/newsfirstlive-kannada/media/post_attachments/wp-content/uploads/2024/10/EX-SCEINTIST.jpg)
ನಿವೃತ್ತ ವಿಜ್ಞಾನಿ ಹಾಗೂ ಅವರ ಪತ್ನಿಯನ್ನು ಗನ್ಪಾಯಿಂಟ್ನಲ್ಲಿ ಸೆರೆಯಾಳಾಗಿಟ್ಟುಕೊಂಡು ಮನೆ ದೋಚಿದ ಪ್ರಕರಣ ದೆಹಲಿಯಲ್ಲಿ ನಡೆದಿದೆ. ರೋಹಿಣಿಯ ಪ್ರಶಾಂತ್ ವಿಹಾರ ಪ್ರದೇಶದಲ್ಲಿ ಈ ಒಂದು ಘಟನೆ ನಡೆದಿದೆ.
ಪ್ರಶಾಂತ ವಿಹಾರದ ಎಫ್ ಬ್ಲಾಕ್ನಲ್ಲಿ ಮಾಜಿ ವಿಜ್ಞಾನಿ ಶಿಭು ಸಿಂಗ್ ಅವರ ಪತ್ನಿ ನಿರ್ಮಲಾ ಅವರೊಂದಿಗೆ ವಾಸಿಸುತ್ತಿದ್ದರು. ಶುಕ್ರವಾರ ಇಬ್ಬರು ಮನೆಯಲ್ಲಿ ಇರುವಾಗ ಕೋರಿಯರ್ ಬಾಯ್ ನೆಪದಲ್ಲಿ ಇಬ್ಬರು ಮನೆಗೆ ಬರುತ್ತಾರೆ. ಏಕಾಏಕಿ ಮನೆಯೊಳಗೆ ನುಗ್ಗಿದವರೆ ಶಿಭು ಸಿಂಗ್ ಹಾಗೂ ಅವರ ಪತ್ನಿ ನಿರ್ಮಲಾರ ತಲೆಗೆ ಬಂದೂಕಿಟ್ಟು ಅವರನ್ನು ಒತ್ತೆಯಾಳುಗಗಳಂತೆ ಹಿಡಿದಿಡುತ್ತಾರೆ. ಯಾವಾಗ ಶಿಭು ಸಿಂಗ್ ವಿರೋಧಿಸಲು ಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಕಿರಾತಕರು.
ಇದನ್ನೂ ಓದಿ:ಲೆಬನಾನ್ಗೆ ವೈದ್ಯಕೀಯ ಸೌಲಭ್ಯಗಳ ಸಹಾಯ ನೀಡಿದ ಭಾರತ :11 ಟನ್ ಔಷಧಿ ಸಾಮಾಗ್ರಿಗಳ ಸರಬರಾಜು
ಪೊಲೀಸ್ ಎದುರು ಶಿಭು ಸಿಂಗ್ ಹೇಳಿರುವ ಪ್ರಕಾರ ಆಭರಣಗಳು ಮತ್ತು ಕ್ಯಾಶ್ ಸೇರಿ ಒಟ್ಟು 2 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಮನೆಯಿಂದ ಕದ್ದುಕೊಂಡು ಹೋಗಿದ್ದಾರಂತೆ ನೀಚರು. ಶಿಭು ಸಿಂಗ್ಗೆ ಒಬ್ಬನು ಮಗನಿದ್ದು ಅವರಿಂದ ಬೇರೆಯಿದ್ದಾನೆ. ಈ ಕಳ್ಳತನ ನಡೆದ ಬಳಿಕ ಮಗನಿಗೆ ಕಾಲ್ ಮಾಡಿ ವಿಷಯವನ್ನು ತಿಳಿಸಿದ್ದಾರೆ ಸಿಂಗ್. ಕೂಡಲೇ ಅವರ ಪುತ್ರ ಪಿಸಿಆರ್ ಕಾಲ್ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ:ಪಾಕ್ ಯುವತಿಯನ್ನು ಮದುವೆಯಾದ ಬಿಜೆಪಿ ಕಾರ್ಪೊರೇಟರ್ ಪುತ್ರ! ಆನ್ಲೈನ್ನಲ್ಲಿಯೇ ನಡೀತು ನಿಖ್ಹಾ
ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಈಗಾಗಲೇ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು. ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರಂತೆ. ಇಬ್ಬರು ಕಳ್ಳರನ್ನು ಹಿಡಿಯಲು ಈಗಾಗಲೇ ಆರು ಪೊಲೀಸ್ ತಂಡವನ್ನು ರೆಡಿ ಮಾಡಲಾಗಿದ್ದು. ಕೂಡಲೇ ಅವರನ್ನು ಹಿಡಿದು ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ