newsfirstkannada.com

BREAKING: ಹೆಚ್‌.ಡಿ ರೇವಣ್ಣಗೆ ಬಿಗ್‌ಶಾಕ್‌.. ಇನ್ನೂ 4 ದಿನ ಜೈಲುವಾಸ ಫಿಕ್ಸ್‌!

Share :

Published May 9, 2024 at 5:23pm

Update May 9, 2024 at 5:28pm

    ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಬಂಧನದಲ್ಲಿರುವ ಹೆಚ್‌.ಡಿ ರೇವಣ್ಣ

    ಹೆಚ್‌.ಡಿ ರೇವಣ್ಣ ಪರ ಸೀನಿಯರ್ ಕೌನ್ಸಿಲ್ ಸಿ.ವಿ ನಾಗೇಶ್ ವಾದ

    ಜಾಮೀನಿಗಾಗಿ ಜನಪ್ರತಿನಿಧಿಗಳ ಕೋರ್ಟ್ ಮೊರೆ ಹೋಗಿದ್ದ ರೇವಣ್ಣ

ಬೆಂಗಳೂರು: ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಸಂಕಷ್ಟ ಮುಂದುವರಿದಿದೆ. ಸುದೀರ್ಘ ಅವಧಿ ವಾದ ಆಲಿಸಿದ ನ್ಯಾಯಾಲಯ ಎಸ್ಐಟಿ ಮತ್ತಷ್ಟು ವಾದಕ್ಕೆ ಮಾಡಿದ ಮನವಿಯನ್ನು ಪುರಸ್ಕರಿಸಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರ ಬೆಳಗ್ಗೆ 11:30ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಎಸ್ಐಟಿ ಬಂಧನದ ಬಳಿಕ ಹೆಚ್‌.ಡಿ ರೇವಣ್ಣ ಅವರು ಜಾಮೀನಿಗಾಗಿ ಜನಪ್ರತಿನಿಧಿಗಳ ಕೋರ್ಟ್ ಮೊರೆ ಹೋಗಿದ್ದರು. ಇಂದು ಜಾಮೀನಿನ ಅರ್ಜಿ ವಿಚಾರಣೆ ಮುಂದುವರಿದಿದ್ದು, ರೇವಣ್ಣ ಪರ ಸೀನಿಯರ್ ಕೌನ್ಸಿಲ್ ಸಿ.ವಿ ನಾಗೇಶ್ ಹಾಜರಿದ್ದರು. ಎಸ್ಐಟಿ ಪರ SPP ಜಯ್ನಾ ಕೋಠಾರಿ ಅವರು ವಾದ ಮಂಡಿಸಿದರು.

ಇದನ್ನೂ ಓದಿ: VIDEO: ನಾನೇ ಪ್ರೊಡ್ಯೂಸರ್‌.. ನಾನೇ ಡೈರೆಕ್ಟರ್‌.. ನಾನೇ ಕಥಾನಾಯಕ; HDK ಖಡಕ್ ಸವಾಲು 

ಬೆಂಗಳೂರು ಜನಪ್ರತಿನಿಧಿ ಕೋರ್ಟ್​ ನ್ಯಾಯಾಧೀಶರ ಮುಂದೆ ಎಸ್ಐಟಿ ಮತ್ತಷ್ಟು ವಾದಕ್ಕೆ ಮನವಿ ಮಾಡಿದೆ. ಹೀಗಾಗಿ ಹೆಚ್ಚಿನ ವಾದ ಮಂಡಿಸಲು ಸೋಮವಾರಕ್ಕೆ ಅವಕಾಶ ನೀಡಲಾಗಿದೆ.
ಮೈಸೂರು ಮಹಿಳೆ ಕಿಡ್ನ್ಯಾಪ್​​ ಕೇಸ್​​ನಲ್ಲಿ ಹೆಚ್‌.ಡಿ ರೇವಣ್ಣ ಅವರು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಆಗಿರುವುದರಿಂದ ಸೋಮವಾರದ ತನಕ ಜೈಲುವಾಸ ಅನುಭವಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಹೆಚ್‌.ಡಿ ರೇವಣ್ಣಗೆ ಬಿಗ್‌ಶಾಕ್‌.. ಇನ್ನೂ 4 ದಿನ ಜೈಲುವಾಸ ಫಿಕ್ಸ್‌!

https://newsfirstlive.com/wp-content/uploads/2024/05/HD-Revanna-In-Jail.jpg

Load More