newsfirstkannada.com

ಪ್ರಜ್ವಲ್‌ ಮೇಲೆ ಹದ್ದಿನ ಕಣ್ಣು, ಲೊಕೇಶನ್ ಪತ್ತೆಹಚ್ಚಿದ SIT; ಇಂದು ವಶಕ್ಕೆ ಪಡೆಯಲು ಸಿದ್ಧತೆ

Share :

Published May 6, 2024 at 6:45am

    ಬೆಂಗಳೂರು, ಮಂಗಳೂರು, ಚೆನ್ನೈ ಏರ್‌ಪೋರ್ಟ್​ನಲ್ಲಿ ಹೈ ಅಲರ್ಟ್

    ಬೆಂಗಳೂರಿಗೆ ಬಂದು, ಶರಣಾಗದಿದ್ದರೆ ಎಸ್​​ಐಟಿಯಿಂದ ಅರೆಸ್ಟ್

    ಯಾರಿಗೂ ತಿಳಿಯದಂತೆ ಹೆಚ್​ಡಿಡಿ ಮನೆಗೆ ಹೋಗಬಹುದು

ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವ ಜತೆಗೆ, ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾದ ಪೆನ್​​ಡ್ರೈವ್​​ ಕೇಸ್​​​ನ ಕೇಂದ್ರಬಿಂದು ಸಂಸದ ಪ್ರಜ್ವಲ್​ ರೇವಣ್ಣ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಇತ್ತ, ಬ್ಲೂ ಕಾರ್ನರ್​ ನೋಟಿಸ್​ ಸಹ ಜಾರಿ ಆಗಿದ್ದು, ಇವತ್ತು ಬಹುತೇಕ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಅನ್ನೋ ಮಾಹಿತಿ ಸಿಕ್ಕಿದೆ.

ಇಂದೇ ಎಸ್​ಐಟಿ ಮುಂದೆ ಪ್ರಜ್ವಲ್​ ರೇವಣ್ಣ ಶರಣಾಗುವ ಸಾಧ್ಯತೆ

ಸದ್ಯ ಎತ್ತ ಕೇಳಿದ್ರು ಕೇಳಿ ಬರ್ತಿರೋ ಒಂದೇ ಹೆಸರು ಪ್ರಜ್ವಲ್​ ರೇವಣ್ಣ. ಹೆಚ್​.ಡಿ ರೇವಣ್ಣ, ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್, ಇದೆಲ್ಲದಕ್ಕು ಕಾರಣ ಹಾಸನದಲ್ಲಿ ಸದ್ದು ಮಾಡಿದ ಅಶ್ಲೀಲ ವಿಡಿಯೋ, ಪೆನ್‌ಡ್ರೈವ್, ಲೈಂಗಿಕ ದೌರ್ಜನ್ಯ ಹೀಗೆ ದಾಖಲಾದ ನಾನಾ ಪ್ರಕರಣ ಬಗ್ಗೆ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ವಿರುದ್ಧ ಈಗಾಗಲೇ ಬ್ಲೂಕಾರ್ನರ್‌ ನೋಟಿಸ್‌ ಜಾರಿಯಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ

ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಪ್ರಜ್ವಲ್‌ ಲೊಕೇಶನ್ ಪತ್ತೆಹಚ್ಚಿದ SIT, ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ. ಇದರ ಬೆನ್ನಲ್ಲೇ ಬೆಂಗಳೂರು, ಮಂಗಳೂರು ಹಾಗೂ ಚೆನ್ನೈ ಏರ್‌ಪೋರ್ಟ್​ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಪ್ರಜ್ವಲ್ ರೇವಣ್ಣ ವಿದೇಶದಿಂದ ಯಾವುದೇ ಏರ್​ಪೋರ್ಟ್​ಗೆ ಬಂದ ಬೆನ್ನಲ್ಲೇ ವಶಕ್ಕೆ ಪಡೆಯಲು ಎಸ್​ಐಟಿ ಟೀಂ ಸಿದ್ಧವಾಗಿದೆ. ಕಳೆದೊಂದು ದಿನದಿಂದ ಎಲ್ಲಾ ಏರ್​ಪೋರ್ಟ್​ನಲ್ಲಿ ಬೀಡುಬಿಟ್ಟಿರೋ ಎಸ್​ಐಟಿ, ಪ್ರಜ್ವಲ್ ರೇವಣ್ಣ ಬರುವಿಕೆಗಾಗಿ ಇಂಚಿಂಚು ಜಾಲಾಡುತ್ತಿದೆ.

ಪ್ರಜ್ವಲ್‌ ಲೊಕೇಶನ್ ಪತ್ತೆಹಚ್ಚಿದ SIT, ವಶಕ್ಕೆ ಪಡೆಯಲು ಸಿದ್ಧತೆ

ನಿನ್ನೆ ಸಂಜೆ 7.20ಕ್ಕೆ ಬಂದ ಎಮರೈಟ್ಸ್ ವಿಮಾನದಲ್ಲಿ ಪ್ರಜ್ವಲ್ ಆಗಮಿಸುವ ನಿರೀಕ್ಷೆ ಇತ್ತು. ಆದ್ರೆ ಆ ವಿಮಾನದಲ್ಲಿ ಬಾರದ ಕಾರಣ ಗುಪ್ತಚರ ಹಾಗೂ ಎಸ್ಐಟಿ ತಂಡ, ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸುವವರ ಲಿಸ್ಟ್ ಚೆಕ್ ಮಾಡ್ತಿದೆ. ಇಂದೂ ಕೂಡ ಏರ್​ಪೋರ್ಟ್​ನಲ್ಲಿ ಹದ್ದಿನಕಣ್ಣಿಡಲು ಎಸ್​​ಐಟಿ ಪ್ಲಾನ್ ಮಾಡಿಕೊಂಡಿದೆ.

ಬಂಧನವೋ? ಶರಣಾಗರಿಯೋ?

ಪ್ರಜ್ವಲ್ ರೇವಣ್ಣ ಇಂದು ರಾಜ್ಯಕ್ಕೆ ಆಗಮಿಸಲಿರೋ ಸಾಧ್ಯತೆ ಇದೆ ಎಂಬ ಮಾಹಿತಿ ಸಿಕ್ಕಿದೆ.. ಬೆಂಗಳೂರಿಗೆ ಬಂದು ಶರಣಾಗದಿದ್ದರೆ, ಅರೆಸ್ಟ್ ಮಾಡಬೇಕಾದ ಎಲ್ಲಾ ಸಿದ್ಧತೆಯನ್ನ ಎಸ್​​ಐಟಿ ಅಧಿಕಾರಿಗಳ ಮಾಡಿಕೊಂಡಿದ್ದಾರೆ. ಇನ್ನೂ ಯಾರಿಗೂ ತಿಳಿಯದಂತೆ ಬೆಂಗಳೂರಿಗೆ ಬಂದ್ರೇ, ನೇರವಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮನೆ ಹೋಗಬಹುದು. ಪ್ರಜ್ವಲ್​ ತನ್ನ ತಾತ ದೇವೇಗೌಡರ ಬಳಿ ಬಂದು ಆರ್ಶೀವಾದ ಪಡೆದು ಎಸ್​ಐಟಿ ಅಧಿಕಾರಿಗಳಿಗೆ ಶರಣಾಗುವ ಸಾಧ್ಯತೆ. ಎಸ್​ಐಟಿ ಅಧಿಕಾರಿಗಳ ಮುಂದೆ ಶರಣಾಗುವ ಮುಂಚೆ ತಮ್ಮ ವಕೀಲರ ಜೊತೆ ಜಾಮೀನು ಅರ್ಜಿ ಬಗ್ಗೆ ಚರ್ಚೆ ಮಾಡಬಹುದು. ಆ ಬಳಿಕ ಎಸ್​ಐಟಿ ಅಧಿಕಾರಿಗಳ ಮುಂದೆ ಪ್ರಜ್ವಲ್ ಶರಣಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಂತ್ರಸ್ತ ಮಹಿಳೆ ಕಿಡ್ನಾಪ್​ ಬಗ್ಗೆ ಒಬ್ಬೊಬ್ರು ಒಂದೊಂದು ಮಾತು.. ಯಾವುದು ಸುಳ್ಳು, ಯಾವುದು ಸತ್ಯ?

ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಕೇಸ್ ಹೊರ ಬರುತ್ತಿದ್ದಂತೆ ಏಪ್ರಿಲ್ 28ರ ರಾತ್ರಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಗೆ ಓಡಿ ಹೋಗಿದ್ದರು. ಮೊನ್ನೆ ಈ ಬಗ್ಗೆ ಮಾತನಾಡಿದ್ದ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು, ಕಾನೂನು ಚರ್ಚೆ ನಡೆಯುತ್ತಿದೆ, ಪ್ರಜ್ವಲ್ ಶರಣಾಗುತ್ತಾರೆ ಎಂಬ ಮಾಹಿತಿ ನೀಡಿದ್ದರು..

ಒಟ್ಟಾರೆ ದೇಶದೆ ಮೂಲೆ ಮೂಲೆಯಲ್ಲೂ ಹಲ್​ಚಲ್​ ಮೂಡಿಸಿರುವ ಪ್ರಜ್ವಲ್​ ವಿರುದ್ಧದ ಪ್ರಕರಣ ಇಂದು ಮಹತ್ವದ ಹಂತಕ್ಕೆ ತಲುಪಲಿದೆ.. ಪ್ರಜ್ವಲ್ ಇಂದು ಅರೆಸ್ಟ್​ ಅಗೋ ಎಲ್ಲಾ ಸಿದ್ಧತೆ ಕೂಡ ನಡೆದಿರೋದ್ರಿಂದ ಪ್ರಜ್ವಲ್​ ಶರಣಾಗ್ತಾರಾ. ಇಲ್ಲಾ ಅರೆಸ್ಟ್​ ಆಗ್ತಾರಾ ಎಂಬ ಪ್ರಶ್ನೆಗೆ ಇಂದು ಬಹುತೇಕ ಉತ್ತರ ಸಿಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್‌ ಮೇಲೆ ಹದ್ದಿನ ಕಣ್ಣು, ಲೊಕೇಶನ್ ಪತ್ತೆಹಚ್ಚಿದ SIT; ಇಂದು ವಶಕ್ಕೆ ಪಡೆಯಲು ಸಿದ್ಧತೆ

https://newsfirstlive.com/wp-content/uploads/2024/04/PRAJWAL.jpg

Load More