ಚುನಾವಣೋತ್ತರ ಲೆಕ್ಕಾಚಾರ; ಬಿಜೆಪಿ ನೇತೃತ್ವದ ಎನ್​ಡಿಎ 400 ಸೀಟು ಗೆಲ್ಲೋದು ಗ್ಯಾರಂಟಿ!

author-image
Bheemappa
Updated On
ಚುನಾವಣಾ ಬಾಂಡ್‌: ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಗಾಂಧಿ ಸ್ಫೋಟಕ ಹೇಳಿಕೆ; ಏನಂದ್ರು?
Advertisment
  • ಜೂನ್​ 4 ರಂದು ಲೋಕಸಭಾ ಎಲೆಕ್ಷನ್​​ನ ರಿಸಲ್ಟ್​ ಗೊತ್ತಾಗಲಿದೆ
  • ಲೋಕಸಭಾ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಸಲಾಗಿತ್ತು
  • ಈ ಒಂದು ವಿಷಯದಲ್ಲಿ ಮೋದಿಗೆ ನಿರಾಸೆ ಆಗಿರುವುದು ನಿಜನಾ?

18ನೇ ಲೋಕಸಭಾ ಚುನಾವಣೆಯ ಮತದಾನವು ಇಂದಿಗೆ ದೇಶದೆಲ್ಲೆಡೆ ಮುಕ್ತಾಯಗೊಂಡಿದೆ. ವೋಟಿಂಗ್ ಮುಗಿಯುತ್ತಿದ್ದಂತೆ ಇತ್ತ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಬಿಡುಗಡೆಗೊಂಡಿವೆ. ಜೂನ್ 4 ರಂದು ಲೋಕಸಭಾ ಎಲೆಕ್ಷನ್​​ನ ರಿಸಲ್ಟ್​ ಏನೆಂದು ಗೊತ್ತಾಗಲಿದೆ. ಅದಕ್ಕಿಂತ ಮೊದಲು ಎಲ್ಲರ ಚಿತ್ತ ಎಕ್ಸಿಟ್​ ಪೋಲ್​ ಮೇಲೆ ನೆಟ್ಟಿದೆ. ಈ 18ನೇ ಲೋಕ ಸಮರದ ಚುನಾವಣೋತ್ತರ ಸಮೀಕ್ಷೆಗಳು (Exit Polls) ಏನೇನು ಹೇಳುತ್ತವೆ ಎನ್ನುವ ಮಾಹಿತಿ ಇಲ್ಲಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಎಲೆಕ್ಷನ್ ನಡೆದಿದೆ. 7 ಹಂತಗಳಲ್ಲಿ ಮತದಾನ ನಡೆಸಲಾಗಿದೆ. ಏಪ್ರಿಲ್ 26ರಂದು ಮೊದಲ ಹಂತ, ಏಪ್ರಿಲ್ 19ರಂದು 2ನೇ ಹಂತ, ಮೇ 7ರಂದು 3ನೇ ಹಂತ, ಮೇ 13ರಂದು 4ನೇ ಹಂತ, ಮೇ 20ರಂದು 5ನೇ ಹಂತ, ಮೇ 25ರಂದು 6ನೇ ಹಂತ ಹಾಗೂ ಜೂನ್ 1ರಂದು ಅಂದರೆ ಇಂದು ಕೊನೆಯದಾಗಿ 7ನೇ ಹಂತದ ಮತದಾನ ನಡೆಯಿತು. ಸದ್ಯ ಇದೀಗ ಬಿಡುಗಡೆಗೊಂಡ ಎಕ್ಸಿಟ್​ ಪೋಲ್ ಫಲಿತಾಂಶ ಇಲ್ಲಿದೆ.

ಇದನ್ನೂ ಓದಿ:Exit Poll: ಮೋದಿಗೆ ಹ್ಯಾಟ್ರಿಕ್ ಗೆಲುವು.. ರಾಹುಲ್‌ ಗಾಂಧಿಗೆ ಎಷ್ಟು ಸೀಟ್ ಗ್ಯಾರಂಟಿ?

publive-image

ಪ್ರಧಾನಿ ಮೋದಿಯವರು ಈ ಬಾರಿ 400 ಸ್ಥಾನ ಗೆಲ್ಲುವುದಾಗಿ ಹೇಳಿದ್ದರು. ಅದರಂತೆ ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಎನ್​ಡಿಎಗೆ 400 ಸ್ಥಾನಗಳು ದೊರೆತಿವೆ. ಈ ಬಾರಿಯು ಎನ್​ಡಿಎ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿದ್ದರಿಂದ ಮೋದಿ ಮತ್ತೊಮ್ಮೆ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ.

ಇಂಡಿಯಾ ನ್ಯೂಸ್​-D-Dynamics:
ಎನ್​​ಡಿಎ- 371
I.N.D.I.A- 125
ಇತರೆ- 47

ರಿಪಬ್ಲಿಕ್​ ಭಾರತ್-P MARQ:​
ಎನ್​​ಡಿಎ- 359
I.N.D.I.A- 154
ಇತರೆ- 30

ನ್ಯೂಸ್ ನೇಷನ್
ಎನ್​​ಡಿಎ- 342-378
I.N.D.I.A- 153-169
ಇತರೆ- 21-23

ದೈನಿಕ್ ಭಾಸ್ಕರ್
ಎನ್​​ಡಿಎ- 281-350
I.N.D.I.A- 145-201
ಇತರೆ- 33-49

ಇಂಡಿಯಾ ಟುಡೇ
ಎನ್​ಡಿಎ 361-401
I.N.D.I.A- 131- 166
ಇತರೆ- 08-20

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment