ಗಿಡಗಳಿಗೆ ನೀರುಣಿಸಿ ಗಿಡಗಳನ್ನ ರಕ್ಷಿಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಇನ್ನೂ ಪೊಲೀಸ್ ಠಾಣೆಯ ಕಟ್ಟಡವನ್ನ ಅದ್ಭುತವಾಗಿ ನಿರ್ವಹಣೆ ಮಾಡಲಾಗುತ್ತಿದ್ದು ಸಾರ್ವಜನಿಕ ಸ್ನೇಹಿಯಾಗಿ ಯಮಕನಮರಡಿ ಪೊಲೀಸ್ ಠಾಣೆ ಗುರುತಿಸಿಕೊಂಡಿದೆ.

ಇದನ್ನೂ ಓದಿ: ಕಿವಿಯಲ್ಲಿದ್ದಾಗಲೇ ಇಯರ್​ ಬಡ್​​ ಸ್ಫೋಟ.. ಶ್ರವಣ ನಷ್ಟ ಅನುಭವಿಸುತ್ತಿರೋ ಯುವತಿ

ಒಟ್ಟಿನಲ್ಲಿ ಪೊಲೀಸರು ಅಪರಾಧ ಪ್ರಕರಣಗಳನ್ನೆ ಬೆನ್ನತ್ತುವಲ್ಲಿ ಬ್ಯೂಸಿ ಆಗಿರುವ ಇಂದಿನ ದಿನಗಳಲ್ಲಿ ಸ್ವತಃ ಪೊಲೀಸರೇ ನೀರುಣಿಸಿ ಗಿಡ ಮರಗಳನ್ನ ಸಾಕಿ ಸಲಹಿ ಪರಿಸರ ಕಾಳಜಿ ತೋರುತ್ತಿರುವ ಯಮಕನಮರಡಿ ಪೊಲೀಸರ ಈ ಕಾರ್ಯ ನಿಜಕ್ಕೂ ಮಾದರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿಡ ಮರಗಳಿಗೂ ಪೊಲೀಸರಿಂದ ರಕ್ಷಣೆ.. ಪರಿಸರ ಪ್ರೇಮಕ್ಕೆ ಸಾಕ್ಷಿಯಾದ ಇಲ್ಲೊಂದು ಪೊಲೀಸ್ ಠಾಣೆ 

https://newsfirstlive.com/wp-content/uploads/2024/09/Belagavi.jpg

Load More