newsfirstkannada.com

EXCLUSIVE: ಪ್ರಜ್ವಲ್ ರೇವಣ್ಣ ಕೇಸ್‌ಗೆ ಭಯಾನಕ ಟ್ವಿಸ್ಟ್.. ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಟೆನ್ಷನ್!

Share :

Published May 5, 2024 at 2:28pm

Update May 5, 2024 at 2:29pm

    ವೈರಲ್‌ ವಿಡಿಯೋದಲ್ಲಿರುವ ಮತ್ತಷ್ಟು ಮಂದಿ ಸಂತ್ರಸ್ತೆಯರಿಗೆ ಸಂಕಷ್ಟ ಶುರು

    ಸಂತ್ರಸ್ತೆಯರಿಗೆ ಆರೋಪಿಗಳ ಕಡೆಯಿಂದ ಆಮಿಷ, ಇನ್ನೂ ಕೆಲವರಿಗೆ ಬೆದರಿಕೆ

    ಸದ್ಯ 4 ಮಂದಿ ಸಂತ್ರಸ್ತೆಯರಿಗೆ ಲೈಂಗಿಕ ದೌರ್ಜನ್ಯ ಆಗಿರೋದು ಸಾಬೀತು

ಬೆಂಗಳೂರು: ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಇವತ್ತು ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ನೀಡಿರುವ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಈಗ ಸಖತ್ ಟೆನ್ಷನ್ ಎದುರಾಗಿದೆ.

ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸಂಕಷ್ಟ ಶುರುವಾಗಿದೆ. ವಿಡಿಯೋದಲ್ಲಿರುವ ಓರ್ವ ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ ಹಾಗೂ ಬೆಂಗಳೂರಿನ ಎಇಇ, ಸೇರಿ 5ಕ್ಕೂ ಹೆಚ್ಚು ಅಧಿಕಾರಿಗಳಿಗೆ SITಯಿಂದ ನೋಟಿಸ್ ಜಾರಿಯಾಗಿದೆ.

ಸರ್ಕಾರಿ ಅಧಿಕಾರಿಗಳಿಗೆ ಎಸ್‌ಐಟಿ ಪೊಲೀಸರು 41A ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ವಿಡಿಯೋದಲ್ಲಿ ಇರೋದು ನೀವೇನಾ ಅಂತ ಪ್ರಶ್ನಿಸಲಾಗಿದೆ. ಒಂದು ವೇಳೆ ವಿಡಿಯೋದ ಸತ್ಯ ತನಿಖೆಯಲ್ಲಿ ಸಾಬೀತಾದ್ರೆ ಪ್ರಜ್ವಲ್ ರೇವಣ್ಣ ಅವರ ಜೊತೆಗೆ ಮಹಿಳಾ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: HD ರೇವಣ್ಣಗೆ ಆಘಾತದ ಮೇಲೆ ಆಘಾತ.. ಇದೀಗ ಮತ್ತೊಂದು ದೊಡ್ಡ ಬೆಳವಣಿಗೆ..! 

ಮೆಡಿಕೆಲ್ ಟೆಸ್ಟ್‌ನಲ್ಲಿ ಲೈಂಗಿಕ ದೌರ್ಜನ್ಯ ಸಾಬೀತು!
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕೇಸ್‌ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಸದ್ಯ 4 ಮಂದಿ ಸಂತ್ರಸ್ತರು ಎಸ್ಐಟಿ ಕಚೇರಿಯಲ್ಲಿದ್ದು, ನಾಲ್ಕು ಮಂದಿಗೂ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಅಷ್ಟು ಮಂದಿಗೂ ಲೈಂಗಿಕ ದೌರ್ಜನ್ಯ ಆಗಿರುವುದು ಸಾಬೀತಾಗಿದೆ ಎನ್ನಲಾಗಿದೆ. ಈಗಾಗಲೇ ನಾಲ್ಕು ಮಂದಿಯಿಂದ 164 ಹೇಳಿಕೆ ದಾಖಲಾಗಿದೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ. ಎಸ್‌ಐಟಿ ವಶದಲ್ಲಿರುವ ನಾಲ್ಕು ಮಂದಿ ಸಂತ್ರಸ್ತರಿಗೂ ಮಹಿಳಾ ಪೊಲೀಸ್ ಭದ್ರತೆ ನೀಡಲಾಗಿದೆ.

ಮತ್ತಷ್ಟು ಸಂತ್ರಸ್ತೆಯರು SIT ಸಂಪರ್ಕ!
ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮತ್ತಷ್ಟು ಮಂದಿ ಸಂತ್ರಸ್ತೆಯರು ಸಂಕಷ್ಟದಲ್ಲಿ ಸಿಲುಕಿದ್ದು ಅವರು ಎಸ್.ಐ.ಟಿ ಅಧಿಕಾರಿಗಳನ್ನು ಸಂಪರ್ಕ ಮಾಡುವ ಸಾಧ್ಯತೆ ಇದೆ. ಆರೋಪಿಗಳ ಕಡೆಯಿಂದ ಸಂತ್ರಸ್ತೆಯರನ್ನು ಎಸ್.ಐ.ಟಿ ಸಂಪರ್ಕಕ್ಕೆ ಸಿಗದಂತೆ ಮಾಡುವ ಪ್ರಯತ್ನವೂ ನಡೆದಿದೆ. ಆರೋಪಿಗಳ ಕಡೆಯವರು ಕೆಲವರಿಗೆ ಆಮಿಷ, ಇನ್ನೂ ಕೆಲವರಿಗೆ ಬೆದರಿಕೆ ಒಡ್ಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ದೇವೇಗೌಡ್ರು ಕುಟುಂಬದಲ್ಲಿ ಬಂಧನ ಇದೇ ಮೊದಲು.. SIT ವಿಚಾರಣೆಯಲ್ಲಿ ರೇವಣ್ಣ ಕಣ್ಣೀರು; ಹೇಳಿದ್ದೇನು? 

ಎಸ್.ಐ.ಟಿ ಅಧಿಕಾರಿಗಳು ಹಲವು ಸಂತ್ರಸ್ತೆಯರ ಬಗ್ಗೆಯೂ ಸಾಕಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಂತ್ರಸ್ತ ಮಹಿಳೆಯರು ಧೈರ್ಯ ತೋರಿಸಿ ಮುಂದೆ ಬಂದ್ರೆ ಸಂಪೂರ್ಣ ರಕ್ಷಣೆ ನೀಡುವ ಭರವಸೆ ನೀಡಲಾಗಿದೆ. ಸಂತ್ರಸ್ತ ಮಹಿಳೆಯರು ಧೈರ್ಯವಾಗಿ ಬಂದು ದೂರು ನೀಡಿದ್ರೆ ಈ ಕೇಸ್ ಮತ್ತಷ್ಟು ಬಲವಾಗುತ್ತೆ ಅನ್ನೋದು ಅಧಿಕಾರಿಗಳ ನಂಬಿಕೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXCLUSIVE: ಪ್ರಜ್ವಲ್ ರೇವಣ್ಣ ಕೇಸ್‌ಗೆ ಭಯಾನಕ ಟ್ವಿಸ್ಟ್.. ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಟೆನ್ಷನ್!

https://newsfirstlive.com/wp-content/uploads/2024/04/Prajwal-Revanna-Hassan-JDS.jpg

Load More