/newsfirstlive-kannada/media/post_attachments/wp-content/uploads/2024/02/EPFO-Interest-Rate.jpg)
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಪಿಎಫ್ನಿಂದ ಹಣ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿದೆ. EPFO ಆಟೋ ಮೋಡ್ ಸೆಟಲ್ಮೆಂಟ್ (auto-mode settlement) ಪ್ರಾರಂಭಿಸಿದೆ. 6 ಕೋಟಿಗೂ ಹೆಚ್ಚು ಪಿಎಫ್ ಸದಸ್ಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಇದು ತುರ್ತು ಪರಿಸ್ಥಿತಿಯಲ್ಲಿ ಪಿಎಫ್ ಸದಸ್ಯರಿಗೆ ಮುಂಗಡವಾಗಿ ಹಣವನ್ನು ಒದಗಿಸುವ ಸೌಲಭ್ಯ ಇದಾಗಿದೆ. ಇದರ ಅಡಿಯಲ್ಲಿ ಮೂರು ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ.
Auto-mode settlement ಅಡಿಯಲ್ಲಿ ಉದ್ಯೋಗಿಗಳು ತಮ್ಮ ಇಪಿಎಫ್ನಿಂದ ತುರ್ತು ಸಮಯದಲ್ಲಿ ಮುಂಗಡ ಹಣವನ್ನು ಪಡೆಯಬಹುದು. EPFO ತನ್ನ ಚಂದಾದಾರರಿಗೆ ಕೆಲವು ರೀತಿಯ ತುರ್ತು ಪರಿಸ್ಥಿತಿಗಳಿಗಾಗಿ ನಿಧಿಯಿಂದ ಹಣವನ್ನು ಹಿಂಪಡೆಯಲು ಅನುಮತಿಸುತ್ತದೆ. ಕಾಯಿಲೆ, ಚಿಕಿತ್ಸೆ, ಶಿಕ್ಷಣ, ಮದುವೆ, ಮನೆ ಖರೀದಿಗೆ ತುರ್ತಾಗಿ ಪಿಎಫ್ ಹಣವನ್ನು ಮುಂಗಡವಾಗಿ ಪಡೆಯಬಹುದು. 2020ರಿಂದ ತುರ್ತು ಪರಿಸ್ಥಿತಿಯಲ್ಲಿ ಈ ನಿಯಮ ಜಾರಿಯಲ್ಲಿದೆ.
ಇದನ್ನೂ ಓದಿ:ಮೈದಾನದಲ್ಲಿ ಯುದ್ಧ.. ಡ್ರೆಸ್ಸಿಂಗ್ ರೂಮ್ನಲ್ಲಿ ಸ್ನೇಹ..! ಆರ್ಸಿಬಿ ಧೋನಿಗೆ ಸ್ಪೆಷಲ್ಲಾಗಿ ಕೊಟ್ಟಿದ್ದೇನು? VIDEO
ಎಷ್ಟು ಹಣ ಹಿಂಪಡೆಯಬಹುದು?
ಇಪಿಎಫ್ ಖಾತೆಯಿಂದ ಮುಂಗಡ ನಿಧಿಯನ್ನು ಹೆಚ್ಚಿಸಲಾಗಿದೆ. ಮೊದಲು ಈ ಮಿತಿ 50 ಸಾವಿರ ರೂಪಾಯಿಗಳಷ್ಟಿತ್ತು. ಅದನ್ನು ಈಗ ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಆಟೋ ಸೆಟಲ್ಮೆಂಟ್ ಸಿಸ್ಟಮ್ ಮೂಲಕ ನಿಮ್ಮ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಇದಕ್ಕೆ ಯಾರಿಂದಲೂ ಅನುಮೋದನೆ ಪಡೆಯುವ ಅಗತ್ಯ ಇಲ್ಲ. ಮೂರು ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಬರುತ್ತದೆ. ಅದಕ್ಕೆ ನೀವು ಕೆಲವು ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇರುತ್ತೆ. ಕೆವೈಸಿ, ಕ್ಲೈಮ್ ರಿಕ್ವೆಸ್ಟ್ ರೂಲ್ಸ್, ಬ್ಯಾಂಕ್ ಖಾತೆ ವಿವರಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ:CSK vs RCB ಪಂದ್ಯಕ್ಕೆ ಇದೆ ಒಂದು ಭಾವನಾತ್ಮಕ ಟಚ್.. ಕೆಲವು ಆರ್ಸಿಬಿ ಫ್ಯಾನ್ಸ್ ಮನದಾಳ ಇದು..!
ಮುಂಗಡವಾಗಿ ಹಣ ಹಿಂಪಡೆಯುವ ಪ್ರಕ್ರಿಯೆ
- ಮೊದಲು ನೀವು EPFO ಪೋರ್ಟಲ್ಗೆ ಲಾಗ್ ಇನ್ ಆಗಬೇಕು. ಇದಕ್ಕಾಗಿ ನೀವು ಯುಎಎನ್ ಮತ್ತು ಪಾಸ್ವರ್ಡ್ ಅಗತ್ಯ ಇದೆ
- ಲಾಗ್ ಇನ್ ಮಾಡಿದ ನಂತರ ನೀವು ಆನ್ಲೈನ್ ಸರ್ವೀಸ್ಗೆ ಕ್ಲಿಕ್ ಮಾಡಬೇಕು, ನಂತರ ಕ್ಲೈಮ್ ವಿಭಾಗವನ್ನು ಆಯ್ಕೆ ಮಾಡಬೇಕು
- ನಂತರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕಾಗುತ್ತದೆ. ಈ ಬ್ಯಾಂಕ್ ಖಾತೆಗೆ ಮುಂಗಡ ಹಣ ಬರುತ್ತದೆ
- ಈಗ ನೀವು ನಿಮ್ಮ ಬ್ಯಾಂಕ್ ಖಾತೆಯ ಖಾತರಿಗೆ ಚೆಕ್ ಅಥವಾ ಪಾಸ್ಬುಕ್ ಪ್ರತಿಯನ್ನು ಅಪ್ಲೋಡ್ ಮಾಡಬೇಕು
- ನಂತರ ನೀವು ಹಣವನ್ನು ಹಿಂಪಡೆಯಲು ಬಯಸುವ ಕಾರಣವನ್ನು ಹೇಳಬೇಕಾಗುತ್ತದೆ
ಇದನ್ನೂ ಓದಿ:ಇವತ್ತು ಮುಂಬೈ ವಿರುದ್ಧ ಲಕ್ನೋ ಗೆದ್ದರೆ RCB ಪ್ಲೇ ಆಫ್ ಹಾದಿಗೆ ಪೆಟ್ಟು ಬೀಳುತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ