newsfirstkannada.com

ಮದುವೆಯಲ್ಲಿ ಅವಧಿ ಮುಗಿದ ಐಸ್ ಕ್ರೀಂ​ ಸೇವನೆ.. 80ಕ್ಕೂ ಹೆಚ್ಚು ಜನರು ಅಸ್ವಸ್ಥ!

Share :

Published May 6, 2024 at 7:58am

Update May 6, 2024 at 8:00am

    ಮಿಲನ್ ಶಾದಿ ಮಹಲ್ ನಲ್ಲಿ ನಡೆದ ಮದುವೆ ಸಮಾರಂಭ

    ಚನ್ನಪಟ್ಟಣದ ವಧು ಮತ್ತು ಮಾಗಡಿಯ ವರನ ವಿವಾಹ ಸಮಾರಂಭ

    ಊಟದ ನಂತರ ಐಸ್ ಕ್ರೀಂ ತಿಂದ ಅರ್ಧಗಂಟೆಯಲ್ಲಿ ಶುರುವಾಯ್ತು ವಾಂತಿ, ಭೇದಿ

ರಾಮನಗರ: ಮದುವೆಯಲ್ಲಿ ಐಸ್ ಕ್ರೀಂ ತಿಂದು ಜನರು ಅಸ್ವಸ್ಥಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಸಾತನೂರು ಸರ್ಕಲ್ ಬಳಿಯ ಟಿಪ್ಪುನಗರದ ಮಿಲನ್ ಶಾದಿ ಮಹಲ್ ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದ್ದು, ಪರಿಣಾಮ 80 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚನ್ನಪಟ್ಟಣದ ವಧು ಮತ್ತು ಮಾಗಡಿಯ ವರನ ವಿವಾಹ ಸಮಾರಂಭ ಮಿಲನ್ ಶಾದಿ ಮಹಲ್ ನಲ್ಲಿ  ನಡೆಯುತ್ಮುತಿತ್ತು. ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ಐಸ್​ ಕ್ರೀಂ ತಿಂದ ಜನರು ಇದ್ದಕ್ಕಿದ್ದಂತೆಯೇ ಅಸ್ವಸ್ಥಗೊಂಡಿದ್ದಾರೆ. ಊಟದ ನಂತರ ಐಸ್ ಕ್ರೀಂ ತಿಂದ ಅರ್ಧಗಂಟೆಯಲ್ಲಿ ವಾಂತಿ, ಭೇದಿ ಶುರುವಾಗಿದೆ. 50ಕ್ಕೂ ಹೆಚ್ಚು ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಹೆಚ್ಚಿನವರು ಚನ್ನಪಟ್ಟಣದ ಯಾರಬ್ ನಗರ ಹಾಗೂ ಕೋಟೆ ನಿವಾಸಿಗಳು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಅಸ್ತ್ರವಾದ ಪ್ರಜ್ವಲ್​.. ಬಿಜೆಪಿಗೆ ಕಷ್ಟ ಕಷ್ಟ.. ಹೀಗೂ ತಿರುವು ಪಡೆದುಕೊಳ್ತಿದೆಯಾ ಪೆನ್‌ಡ್ರೈವ್ ಪ್ರಕರಣ?

ಐಸ್​ ಕ್ರೀಂ ತಿಂದು ಆಸ್ವಸ್ಥಗೊಂಡವರಲ್ಲಿ 40 ಜನರು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದವರು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅವಧಿ ಮುಗಿದಿದ್ದ ಐಸ್ ಕ್ರೀಂ ತಿಂದಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.

ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಅಸ್ವಸ್ಥಗೊಂಡವರ ಕುಟುಂಬಸ್ಥರು ಆಗಮಿಸಿದ್ದಾರೆ. ಎಲ್ಲರಿಗೂ ಡ್ರಿಪ್ಸ್ ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಯಲ್ಲಿ ಅವಧಿ ಮುಗಿದ ಐಸ್ ಕ್ರೀಂ​ ಸೇವನೆ.. 80ಕ್ಕೂ ಹೆಚ್ಚು ಜನರು ಅಸ್ವಸ್ಥ!

https://newsfirstlive.com/wp-content/uploads/2024/05/Ice-Cream-1.jpg

Load More