newsfirstkannada.com

ಸಂತ್ರಸ್ತ ಮಹಿಳೆ ಕಿಡ್ನಾಪ್​ ಬಗ್ಗೆ ಒಬ್ಬೊಬ್ರು ಒಂದೊಂದು ಮಾತು.. ಯಾವುದು ಸುಳ್ಳು, ಯಾವುದು ಸತ್ಯ?

Share :

Published May 6, 2024 at 6:16am

    ತೋಟದಲ್ಲಿರೋ ಕಾರ್ಮಿಕರಿಂದ ನೀಡಿದ ಹೇಳಿಕೆಯಿಂದ SITಗೆ ಗೊಂದಲ

    ರಕ್ಷಣೆ ಆಗಿರೋದು ತೋಟದ ಮನೆಯಲ್ಲಾ ಅಥವಾ ಬಸ್ ನಿಲ್ದಾಣದಲ್ಲಾ?

    ಕಾಳೇನಹಳ್ಳಿ ತೋಟದ ಮನೆಯಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತೆ ಮಹಿಳೆ

ಕಿಡ್ನಾಪ್​ ಆಗಿದ್ದಾಳೆ ಎನ್ನಲಾದ ಪೆನ್​ಡ್ರೈವ್​ ಪ್ರಕರಣದ ಸಂತ್ರಸ್ತೆಯನ್ನ ಎಸ್​ಐಟಿ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಆದ್ರೀಗ ರಕ್ಷಣೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಆಕೆಯನ್ನು ಕಿಡ್ನಾಪ್‌ ಮಾಡಿ ಕೂಡಿ ಹಾಕಲಾಗಿತ್ತು ಅಂತಾ ದೂರು ಕೊಡಲಾಗಿದೆಯಾದ್ರೂ, ತೋಟದ ಮನೆಯಲ್ಲಿರೋ ಕಾರ್ಮಿಕರು ಕೊಟ್ಟಿರೋ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿದೆ.

ಇದನ್ನೂ ಓದಿ: EXCLUSIVE: ಪ್ರಜ್ವಲ್ ರೇವಣ್ಣ ಕೇಸ್‌ಗೆ ಭಯಾನಕ ಟ್ವಿಸ್ಟ್.. ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಟೆನ್ಷನ್!

ಕಿಡ್ನಾಪ್​ ಆಗಿದ್ದಾಳೆ ಎನ್ನಲಾದ ಸಂತ್ರಸ್ತ ಮಹಿಳೆಯನ್ನ ಎಸ್​ಐಟಿ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಸಂತ್ರಸ್ತೆ ಹುಣಸೂರಿನ ಕಾಳೇನಹಳ್ಳಿಯ ತೋಟದಲ್ಲಿರೋ ಮಾಹಿತಿ ತಿಳಿದು ಅಲ್ಲಿಗೆ ತೆರಳಿದ್ದ ಎಸ್​ಐಟಿ ತೋಟದ ಮನೆಯ ಮಾಲೀಕ ರಾಜ್‌ಗೋಪಾಲ್‌ನನ್ನ ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಆಕೆ ಒಂದು ದಿನ ಆಶ್ರಯ ಪಡೆದಿದ್ದ ಮಾಹಿತಿ ಲಭ್ಯವಾಗಿತ್ತು. ಅಷ್ಟರಲ್ಲಾಗಲೇ ಸಂಬಂಧಿಕರ ಮನೆಗೆ ತೆರಳಲು ಮಹಿಳೆ ಹೊರಟಿರೋ ವಿಷಯ ತಿಳಿದಿತ್ತು. ಬಳಿಕ ಹುಣಸೂರು ಬಸ್‌ನಿಲ್ದಾಣದಲ್ಲಿ ಆಕೆಯನ್ನು ವಶಕ್ಕೆ ಪಡೆದಿದ್ದಾಗಿ ಎಸ್‌ಐಟಿ ಮಾಹಿತಿ ನೀಡಿದೆ. ಆದ್ರೆ, ತೋಟದಲ್ಲಿರೋ ಕಾರ್ಮಿಕರು ಹೇಳ್ತಿರೋದೆ ಬೇರೆಯಾಗಿದೆ.

ಕಿಡ್ನಾಪ್‌ ಬಗ್ಗೆ ಗೊಂದಲ ಮೂಡಿಸಿದ ಕಾರ್ಮಿಕರ ಹೇಳಿಕೆ

ತೋಟದಲ್ಲಿರೋ ಓರ್ವ ಕಾರ್ಮಿಕ ಮಹಿಳೆ ಒಂದು ದಿನ ಇಲ್ಲಿದ್ರೂ, ಸಾಲ ಹೆಚ್ಚಾಗಿದೆ ಅಂತ ಹೇಳಿದ್ರೂ ಅಂತ ಹೇಳಿದ್ರೆ, ಮತ್ತೊಬ್ಬ ಕಾರ್ಮಿಕ ನಾನು ಯಾರನ್ನೂ ಇಲ್ಲಿ ನೋಡೇ ಇಲ್ಲ ಅಂತಿದ್ದಾರೆ. ಈ ಬಗ್ಗೆ ಮಾತಾಡಿದ ಓರ್ವ ಕಾರ್ಮಿಕ, 7 ವರ್ಷದಿಂದ ಕೆಲಸ ಮಾಡುತ್ತಿದ್ದೆ. ನಾನು ಆ ಮಹಿಳೆಯನ್ನು ಒಂದೇ ದಿನ ನೋಡಿದ್ದೆ. ಒಂದೂವರೆ ಲಕ್ಷ ರೂಪಾಯಿ ಸಾಲ ಆಗಿದೆ. ಆ ದುಡ್ಡನ್ನು ತೀರಿಸಬೇಕು ಅಂತ ಆ ಮಹಿಳೆ ಹೇಳಿದ್ದರು. ಆಗ ನಾನು ರಾಜ್‌ಗೋಪಾಲ್‌ ಅವರಿಗೆ ಸರ್​ ನೀವು ಏಕೆ ಅವರನ್ನು ಇಲ್ಲಿ ಇಟ್ಟುಕೊಂಡಿದ್ದೀರಿ? 500 ರೂಪಾಯಿ ಕೊಟ್ಟು ಕಳುಹಿಸಿ ಅಂತಾ ಹೇಳ್ದೆ. ಆದರೆ ಅವರು ನಿನಗೆ ಇದೆಲ್ಲ ಏಕೆ ಸುಮ್ಮನೆ ಇರು ಅಂತಾ ಹೇಳಿದ್ರು. ಮಹಿಳೆ ಮರದ ಕೆಳಗಡೆ ನಿಂತುಕೊಂಡಿದ್ದರು. ಆಗ ನಾನು ಅವರು ಅಲ್ಲೇ ನಿಂತುಕೊಂಡಿದ್ದಾರೆ ಅಂತಾ ಪೊಲೀಸರಿಗೆ ಹೇಳಿದೆ ಅಂತಾ ಹೇಳಿಕೊಂಡಿದ್ದಾರೆ.

ಮತ್ತೊಬ್ಬ ಕಾರ್ಮಿಕ ಮಾತಾಡಿ.. ಆ ಮಹಿಳೆ ಯಾರು ಅಂತಾನೇ ಗೊತ್ತಿಲ್ಲ. ತೋಟದಲ್ಲಿ ಇದ್ರಾ ಅಂತ ನನಗೆ ಗೊತ್ತಿಲ್ಲ. ಸಾಹೇಬ್ರ ರೂಮ್​ನಲ್ಲಿ ಇದ್ರು ಅಂತ ಹೇಳುತ್ತಿದ್ರು ಆದರೆ ಅದು ನನಗೆ ಗೊತ್ತಿಲ್ಲ. ಪೊಲೀಸ್​ ಅಧಿಕಾರಿಗಳು ಕೇಳಿದ್ರು ನನಗೆ ಗೊತ್ತಿಲ್ಲ ಅಂತಾ ಹೇಳಿದ್ದೇನೆ. ಅದೇಲ್ಲ ಅವರವರ ಕಷ್ಟ ನಮಗೆ ಏಕೆ ಅಂತಾ ಹೇಳಿಕೊಂಡಿದ್ದಾರೆ.

ಈ ಮೂವರು ಒಂದೊಂದು ರೀತಿ ಹೇಳಿಕೆ ನೀಡಿರೋದು ಗೊಂದಲಕ್ಕೆ ಕಾರಣವಾಗಿದೆ. ಇಲ್ಲಿ ಗಮನಿಸಬೇಕಾದ ಒಂದು ಅಂಶ ಅಂದ್ರೆ, ಮಹಿಳೆ ಮಾತನಾಡಿಸಿದವರ ಬಳಿ ತನ್ನನ್ನ ಕಿಡ್ನಾಪ್‌ ಮಾಡಿದ್ದಾರೆ ಅನ್ನೋ ಬಗ್ಗೆ ಏನನ್ನೂ ಹೇಳಿಲ್ಲ. ಬಲವಂತವಾಗಿ ಕರೆತಂದಿದ್ದಾಗಿಯೋ ಯಾರ ಬಳಿ ಮಾತನಾಡಿಲ್ಲ. ಹೀಗಾಗಿ ಸಂತ್ರಸ್ತೆ ನಿಜವಾಗಿ ಕಿಡ್ನಾಪ್​ ಆಗಿದ್ಲಾ? ಅಥವಾ ಇದರ ಹಿಂದೆ ಬೇರೆ ಏನಾದ್ರೂ ಇದೆಯಾ ಅನ್ನೋ ಸತ್ಯವನ್ನ ಎಸ್​ಐಟಿ ಬಯಲಿಗೆಳೆಯಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂತ್ರಸ್ತ ಮಹಿಳೆ ಕಿಡ್ನಾಪ್​ ಬಗ್ಗೆ ಒಬ್ಬೊಬ್ರು ಒಂದೊಂದು ಮಾತು.. ಯಾವುದು ಸುಳ್ಳು, ಯಾವುದು ಸತ್ಯ?

https://newsfirstlive.com/wp-content/uploads/2024/05/prajwal-revanna10.jpg

Load More