newsfirstkannada.com

ಫಾಫ್​​​ ಡುಪ್ಲೆಸಿ​ ಅಲ್ಲ, ಫ್ಲಾಪ್​ ಡುಪ್ಲೆಸಿ!! ಖದರ್ ಕಳೆದುಕೊಂಡ ನಾಯಕನಿಂದ ಅಭಿಮಾನಿಗಳಿಗೆ ಸೋಲುಗಳ ಉಡುಗೊರೆ..!

Share :

Published April 2, 2024 at 2:30pm

Update April 2, 2024 at 2:32pm

    ರನ್ ಗಳಿಸಲು ಆರ್​ಸಿಬಿ ಕ್ಯಾಪ್ಟನ್ ಹೆಣಗಾಟ

    3 ಪಂದ್ಯಗಳಿಂದ ಗಳಿಸಿದ್ದು ಬರೀ 45 ರನ್​

    ಕ್ಯಾಪ್ಟನ್ ಹೀಗಾದ್ರೆ ಉಳಿದವರ ಕಥೆಯೇನು..?

ಹೇಳಿ ಕೇಳಿ ಈತ ತಂಡದ ನಾವಿಕ. ಈತನ ಮೇಲೆ ಭರವಸೆ ಬೆಟ್ಟದಷ್ಟಿರುತ್ತೆ. ಆದ್ರೆ ಆ ಭರವಸೆಯನ್ನ ಆರ್​ಸಿಬಿ ಕ್ಯಾಪ್ಟನ್​ ಸುಳ್ಳಾಗಿಸಿದ್ದಾರೆ. ಅಟ್ಟರ್ ಫ್ಲಾಫ್​ ಪ್ರದರ್ಶನ ನೀಡಿ ತಂಡವನ್ನ ಸೋಲಿನ ಕೂಪಕ್ಕೆ ತಳ್ತಿದ್ದಾರೆ. ಕ್ಯಾಪ್ಟನ್​​ ಹೀಗಾದ್ರೆ ತಂಡದ ಕಥೆ ಏನು ಅಂತ ಫ್ಯಾನ್ಸ್​​ ಹಣೆ ಮೇಲೆ ಕೈ ಹೊತ್ತು ಕೂತಿದ್ದಾರೆ.

ಮೊದಲ ಪಂದ್ಯ 35 ರನ್​​ಗೆ ಸುಸ್ತಾದರೆ ಎರಡನೇ ಪಂದ್ಯದಲ್ಲಿ 3 ರನ್​ಗೆ ಆಟ ಅಂತ್ಯವಾಗಿದೆ. ಮೂರನೇ ಪಂದ್ಯದಲ್ಲಿ 8 ರನ್​ಗೆ ಔಟ್ ಆಗಿದ್ದಾರೆ. ಆರ್​ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿ​​​​ರ ಫ್ಲಾಪ್​ ಶೋ ಕಹಾನಿ ಇದು. ಬರೀ ತಾನು ಮಾತ್ರ ವೈಫಲ್ಯ ಕಾಣ್ತಿಲ್ಲ. ನಾಯಕನಾಗಿ ತಂಡವನ್ನ ಕೂಡ ಸೋಲಿನ ಪ್ರಪಾತಕ್ಕೆ ತಳ್ಳಿದ್ದಾರೆ. ಡುಪ್ಲೆಸಿಯ​​ ದಯನೀಯ ವೈಫಲ್ಯ ಆರ್​ಸಿಬಿ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.

ಫಾಫ್​​​ ಡುಪ್ಲೆಸಿ​ ಅಲ್ಲ, ಫ್ಲಾಪ್​ ಡುಪ್ಲೆಸಿ..!

ಡುಪ್ಲೆಸಿ​​ ಆರ್​​​ಸಿಬಿ ತಂಡದ ನಂಬಿಗಸ್ಥ ಬ್ಯಾಟರ್. ಇಂತಹ ಸ್ಟಾರ್​​​​ ಬ್ಯಾಟ್ಸ್​​ಮನ್​ ರನ್ ಬರ ಎದುರಿಸಿದ್ರೆ ತಂಡದ ಕಥೆ ಏನಾಗ್ಬೇಡ ಹೇಳಿ? ನಿಜಕ್ಕೂ ಫ್ಯಾನ್ಸ್​ಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಆರಂಭಿಕನಾಗಿ ಅಬ್ಬರ ಅನ್ನೋ ಪದವನ್ನೇ ಮರೆತಿದ್ದಾರೆ. ಬೌಲರ್ಸ್​ ಮೇಲೆ ಪ್ರಹಾರ ನಡೆಸಿ ಭೀತಿ ಹುಟ್ಟಿಸಬೇಕಾದ ಬ್ಯಾಟರ್​​, ಸೌಂಡೇ ಮಾಡ್ತಿಲ್ಲ. ಕಳೆದ ಸೀಸನ್​​ನಲ್ಲಿ ಆಡಿದ ರಣವಿಕ್ರಮ ಡುಪ್ಲೆಸಿ​​ ಇವರೇನಾ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದ್ದಾರೆ.

ಇದನ್ನೂ ಓದಿ: ರಾಯಚೂರಿನ ಅಭಿಮಾನಿಗೆ ಹೊಡೆಬೇಡಿ ಎಂದಿದ್ದ ಕೊಹ್ಲಿ, ಆದರೂ ಥಳಿಸಿದ ಬಾಡಿಗಾರ್ಡ್ಸ್​

ಪ್ರಸಕ್ತ ಸೀಸನ್​ನಲ್ಲಿ ಡುಪ್ಲೆಸಿ

ಪ್ರಸಕ್ತ ಐಪಿಎಲ್​ನಲ್ಲಿ ಅಟ್ಟರ್ ಫ್ಲಾಪ್ ಶೋ ನೀಡ್ತಿರೋ ಫಾಫ್​ ಡುಪ್ಲೆಸಿ​​ ಆಡಿದ 3 ಪಂದ್ಯಗಳಿಂದ ಬರೀ 46 ರನ್ ಹೊಡೆದಿದ್ದಾರೆ. 35 ಅವರ ಬ್ಯಾಟ್​ನಿಂದ ಮೂಡಿ ಬಂದ ಬೆಸ್ಟ್ ಸ್ಕೋರ್ ಆಗಿದೆ. ಈ ಸಲ ರನ್​​​​​​​ ಗಳಿಸಲು ಪರದಾಡ್ತಿರೋ ಕ್ಯಾಪ್ಟನ್ ಡುಪ್ಲೆಸಿ​​ 2023ರ ಐಪಿಎಲ್​ನಲ್ಲಿ ಕಿಂಗ್ ಕೊಹ್ಲಿ ಜೊತೆಗೂಡಿ ಧೂಳೆಬ್ಬಿಸಿದ್ರು. ಆರಂಭಿಕರಾಗಿ ಇಬ್ಬರು ಹರಿಸಿದ ರನ್ ಹೊಳೆಗೆ ಐಪಿಎಲ್​ ಲೋಕವೇ ದಂಗಾಗಿತ್ತು.

2023 ರಲ್ಲಿ ಆರಂಭಿಕರಾಗಿ ಕೊಹ್ಲಿ-ಡುಪ್ಲೆಸಿ​​

ಕಳೆದ ಸೀಸನ್​ನಲ್ಲಿ ಕೊಹ್ಲಿ ಹಾಗೂ ಡುಪ್ಲೆಸಿ​​ 14 ಇನ್ನಿಂಗ್ಸ್​ಗಳಿಂದ 939 ರನ್ ಕೊಳ್ಳೆ ಹೊಡೆದಿದ್ರು. ಅದ್ರಲ್ಲಿ 3 ಶತಕದ ಜೊತೆಯಾಟ ಮೂಡಿಬಂದ್ರೆ, 5 ಅರ್ಧಶತಕd ಆಟ ದಾಖಲಾಗಿದ್ವು. ಇಂದಿನ ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​​ಸಿಬಿ ಮ್ಯಾನೇಜ್​ಮೆಂಟ್​​ಗೆ ಡುಪ್ಲೆಸಿ ಫಾರ್ಮ್​​ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇಂದಿನ ಪಂದ್ಯದಲ್ಲಾದ್ರೂ ತಪ್ಪನ್ನ ತಿದ್ದಿಕೊಂಡು ಫಾಫ್​ ಫಾರ್ಮ್​ ಕಂಡುಕೊಳ್ತಾರಾ.? ಇಲ್ಲಾ ಹಳೆ ಚಾಳಿಯನ್ನೇ ಮುಂದುವರೆಸ್ತಾರಾ.? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಫಾಫ್​​​ ಡುಪ್ಲೆಸಿ​ ಅಲ್ಲ, ಫ್ಲಾಪ್​ ಡುಪ್ಲೆಸಿ!! ಖದರ್ ಕಳೆದುಕೊಂಡ ನಾಯಕನಿಂದ ಅಭಿಮಾನಿಗಳಿಗೆ ಸೋಲುಗಳ ಉಡುಗೊರೆ..!

https://newsfirstlive.com/wp-content/uploads/2024/04/FAF-1.jpg

Load More