newsfirstkannada.com

ಹಾಸನದಲ್ಲಿ ಅಶ್ಲೀಲ ವಿಡಿಯೋ ಮೊದಲು ವಾಟ್ಸ್‌ಆ್ಯಪ್‌ಗೆ ಹಾಕಿದ್ದು ಯಾರು? ಸ್ಫೋಟಕ ಮಾಹಿತಿ ಬಹಿರಂಗ

Share :

Published May 2, 2024 at 2:46pm

Update May 2, 2024 at 3:18pm

    ಅಶ್ಲೀಲ ವಿಡಿಯೋಗಳನ್ನ ಮೊದಲು ವಾಟ್ಸ್​ ಌಪ್​ಗೆ ಕಳಿಸಿದ್ದು ಯಾರು?

    ವಿಡಿಯೋ ಶೇರ್​ನ ವಾಟ್ಸ್ ಌಪ್ ಸ್ಕ್ರೀನ್ ಶಾಟ್ ನ್ಯೂಸ್‌ಫಸ್ಟ್‌ಗೆ ಲಭ್ಯ

    ವಾಟ್ಸ್​ ಌಪ್​ನಲ್ಲಿ ವಿಡಿಯೋ ಕಳಿಸಿದ ಮೇಲೆ ಬ್ಲ್ಯಾಕ್‌ಮೇಲ್ ಆರೋಪ

ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಇಡೀ ರಾಜ್ಯ, ದೇಶಾದ್ಯಂತ ಸುದ್ದಿಯಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾದ ಮೇಲೆ SIT ತನಿಖೆ ಚುರುಕಾಗಿದೆ. ತನಿಖೆ ನಡೆಯುತ್ತಿರುವಾಗಲೇ ಹಾಸನದಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋವನ್ನು ಮೊದಲು ವಾಟ್ಸ್​ ಌಪ್​ಗೆ ಶೇರ್‌ ಮಾಡಿದ್ದು ಯಾರು ಅನ್ನೋ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಕೋವಿಶೀಲ್ಡ್ ಸೈಡ್ ಎಫೆಕ್ಟ್.. ಪುನೀತ್ ರಾಜ್ ಕುಮಾರ್ ವ್ಯಾಕ್ಸಿನ್‌ ಫೋಟೋ ವೈರಲ್‌; ತೀವ್ರ ಆಕ್ರೋಶ! 

ನ್ಯೂಸ್ ಫಸ್ಟ್‌ ಚಾನೆಲ್‌ಗೆ ಸಿಕ್ಕ ಎಕ್ಸ್‌ಕ್ಲೂಸಿವ್‌ ಮಾಹಿತಿಯಲ್ಲಿ ವಾಟ್ಸ್​ ಌಪ್​ಗೆ ಹಾಕಿದ ವ್ಯಕ್ತಿಯ ಸುಳಿವು ಪತ್ತೆಯಾಗಿದೆ. ಪ್ರಜ್ವಲ್ ರೇವಣ್ಣ ಅವರ ಬಳಿಕ ಕಾರು ಚಾಲಕನಾಗಿದ್ದ ಕಾರ್ತಿಕ್ ಅವರು ಮೊದಲು ವಿಡಿಯೋವನ್ನು ವಾಟ್ಸ್ ಌಪ್​ಗೆ ಹಾಕಿದ್ದಾರೆ. ವಿಡಿಯೋ ಶೇರ್​ನ ವಾಟ್ಸ್ ಌಪ್ ಸ್ಕ್ರೀನ್ ಶಾಟ್ ಕೂಡ ನ್ಯೂಸ್ ಫಸ್ಟ್​ಗೆ ಲಭ್ಯವಾಗಿದೆ.

ಪ್ರಜ್ವಲ್ ರೇವಣ್ಣರ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡ ಅಶ್ಲೀಲ ವಿಡಿಯೋಗಳನ್ನ ಮೊದಲು ವಾಟ್ಸ್​ ಌಪ್​ಗೆ ಕಳಿಸಿದ್ದಾರೆ. ವಾಟ್ಸ್​ ಌಪ್​ನಲ್ಲಿ ವಿಡಿಯೋ ಕಳಿಸಿದ ಕಾರ್ತಿಕ್‌ ಬ್ಲ್ಯಾಕ್‌ಮೇಲ್ ಕೂಡ ಮಾಡಿರುವ​ ಆರೋಪ ಕೇಳಿ ಬಂದಿದೆ. ಸ್ವತಃ ಕಾರ್ತಿಕ್ ನಂಬರ್​ನಿಂದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವಿಡಿಯೋ ಕಳುಹಿಸಲಾಗಿದೆ. ಇದೇ ವಿಚಾರವನ್ನು ನಿನ್ನೆಯಷ್ಟೇ ವಕೀಲ ದೇವರಾಜೇಗೌಡ ಅವರು ಕೂಡ ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋವನ್ನು ಕಾರ್ತಿಕ್ ಮೊದಲು ಶೇರ್ ಮಾಡಿದ್ರೆ ಅಶ್ಲೀಲ ವಿಡಿಯೋವನ್ನು ಫೇಸ್ ಬುಕ್‌ನಲ್ಲಿ ಅಪ್ಲೋಡ್ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಲಾಗಿದೆ. ನವೀನ್ ಗೌಡ ಎಂಬ ಅಕೌಂಟ್‌ನಿಂದ ಫೇಸ್ ಬುಕ್‌ಗೆ ವಿಡಿಯೋ ಅಪ್ಲೋಡ್ ಆಗಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ನವೀನ್ ಗೌಡ FB ಅಕೌಂಟ್‌ನಲ್ಲಿ ವಿಡಿಯೋ ಸದ್ಯದಲ್ಲೇ ಬರಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದೇ ಆಧಾರದಲ್ಲಿ ಹಾಸನ ಠಾಣೆಯಲ್ಲಿ ಈ ಸಂಬಂಧ ಕೇಸ್ ಕೂಡ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನದಲ್ಲಿ ಅಶ್ಲೀಲ ವಿಡಿಯೋ ಮೊದಲು ವಾಟ್ಸ್‌ಆ್ಯಪ್‌ಗೆ ಹಾಕಿದ್ದು ಯಾರು? ಸ್ಫೋಟಕ ಮಾಹಿತಿ ಬಹಿರಂಗ

https://newsfirstlive.com/wp-content/uploads/2024/05/Prajwal-Revanna-JDS.jpg

Load More