newsfirstkannada.com

11 ಸಾವಿರ ಕೆಜಿ ಚಿನ್ನ.. 18,817 ಸಾವಿರ ಕೋಟಿ ಮೀಸಲು ನಗದು.. ಇದು ವಿಶ್ವದ ಶ್ರೀಮಂತ ದೇವಾಲಯ

Share :

Published April 22, 2024 at 3:11pm

    ತಿರುಪತಿ ತಿಮ್ಮಪ್ಪ ದೇಗುಲದ ಟ್ರಸ್ಟ್​ ಎಷ್ಟು ಕೋಟಿ FD ಮಾಡಿದೆ?

    ಕೇವಲ ಠೇವಣಿಯಿಂದ ಸಿಗುವ ಬಡ್ಡಿ ಹಣ ಎಷ್ಟು ಕೋಟಿ ಗೊತ್ತಾ?

    ಕೊರೊನಾ ಸಾಂಕ್ರಾಮಿಕ ವರ್ಷಗಳಲ್ಲಿ ತಿರುಪತಿ ಆದಾಯಕ್ಕೆ ಪೆಟ್ಟು

ವಿಶ್ವದ ಶ್ರೀಮಂತ ಹಿಂದೂ ದೇವಾಲಯ ತಿರುಪತಿ ಮತ್ತೊಮ್ಮೆ ಸುದ್ದಿಯಲ್ಲಿದೆ. ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದ ಟ್ರಸ್ಟ್ ಈ ವರ್ಷ 1000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಎಫ್‌ಡಿ (Fixed deposit) ಮಾಡಿದೆ.

ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್, ಈ ವರ್ಷ 1,161 ಕೋಟಿ ರೂಪಾಯಿ ಎಫ್‌ಡಿ ಮಾಡಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಮಾಡಿದ ಅತಿದೊಡ್ಡ ಎಫ್‌ಡಿ ಇದಾಗಿದೆ. ಕಳೆದ 12 ವರ್ಷಗಳಿಂದ ಈ ಟ್ರಸ್ಟ್​ ಪ್ರತಿ ವರ್ಷ ಕನಿಷ್ಠ 500 ಕೋಟಿ ರೂಪಾಯಿಗಳ ಎಫ್‌ಡಿ ಮಾಡಿಕೊಂಡು ಬರುತ್ತಿದೆ.

ಇದನ್ನೂ ಓದಿ: ಎವರೆಸ್ಟ್​, MDH ಪ್ರಾಡಕ್ಟ್​​ನಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ಸ್; 4 ಮಸಾಲೆ ಪೌಡರ್​​ಗಳು ಬ್ಯಾನ್​..!

2016ರಲ್ಲಿ ಹೊಸ ದಾಖಲೆ
2023ರಲ್ಲಿ 757 ಕೋಟಿ ರೂಪಾಯಿ ಎಫ್‌ಡಿ ಮಾಡಿತ್ತು. ಕಳೆದ 12 ವರ್ಷಗಳಲ್ಲಿ ತಿರುಪತಿ ದೇವಸ್ಥಾನದ ಟ್ರಸ್ಟ್ ಒಂದೇ ವರ್ಷದಲ್ಲಿ 1000 ಕೋಟಿ ರೂ.ಗಿಂತ ಹೆಚ್ಚು ಎಫ್‌ಡಿ ಮಾಡಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2016ರಲ್ಲಿ 1,153 ಕೋಟಿ ರೂಪಾಯಿ ಎಫ್​ಡಿ ಮಾಡಿತ್ತು.

ಯಾವಾಗ ಎಷ್ಟು ಕೋಟಿ..?

  • 2013: 608 ಕೋಟಿ ರೂ
  • 2014: 970 ಕೋಟಿ ರೂ
  • 2015: 961 ಕೋಟಿ ರೂ
  • 2016: 1,153 ಕೋಟಿ ರೂ
  • 2017: 774 ಕೋಟಿ ರೂ
  • 2018: 501 ಕೋಟಿ ರೂ
  • 2019: 285 ಕೋಟಿ ರೂ
  • 2020: 753 ಕೋಟಿ ರೂ
  • 2021: 270 ಕೋಟಿ ರೂ
  • 2022: 274 ಕೋಟಿ ರೂ
  • 2023: 757 ಕೋಟಿ ರೂ
  • 2024: 1,161 ಕೋಟಿ ರೂ

ಕೋವಿಡ್‌ನಿಂದ ಗಳಿಕೆ ಕಡಿಮೆ
2012ರವರೆಗೆ ತಿರುಪತಿ ದೇವಸ್ಥಾನದ ಒಟ್ಟು ಎಫ್‌ಡಿ ಮೊತ್ತ 4,820 ಕೋಟಿ ರೂಪಾಯಿ ಆಗಿತ್ತು. 2013 ರಿಂದ 2024 ರವರೆಗಿನ 12 ವರ್ಷಗಳಲ್ಲಿ 8,467 ಕೋಟಿ ರೂಪಾಯಿ ಮೌಲ್ಯದ ಎಫ್‌ಡಿ ಮಾಡಿದೆ. ಕೊರೊನಾ ಸಾಂಕ್ರಾಮಿಕ ವರ್ಷಗಳಲ್ಲಿ ತಿರುಪತಿ ಆದಾಯಕ್ಕೆ ಭಾರೀ ಪೆಟ್ಟು ಬಿದ್ದಿದೆ.

ಇದನ್ನೂ ಓದಿ: ಆ 2 ಓವರ್​​ಗಳಲ್ಲಿ ಪಂದ್ಯದ ಗತಿಯೇ ಬದಲಾಯ್ತು.. RCB ವಿರೋಚಿತ ಸೋಲಿಗೆ 5 ಕಾರಣಗಳು..!

ದೇವಸ್ಥಾನಕ್ಕೆ ಸಂಬಂಧಿಸಿದ ಇತರ ಟ್ರಸ್ಟ್‌ಗಳಾದ ‘ಶ್ರೀ ವೆಂಕಟೇಶ್ವರ ನಿತ್ಯ ಅನ್ನಪ್ರಸಾದ ಟ್ರಸ್ಟ್’ ಸೇರಿದಂತೆ ಇತ್ಯಾದಿ ಟ್ರಸ್ಟ್​ಗಳು 5,529 ಕೋಟಿ ರೂಪಾಯಿ ಮೀಸಲು ಹಣ ಇದೆ. ಒಟ್ಟು 18,817 ಕೋಟಿ ಮೀಸಲು ನಗದು ಇದೆ ಎನ್ನಲಾಗಿದೆ. ಅಚ್ಚರಿಯ ವಿಚಾರ ಅಂದರೆ ಎಫ್‌ಡಿ ಮೇಲಿನ ಬಡ್ಡಿಯಿಂದ ತಿರುಪತಿ ದೇವಸ್ಥಾನ 1,600 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಗಳಿಸುತ್ತದೆ. ಈ ವರ್ಷ ಟ್ರಸ್ಟ್ 1,031 ಕೆಜಿ ಚಿನ್ನವನ್ನು ಠೇವಣಿ ಮಾಡಿದೆ. ಈ ಮೂಲಕ ಠೇವಣಿಯಲ್ಲಿಟ್ಟ ಚಿನ್ನದ ಒಟ್ಟು ಸಂಗ್ರಹ 11 ಸಾವಿರದ 329 ಕೆಜಿಗೆ ಏರಿಕೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ವಿವಾದಾತ್ಮಕ ತೀರ್ಪು ವಿರುದ್ಧ ಕೊಹ್ಲಿ ಕಿತ್ತಾಟ; ತೆಂಡುಲ್ಕರ್​​ ಎಳೆದು ತಂದು ಕೊಹ್ಲಿಗೆ ಕೌಂಟರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

11 ಸಾವಿರ ಕೆಜಿ ಚಿನ್ನ.. 18,817 ಸಾವಿರ ಕೋಟಿ ಮೀಸಲು ನಗದು.. ಇದು ವಿಶ್ವದ ಶ್ರೀಮಂತ ದೇವಾಲಯ

https://newsfirstlive.com/wp-content/uploads/2024/04/TIRUPATI.jpg

Load More