/newsfirstlive-kannada/media/post_attachments/wp-content/uploads/2024/04/cave-Kitum-3.jpg)
ಕೀನ್ಯಾದ ಮೌಂಟ್ ಎಲ್ಗಾನ್ ರಾಷ್ಟ್ರೀಯ ಉದ್ಯಾನವನದ (Mount Elgon National Park) ಮಧ್ಯಭಾಗದಲ್ಲಿ ಸುಪ್ತ ಜ್ವಾಲಾಮುಖಿ ಬಂಡೆಗಳಲ್ಲಿ ನಿರ್ಮಾಣ ಆಗಿರುವ ‘ಕಿಟಮ್’ (Kitum Cave) ಎಂಬ ಹೆಸರಿನ ಗುಹೆ ಇದೆ. ಆನೆಗಳ ದಂತಗಳಿಂದ ಗುಹೆ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಉಪ್ಪಿನಾಂಶ ಸಮೃದ್ಧವಾಗಿರೋದ್ರಿಂದ ಆನೆಗಳು ಇಲ್ಲಿಗೆ ಹೋಗುತ್ತಿದ್ದವು. ಇಲ್ಲಿಗೆ ಹೋದ ಆನೆಗಳು ಲವಣಾಂಶಕ್ಕಾಗಿ ಹುಡುಕಾಟ ನಡೆಸುತ್ತಿದ್ದವು. ದಂತಗಳ ಸಹಾಯದಿಂದ ಗೋಡೆಯನ್ನು ಕೊರೆದು ಉಪ್ಪನ್ನು ತಿನ್ನುತ್ತಿದ್ದವು. ಅದೇನೇ ಇರಲಿ, ಉಗಾಂಡದೊಂದಿಗೆ ಕೀನ್ಯಾದ ಬಳಿಯಿರುವ ಈ ಕಿಟಮ್ ಗುಹೆಯಿಂದ ಮತ್ತೊಂದು ಭಯಾನಕ ಸುದ್ದಿ ಹೊರಬಿದ್ದಿದೆ!!
ಮಾರಣಾಂತಿಕ ಕಾಯಿಲೆ, ವೈರಸ್​​ಗಳು ಸೃಷ್ಟಿಯಾಗುವಲ್ಲಿ ಕುಖ್ಯಾತಿ ಪಡೆದಿರುವ Kitum Cave ಮೂಲಕವೇ ಜಗತ್ತಿಗೆ ಮತ್ತೊಂದು ಅಪಾಯ ಕಾದಿದೆ ಎಂಬ ಎಚ್ಚರಿಕೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮಾಹಾಮಾರಿ, ಸಾಂಕ್ರಾಮಿಕ ಮಾರ್ಬರ್ಗ್​ ವೈರಸ್ (Marburg virus) ಸೃಷ್ಟಿಯಾಗುವ ಅಪಾಯ ಇದೆ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಬೆನ್ನಲ್ಲೇ ಕೊರೊನಾ ಬಳಿಕ ಜಗತ್ತಿಗೆ ಮತ್ತೊಂದು ಮಾರಣಾಂತಿಕ ವೈರಸ್​​ನ ಆತಂಕ ಶುರುವಾಗಿದೆ. ಎಬೊಲಾದಂತಹ ಮಾರಕ ವೈರಸ್​ಗಳು ಸೃಷ್ಟಿಯಾಗಿದ್ದು ಇಲ್ಲಿಯೇ ಎಂದು ನಂಬಲಾಗುತ್ತದೆ.
ಇದನ್ನೂ ಓದಿ: ಖಾಸಗಿ ಬ್ಯಾಂಕ್ ಸಿಬ್ಬಂದಿ ದರ್ಪ, ಸಾಲ ವಸೂಲಿಗೆ ಬಂದು ಮಹಿಳೆಗೆ ಕಪಾಳಮೋಕ್ಷ..!
/newsfirstlive-kannada/media/post_attachments/wp-content/uploads/2024/04/cave-Kitum-2.jpg)
ಕಿಟಮ್ ಗುಹೆಯ ಇತಿಹಾಸ ಏನ್ ಹೇಳುತ್ತೆ?
1980 ರಲ್ಲಿ ಫ್ರೆಂಚ್ ಎಂಜಿನಿಯರ್ ಕಿಟಮ್, ಮೊದಲ ಬಾರಿಗೆ ಗುಹೆಗೆ ಭೇಟಿ ನೀಡಿದ್ದರು. ಅಲ್ಲಿಯವರೆಗೆ ಈ ಗುಹೆ ಬಗ್ಗೆ ಯಾರಿಗೂ ಅರಿವು ಇರಲಿಲ್ಲ. ಇಲ್ಲಿದ್ದ ಮಾರ್ಬರ್ಗ್ ವೈರಸ್​ ಸೋಂಕು ಇವರ ದೇಹ ಹೊಕ್ಕಿತ್ತು. ನೈರೋಬಿಯ ಆಸ್ಪತ್ರೆಗೆ ದಾಖಲಾಗಿದ್ದರೂ ಯಾವುದೇ ಚಿಕಿತ್ಸೆ ಫಲಿಸದೇ ಕಿಟಮ್ ಅಲ್ಲೇ ಸಾವನ್ನಪ್ಪಿದರು. ಈ ಘಟನೆ ನಡೆದು 7 ವರ್ಷಗಳ ನಂತರ ಇದೇ ಗುಹೆ ಮತ್ತೊಂದು ಬಲಿ ತೆಗೆದುಕೊಂಡಿತು. ಶಾಲಾ ರಜೆ ಸಂದರ್ಭದಲ್ಲಿ ಕುಟುಂಬದೊಂದಿಗೆ ಹೋಗಿದ್ದ ಡ್ಯಾನಿಶ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದ. ಡ್ಯಾನಿಶ್​​ಗೆ ರಾವೆನ್ ವೈರಸ್ (Ravn virus) ತಗುಲಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದರು. ರವನ್ ವೈರಸ್​, Marburg virusನ ಇನ್ನೊಂದು ತಳಿಯಾಗಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹೃದಯ ವಿದ್ರಾವಕ ಘಟನೆ; ಹನುಮ ಭಕ್ತರ ಮೇಲೆ ಪಿಕಪ್ ವಾಹನ ಹರಿದು ಮೂವರು ಸಾವು
ಮೊದಲೇ ಹೇಳಿದಂತೆ ಗುಹೆ ಒಳಗೆ ಅಮೂಲ್ಯವಾದ ಉಪ್ಪು ಖನಿಜಗಳು ಸಿಗುತ್ತದೆ. ಹೀಗಾಗಿ ಇದು ಆನೆಗಳಿಗೆ ಮಾತ್ರವಲ್ಲದೇ ಪಶ್ಚಿಮ ಕೀನ್ಯಾದ ಎಮ್ಮೆ, ಹುಲಿ, ಚಿರತೆ ಹಾಗೂ ಕತ್ತೆಕಿರುಬಗಳ ತಾಣವೂ ಆಗಿದೆ. ಕಿಟಮ್ ಎಂಬ ಇಂಜಿನಿಯರ್​ ಗುಹೆಯನ್ನು ಮೊದಲು ಕಂಡುಹಿಡಿದಾಗ, ಅದರ ಗೋಡೆಗಳ ಮೇಲಿನ ಗೀರುಗಳು ಪತ್ತೆಯಾಗಿದ್ದವು. ಆದರೆ ಅದು ಏನೆಂದು ಅವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. 600 ಅಡಿ ಆಳದ ಗುಹೆಯನ್ನು ಆನೆಗಳು ನಿರಂತರವಾಗಿ ಆಳವಾಗಿ ಮತ್ತು ಅಗಲಗೊಳಿಸುತ್ತ ಹೋಗಿದ್ದವು. ಪರಿಣಾಮ ಇದು ರೋಗವಾಹಕ ಬಾವಲಿಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ ಎಂದು ಸಂಶೋಧಕರಿಗೆ ನಂತರದ ದಿನಗಳಲ್ಲಿ ಅರಿವಿಗೆ ಬಂದಿದೆ.
ಇದನ್ನೂ ಓದಿ:7 ಸಿಕ್ಸರ್, 9 ಬೌಂಡರಿ..! ಜೈಸ್ವಾಲ್ ಸ್ಫೋಟಕ ಶತಕ.. ಹಳಿಗೆ ಮರಳಿದ ಯಂಗ್​ಗನ್..!
/newsfirstlive-kannada/media/post_attachments/wp-content/uploads/2024/04/cave-Kitum-1.jpg)
ಗುಹೆ ಮೇಲೆ ದಂಡೆತ್ತಿ ಹೋಗಿದ್ದ ಅಮೆರಿಕ..!
1980ರ ಘಟನೆ ಇಟ್ಟುಕೊಂಡು ಯುನೈಟೆಡ್ ಸ್ಟೇಟ್ಸ್ ಆರ್ಮಿ ಮೆಡಿಕಲ್ ರಿಸರ್ಚ್ ಇನ್​​ಸ್ಟಿಟ್ಯೂಟ್​​ ಆಫ್ ಇನ್ಫೆಕ್ಷಿಯಸ್ ಡಿಸೀಸ್ (USAMRIID), ಕಿಟಮ್ ಗುಹೆ ಮೇಲೆ ಅಧ್ಯಯನಕ್ಕಾಗಿ ದಂಡಯಾತ್ರೆ ಕೈಗೊಂಡಿತ್ತು. ಇದು ಮಾನವರಿಗೆ ಹರಡುವ ಮಾರಣಾಂತಿಕ ರೋಗಕಾರಕ ಜೀವಗಳನ್ನು ಗುರುತಿಸುವಲ್ಲಿ ವಿಫಲಾಗಿದೆ. ಆದರೆ ಈ ಕುರಿತ ಅಧ್ಯಯನವನ್ನು ಮುಂದುವರಿಸಿದೆ.
ಮತ್ತೆ ಮಾರ್ಬರ್ಗ್ ಪತ್ತೆಯಾಗಿದ್ದು ಯಾವಾಗ?
2007ರಲ್ಲಿ ಗುಹೆಯಿಂದ ಹೊರ ತೆಗೆದ ‘ಫ್ರೂಟ್​ ಬ್ಯಾಟ್’ (ಒಂದು ಜಾತಿಯ ಬಾವಲಿ) ಮೇಲೆ ಮಾರ್ಬರ್ಗ್​ ವೈರಸ್​ ಪತ್ತೆಯಾಗಿದೆ. ಈ ವೈರಸ್ ಆಫ್ರಿಕಾದ ಇತರ ಗುಹೆಗಳಲ್ಲೂ ಕಂಡುಬಂದಿದೆ. WHO ಇದನ್ನು ಸಂಭಾವ್ಯ ಸಾಂಕ್ರಾಮಿಕ ಎಂದು ವಿವರಿಸಿದೆ. ಮಧ್ಯ ಆಫ್ರಿಕಾದಲ್ಲಿರುವ ಬಾವಲಿಗಳಿಂದ ಮನುಷ್ಯರಿಗೆ ಸುಲಭವಾಗಿ ಹರಡಬಹುದು ಎಂದು ಅಂದಾಜಿಸಲಾಗಿದೆ.
ಮಾರ್ಬರ್ಗ್ ವೈರಸ್​​..!
ದೇಹಕ್ಕೆ ವೈರಸ್ ಹೊಕ್ಕಿದ ನಂತರ ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಉಂಟು ಮಾಡುತ್ತದೆ. Hemorrhagic ಜ್ವರವನ್ನು ತರುವ ಇದು, ದೇಹದಲ್ಲಿನ ಶಕ್ತಿಯನ್ನು ಕುಂದಿಸುತ್ತದೆ. ಹೃದಯ, ರಕ್ತನಾಳಕ್ಕೆ ಹಾನಿ ಮಾಡುತ್ತದೆ. ಶೇಕಡಾ 88 ರಷ್ಟು ಎಬೋಲಾ ವೈರಸ್​​ ರೀತಿಯಲ್ಲೇ ಹಾನಿ ಮಾಡುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ವ್ಯಕ್ತಿಯ ದೇಹದ ಬೆವರಿನಂತಹ ದ್ರವಗಳು ಮತ್ತೊಬ್ಬರಿಗೆ ತಾಗಿದಾಗ ಹರಡುತ್ತದೆ. ಅಲ್ಲದೇ ಸೋಂಕಿತ ವ್ಯಕ್ತಿ ಬಳಸಿದ ಟವೆಲ್, ಇತರೆ ವಸ್ತುಗಳನ್ನು ಮುಟ್ಟಿದಾಗಲೂ ಇದು ಬೇರೆಯವರಿಗೆ ಬರುತ್ತದೆ.
ಇದನ್ನೂ ಓದಿ:11 ಸಾವಿರ ಕೆಜಿ ಚಿನ್ನ.. 18,817 ಸಾವಿರ ಕೋಟಿ ಮೀಸಲು ನಗದು.. ಇದು ವಿಶ್ವದ ಶ್ರೀಮಂತ ದೇವಾಲಯ
/newsfirstlive-kannada/media/post_attachments/wp-content/uploads/2024/04/cave-Kitum.jpg)
ಇನ್ನೊಂದು ವಿಚಾರ ಅಂದರೆ ಒಬ್ಬ ವ್ಯಕ್ತಿಗೆ ಮಾರ್ಬರ್ಗ್​ ವೈರಸ್​ ಸೇರಿದ ತಕ್ಷಣ ಗೊತ್ತಾಗುವುದಿಲ್ಲ. ಕನಿಷ್ಠ ಮೂರು ವಾರಗಳ ನಂತರ ವೈರಸ್​ ಶಕ್ತಿಯುತವಾಗಿ ಕಾಡಲು ಶುರುಮಾಡುತ್ತದೆ. ಮಲೇರಿಯಾ ಮತ್ತು ಎಬೋಲಾ ಲಕ್ಷಣವನ್ನು ಹೊಂದುವ ಇದು, ತುಂಬಾನೇ ಡೇಂಜರ್ ಆಗಿದೆ. ಸೋಂಕಿತ ವ್ಯಕ್ತಿಯ ಕಣ್ಣುಗಳು ಗುಳಿ ಹೊಕ್ಕುತ್ತವೆ. ಮುಖ ಅಭಿವ್ಯಕ್ತರಹಿತವಾದಂತೆ ಕಾಣುತ್ತದೆ. ಅದರ ತೀವ್ರತೆ ಮತ್ತಷ್ಟು ಹೆಚ್ಚಿದಾಗ ಜನನಾಂಗ, ಕಣ್ಣು, ಮೂಗು ಮತ್ತು ಒಸಡುಗಳಿಂದ ತೀವ್ರ ರಕ್ತಸ್ರಾವ ಆಗುತ್ತದೆ. ದುರಾದೃಷ್ಟವಶಾತ್, ಈ ವೈರಸ್‌ಗೆ ಯಾವುದೇ ಲಸಿಕೆಗಳು ಲಭ್ಯವಿಲ್ಲ. ಕೊರೊನಾದಂತಹ ಸಾಂಕ್ರಾಮಿ ಎದುರಿಸಿದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಸಾಂಕ್ರಾಮಿಕದ ಎಚ್ಚರಿಕೆ ನೀಡಿರೋದು, ಆತಂಕದ ವಿಚಾರವಾಗಿದೆ.
ವಿಶೇಷ ವರದಿ: ಗಣೇಶ ಕೆರೆಕುಳಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us