/newsfirstlive-kannada/media/post_attachments/wp-content/uploads/2024/06/darshan-17-2.jpg)
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್​ ಆ್ಯಂಡ್​ ಟೀಂ ಈಗ ಲಾಕಪ್​ನಲ್ಲಿದ್ದಾರೆ. ಹತ್ಯೆ ಕುರಿತಾಗಿ ತನಿಖೆ ಎದುರಿಸುತ್ತಿದ್ದಾರೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಹಂತಕರು ಆತನ ಮೃತದೇಹವನ್ನು ಸಮನಹಳ್ಳಿಯ ಮೋರಿಗೆ ಎಸೆದಿದ್ದರು. ಆದರೆ ಅದಕ್ಕೂ ಮೊದಲ ಆ ಮೃತದೇಹವನ್ನು ಎಲ್ಲಿ ಹಾಕಿದ್ದರು ಗೊತ್ತಾ?. ಇಲ್ಲಿದೆ ಮಾಹಿತಿ.
ನ್ಯೂಸ್ ಫಸ್ಟ್​ಗೆ ಸಿಕ್ಕ ಎಕ್ಸ್ ಕ್ಲೂಸಿವ್ ಮಾಹಿತಿ ಪ್ರಕಾರ, ಆರ್ ಆರ್ ನಗರ ಶೆಡ್ ನಲ್ಲಿ ರೇಣುಕಾಸ್ವಾಮಿ ಭೀಕರ ಹತ್ಯೆ ನಡೆದಿದೆ. ಹತ್ಯೆ ಬಳಿಕ ಶವವನ್ನ ಮೊದಲು ಸೆಕ್ಯುರಿಟಿ ರೂಂನಲ್ಲಿ ಹಾಕಲಾಗಿದೆ. ಶೆಡ್ ಕಾವಲಿಗಿದ್ದ ಸೆಕ್ಯುರಿಟಿ ರೂಂನಲ್ಲಿ ಮೃತದೇಹವನ್ನು ಆರೋಪಿಗಳು ಎಸೆದಿದ್ದಾರೆ.
ಸೆಕ್ಯುರಿಟಿ ರೂಂ ನಲ್ಲಿ ರಕ್ತದ ಕಲೆಗಳು
ಮೃತದೇಹ ಸಾಗಿಸೋವರೆಗು ಆರೋಪಿಗಳು ಸೆಕ್ಯುರಿಟಿ ರೂಂನಲ್ಲಿ ಹಾಕಿದ್ದರು. ಪೊಲೀಸರ ತನಿಖೆ ವೇಳೆ ಸೆಕ್ಯುರಿಟಿ ರೂಂ ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ.
ಇದನ್ನೂ ಓದಿ: ಅಸ್ವಸ್ಥರಾಗಿದ್ದ ಪವಿತ್ರಾ ಗೌಡ.. ಈಗ ಹೇಗಿದ್ದಾರೆ? ಏನಾಗಿತ್ತು?
ಸೆಕ್ಯುರಿಟಿ ಗಾರ್ಡ್ ವಿಚಾರಣೆ
ಪೊಲೀಸರು ಸೆಕ್ಯುರಿಟಿ ರೂಂನಲ್ಲಿ ಕೂಡ ಮಹಜರು ಮಾಡಿದ್ದಾರೆ. ನಂತರ ಸೆಕ್ಯುರಿಟಿ ಗಾರ್ಡ್ ವಿಚಾರಣೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಶೆಡ್ ಸೆಕ್ಯುರಿಟಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸೆಕ್ಯುರಿಟಿ ಹಿಂದಿ ಭಾಷೆಯಲ್ಲಿ ಮಾತಾನಾಡುತ್ತಿದ್ದು,ಪೊಲೀಸರ ರಿಮ್ಯಾಂಡ್ ಅರ್ಜಿಯಲ್ಲಿ ಶವ ಎಸೆದ ಬಗ್ಗೆ ಉಲ್ಲೇಖಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us