newsfirstkannada.com

ರೇಣುಕಾಸ್ವಾಮಿ ಕಳುಹಿಸಿದ್ದು ಎಷ್ಟು ಅಶ್ಲೀಲ ಮೆಸೇಜ್‌? 50, 100 ಅಲ್ಲವೇ ಅಲ್ಲ; ಸ್ಫೋಟಕ ಮಾಹಿತಿ!

Share :

Published June 28, 2024 at 11:31am

  ರೇಣುಕಾಸ್ವಾಮಿ ಎಷ್ಟು ತಿಂಗಳಿಂದ ಪವಿತ್ರಾಗೆ ಮೆಸೇಜ್ ಕಳುಹಿಸಿದ್ದ

  ಪವಿತ್ರಾ ಗೌಡಗೆ ಎಷ್ಟು ಮೆಸೇಜ್ ಕಳುಹಿಸಿದ್ದ ಅನ್ನೋ ಮಾಹಿತಿ ಲಭ್ಯ

  ಕೊಡಬಾರದ ಕಾಟ ಕೊಟ್ಟಿದ್ದರ ಬಗ್ಗೆ ವಿಚಾರಣೆ ಬಾಯ್ಬಿಟ್ಟ ಆರೋಪಿಗಳು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನ ಕಳೆದಂತೆ ಒಂದೊಂದೇ ವಿಷ್ಯಗಳು ಬಯಲಾಗುತ್ತಿವೆ. ಕೊಲೆಯ ಕ್ರೌರ್ಯ ಒಂದು ಕಡೆಯಾದ್ರೆ ಕೊಲೆಯಾದ ರೇಣುಕಾಸ್ವಾಮಿ ಮಾಡಿದ ತಪ್ಪು ಕೂಡ ತನಿಖೆಯಲ್ಲಿ ಹೊರ ಬರುತ್ತಿದೆ. ಇದೀಗ ಬಂದ ಸ್ಫೋಟಕ ಮಾಹಿತಿಯಲ್ಲಿ ರೇಣುಕಾಸ್ವಾಮಿ A1 ಪವಿತ್ರಾ ಗೌಡ ಅವರಿಗೆ ಕೊಡಬಾರದ ಕಾಟ ಕೊಟ್ಟಿದ್ದಾನೆ ಎನ್ನಲಾಗಿದೆ.

ಹತ್ಯೆಯಾದ ರೇಣುಕಾಸ್ವಾಮಿ ಮೊಬೈಲ್‌ ಅನ್ನು ಡಿ ಗ್ಯಾಂಗ್‌ನಿಂದ ಮೋರಿ ಬಿಸಾಕಿ ಹೋಗಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಎಷ್ಟೇ ಹುಡುಕಿದರೂ ರೇಣುಕಾಸ್ವಾಮಿಯ ಮೊಬೈಲ್ ಸಿಕ್ಕಿರಲಿಲ್ಲ. ಕೊನೆಗೆ ಕೋರ್ಟ್ ಅನುಮತಿ ಪಡೆದ ಪೊಲೀಸರು ಹೊಸ ಸಿಮ್ ಖರೀದಿ ಮಾಡಿ CDR ಅಂದ್ರೆ ಕಾಲ್ ಡಿಟೇಲ್ ರೆಕಾರ್ಡ್ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

ಪೊಲೀಸರ ತನಿಖೆಯಲ್ಲಿ ರೇಣುಕಾಸ್ವಾಮಿ ಕುರಿತ ಮತ್ತಷ್ಟು ರೋಚಕ ಅಂಶಗಳು ಬಯಲಾಗಿದೆ. ಅದರಲ್ಲಿ ಕೊಲೆಯಾದ ರೇಣುಕಾಸ್ವಾಮಿ ಎಷ್ಟು ತಿಂಗಳಿಂದ ಪವಿತ್ರಾ ಗೌಡಗೆ ಕಾಟ ಕೊಡಲು ಶುರು ಮಾಡಿದ್ದ. ಪವಿತ್ರಾ ಗೌಡಗೆ ಎಷ್ಟು ಮೆಸೇಜ್ ಕಳುಹಿಸಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

5 ತಿಂಗಳಿಂದ ನಿರಂತರ ಕಾಟ?
ನ್ಯೂಸ್ ಫಸ್ಟ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕಳೆದ ಫೆಬ್ರವರಿ ತಿಂಗಳಿಂದ ರೇಣುಕಾಸ್ವಾಮಿ ಆರೋಪಿ ಪವಿತ್ರಾ ಗೌಡಗೆ ಮೆಸೇಜ್ ಮಾಡಲು ಶುರು ಮಾಡಿದ್ದ. ಅಂದ್ರೆ ಕಳೆದ 5 ತಿಂಗಳಿಂದ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಈತನ ಕಾಟ ಅತಿಯಾದಾಗ ಪವಿತ್ರಾ ಗೌಡ ಅವರು ಪವನ್‌ಗೆ ಈ ವಿಚಾರ ತಿಳಿಸಿದ್ದಾರೆ.

ಇದನ್ನೂ ಓದಿ: ಗುರು ನಾನ್‌ ಇನ್ನೂ ಚಿಕ್ಕವಳು.. ದರ್ಶನ್ ಅಭಿಮಾನಿಗಳ ಬ್ಯಾಡ್‌ ಕಮೆಂಟ್ಸ್‌ಗೆ ಸೋನು ಫುಲ್‌ ಗರಂ; ಏನಂದ್ರು? 

ಮೃತ ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಬರೋಬ್ಬರಿ 200 ಮೆಸೇಜ್ ಕಳುಹಿಸಿದ್ದ ಎನ್ನಲಾಗಿದೆ. ಆ 200 ಮೆಸೇಜ್‌ಗಳು ಅಶ್ಲೀಲ ಮೆಸೇಜ್‌ಗಳಾಗಿದ್ದವು ಎನ್ನಲಾಗಿದೆ. ಈತನ ಮೆಸೇಜ್‌ಗಳನ್ನ ನೋಡಿ, ನೋಡಿ ರೋಸಿ ಹೋಗಿದ್ದ ಪವಿತ್ರಾ ಗೌಡ ಅವರ ಆರೋಪಿ ಪವನ್‌ಗೆ ಹೇಳಿದ್ದರು. ಆದರೆ ಕೊಲೆ ಆಗುತ್ತೆ ಅಂದುಕೊಂಡಿರಲಿಲ್ಲ ಎಂದು ಪವಿತ್ರಾ ಗೌಡ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರೇಣುಕಾಸ್ವಾಮಿ ಕಳುಹಿಸಿದ್ದು ಎಷ್ಟು ಅಶ್ಲೀಲ ಮೆಸೇಜ್‌? 50, 100 ಅಲ್ಲವೇ ಅಲ್ಲ; ಸ್ಫೋಟಕ ಮಾಹಿತಿ!

https://newsfirstlive.com/wp-content/uploads/2024/06/Renukaswamy-Pavithra-gowda.jpg

Load More