ದೃಷ್ಟಿದೋಷಕ್ಕೆ ಇನ್ಮುಂದೆ ನೀವು ಬಳಸಬೇಕಾಗಿಲ್ಲ ಕಣ್ಣಿನ ಗ್ಲಾಸ್
ದೃಷ್ಟಿದೋಷ ನಿವಾರಣೆಗೆ ಮಾರುಕಟ್ಟೆಗೆ ಬರಲಿದೆ ಹೊಸ ಐಡ್ರಾಪ್
ಸ್ಪೆಕ್ಟ್ಸ್ ಮಾರುಕಟ್ಟೆಗೆ ಈ ಒಂದು ಉತ್ಪನ್ನದಿಂದ ಬೀಳಲಿದೆಯಾ ಹೊಡೆತ
ನವದೆಹಲಿ: ಒಂದು ಔಷಧಿಗಾಗಿ ಹಲವಾರು ಭಾರಿ ಚರ್ಚೆ ಮಾಡಿ ಎರಡು ವರ್ಷಗಳ ಬಳಿಕ ಔಷಧಿ ನಿಯಂತ್ರಣ ಸಂಸ್ಥೆ ಚಸ್ಮಾಕೆ ಪರ್ಯಾಯವಾಗಿ ನಿಲ್ಲಬಲ್ಲ ಭಾರತದ ಮೊದಲ ಐಡ್ರಾಪ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಔಷಧಿ ಮಾರುಕಟ್ಟೆಗೆ ಬಂದಿದ್ದೇ ಆದಲ್ಲಿ, ಕಣ್ಣಿಗೆ ಗ್ಲಾಸ್ ಹಾಕಿಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ
ಮಂಗಳವಾರದಂದು ಎಂಟೋಡ್ ಫಾರ್ಮಾಸಿಟಿಕಲ್ ತನ್ನ ಕೇಂದ್ರ ಕಚೇರಿಯಲ್ಲಿ ಪ್ರೆಸವ್ಯು (preVu) ಎಂಬ ಐಡ್ರಾಪ್ ಲೋಕಾರ್ಪಣೆ ಮಾಡಿದೆ. ಈ ಒಂದು ಔಷಧಿ ಕಣ್ಣಿನ ಪಾಪೆಯ ಗಾತ್ರವನ್ನು ಸಣ್ಣದು ಮಾಡಿ ವಸ್ತುಗಳು ಹತ್ತಿರದಲ್ಲಿ ಕಾಣುವಂತೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದು ಸಂಸ್ಥೆ ಹೇಳಿದೆ ದೃಷ್ಟಿದೋಷ ಅನ್ನೋದು ವಯೋಸಹಜ ಕಾಯಿಲೆ. ಕಣ್ಣಿಗೆ ಹತ್ತಿರದ ವಸ್ತುಗಳನ್ನು ಕಾಣವು ಸಾಮರ್ಥ್ಯವನ್ನು ಕಿತ್ತುಕೊಳ್ಳುತ್ತದೆ. ಹತ್ತಿರದ ವಸ್ತುಗಳನ್ನ ಸ್ಪಷ್ಟವಾಗಿ ನೋಡಲು 40 ಸೆಕೆಂಡ್ನಿಂದ 60 ಸೆಕೆಂಡ್ ಬೇಕಾಗುತ್ತದೆ. ಈ ಒಂದು ಐ ಡ್ರಾಪ್ ಇವೆಲ್ಲಾ ಸಮಸ್ಯೆಗಳನ್ನು ದೂರ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಾರ್ವಜನಿಕರೇ ಎಚ್ಚರ.. ಡೆಂಗ್ಯೂ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಸರ್ಕಾರ; ನಿಯಮ ಉಲ್ಲಂಘಿಸಿದ್ರೆ ದಂಡ!
ಈ ಬಗ್ಗೆ ಮಾತನಾಡಿರುವ ಎಂಟೋಡ್ ಪಾರ್ಮಾಸೆಟಿಕಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಖಿಲ್ ಮಾಸುಕರ್, ಈ ಔಷಧಿಯ ಒಂದು ಡ್ರಾಪ್ ಹಾಕಿದ್ರೆ ಕೇವಲ ಹದಿನೈದು ನಿಮಿಷಗಳಲ್ಲಿ ಇದು ತನ್ನ ಕೆಲಸ ಮಾಡಲು ಶುರು ಮಾಡುತ್ತದೆ. ಅದರ ಸಾಮರ್ಥ್ಯ ಮುಂದಿನ ಆರು ಗಂಟೆಗಳವರೆಗೂ ಹಾಗೆ ಉಳಿಯಲಿದೆ. ಮೊದಲ ಡ್ರಾಪ್ ಹಾಕಿಕೊಂಡ ಮೂರು ಅಥವಾ ಆರು ಗಂಟೆಗಳ ಬಳಿಕ ಎರಡನೇ ಡ್ರಾಪ್ ಹಾಕಿಕೊಂಡರೆ ಅದು ಇನ್ನೂ ಹೆಚ್ಚು ಗಂಟೆಗಳ ಕಾಲ ತನ್ನ ಪರಿಣಾಮವನ್ನು ಬೀರಲಿದೆ ಎಂದು ಹೇಳಿದ್ದಾರೆ
ಅಸ್ಪಷ್ಟ ದೃಷ್ಟಿದೋಷಕ್ಕೆ ಕಣ್ಣಿಗೆ ಗ್ಲಾಸ್, ಕಾಂಟ್ಯಾಕ್ಟ್ ಲೆನ್ಸ್ ಹಾಗೂ ಸರ್ಜರಿ ಹೊರತಾಗಿ ಯಾವುದೇ ಔಷಧಿ ಇಲ್ಲಿಯವರೆಗೂ ಇನ್ನೂ ಬಂದಿಲ್ಲ. ಇದೇ ಮೊದಲ ಐಡ್ರಾಫ್ ಎಂದು ನಿಖಿಲ್ ಹೇಳಿದ್ದಾರೆ. ಇನ್ನು ಅಕ್ಟೋಬರ್ ಮೊದಲ ವಾರದಿಂದಲೇ ದೇಶದ ಎಲ್ಲಾ ಮೆಡಿಕಲ್ ಶಾಪ್ಗಳಲ್ಲಿ ಇದು ದೊರೆಯಲಿದೆ. ಇದರ ಬೆಲೆ 350 ರೂಪಾಯಿ 40 ರಿಂದ 55 ವಯಸ್ಸಿನವರು ಈ ಡ್ರಾಪ್ ಬಳಸಬಹುದಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಊಟ ಮಾಡೋವಾಗ ಪದೇ ಪದೇ ನೀರು ಕುಡಿತಾ ಇದ್ದೀರಾ? ನಿಮಗಿದೆ ಅಪಾಯ! ಕೂಡಲೇ ಎಚ್ಚರ ವಹಿಸಿ!
ಸದ್ಯ ಅಕ್ಟೋಬರ್ನಲ್ಲಿ ಈ ಒಂದು ಔಷಧಿ ಉತ್ಪನ್ನ ಮಾರುಕಟ್ಟೆಗೆ ಬರಲಿದೆ. ಈ ಔಷಧಿ ಲಾಂಚ್ ಆದ ಬಳಿಕ ಗ್ಲಾಸ್ ಅಂದ್ರೆ ಚಸ್ಮಾ ತಯಾರಿಸುವ ಸಂಸ್ಥೆಗಳಿಗೆ ಢವಢವ ಶುರುವಾಗಿದೆ. ಈ ಒಂದು ಐ ಡ್ರಾಪ್ ಗ್ಲಾಸ್ ತಯಾರಿಸುವು ಕಂಪನಿಗಳಿಗೆ ಹೊಡೆತ ಕೊಡಡಲಿವೆ ಅನ್ನೋ ಮಾತುಗಳು ಕೇಳಿ ಬರ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ