newsfirstkannada.com

ಲಂಡನ್‌ನಲ್ಲಿ ಭೀಕರ ಅಪಘಾತ.. ನೀತಿ ಆಯೋಗದ ಮಾಜಿ ಉದ್ಯೋಗಿ ಚೀಸ್ತಾ ಕೊಚಾರ್ ಸಾವು

Share :

Published March 25, 2024 at 12:27pm

    ಲಂಡನ್ ಅಪಘಾತದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಸಾವು

    ನೀತಿ ಆಯೋಗದ ಮಾಜಿ ಉದ್ಯೋಗಿ ಚೀಸ್ತಾ ಕೊಚಾರ್ ದುರಂತ

    ಲಂಡನ್ ಸ್ಕೂಲ್ ಆಫ್ ಎಕಾನಿಮಿಕ್ಸ್‌ನಲ್ಲಿ PhD ಮಾಡುತ್ತಿದ್ದ ಚೀಸ್ತಾ ಕೊಚಾರ್

ಭಾರತೀಯ ಮೂಲದ ವಿದ್ಯಾರ್ಥಿನಿ, ನೀತಿ ಆಯೋಗದ ಮಾಜಿ ಉದ್ಯೋಗಿ ಚೀಸ್ತಾ ಕೊಚಾರ್ ಅವರು ಲಂಡನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 33 ವರ್ಷದ ಚೀಸ್ತಾ ಕೊಚಾರ್ ಸೈಕಲ್‌ನಲ್ಲಿ ಮನೆಗೆ ಮರಳುವಾಗ ಟ್ರಕ್ ಗುದ್ದಿದೆ.

ಕಳೆದ ಮಾರ್ಚ್ 19 ರಂದು ಲಂಡನ್‌ನಲ್ಲಿ ಈ ದಾರುಣ ಘಟನೆ ನಡೆದಿದೆ. ರಸ್ತೆಯಲ್ಲಿ ಗಂಡ ಪ್ರಶಾಂತ್-ಹೆಂಡತಿ ಚೀಸ್ತಾ ಕೊಚಾರ್ ಸೈಕಲಿಂಗ್ ಮಾಡುವ ವೇಳೆ ಟ್ರಕ್ ಅಪಘಾತದಲ್ಲಿ ದುರಂತ ಸಂಭವಿಸಿದೆ. ಅಪಘಾತವಾದ ತಕ್ಷಣವೇ ಪತ್ನಿಯ ನೆರವಿಗೆ ಪತಿ ಪ್ರಶಾಂತ್ ಧಾವಿಸಿದ್ದಾರೆ. ಆದರೇ ಚೀಸ್ತಾ ಕೊಚಾರ್‌ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬಾರ್​ನಲ್ಲಿ ಜಸ್ಟ್​ ಕಾಲು ತಾಗಿತು ಅಷ್ಟೇ.. ಯುವಕನನ್ನ ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪುಂಡರು

ಚೀಸ್ತಾ ಕೊಚಾರ್ ಅವರು ನೀತಿ ಆಯೋಗದಲ್ಲಿ ಕೆಲಸ ಮಾಡಿದ್ದರು. ಲಂಡನ್ ಸ್ಕೂಲ್ ಆಫ್ ಎಕಾನಿಮಿಕ್ಸ್‌ನಲ್ಲಿ PhD ಮಾಡಲು ತೆರಳಿದ್ದರು. ಚೀಸ್ತಾ ಕೊಚಾರ್ ಅವರು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ ಎಸ್‌ಪಿ ಕೊಚಾರ್ ಅವರು ಮಗಳು. ನೀತಿ ಆಯೋಗದ ಮಾಜಿ ಸಿಇಓ ಅಮಿತಾಬ್‌ ಕಾಂತ್‌ ಅವರು ಈ ಅಪಘಾತದ ಬಗ್ಗೆ ಸೋಷಿಯಲ್ ಮೀಡಿಯಾ X ನಲ್ಲಿ ತಮ್ಮ ನೋವು ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಂಡನ್‌ನಲ್ಲಿ ಭೀಕರ ಅಪಘಾತ.. ನೀತಿ ಆಯೋಗದ ಮಾಜಿ ಉದ್ಯೋಗಿ ಚೀಸ್ತಾ ಕೊಚಾರ್ ಸಾವು

https://newsfirstlive.com/wp-content/uploads/2024/03/Cheistha-Kochar.jpg

Load More