/newsfirstlive-kannada/media/post_attachments/wp-content/uploads/2024/04/Faf-Duplessis_RCB.jpg)
ಇತ್ತೀಚೆಗೆ ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಸೋಲು ಕಂಡಿದೆ. ಈ ಮೂಲಕ ತಾನು ಆಡಿರೋ 6 ಪಂದ್ಯಗಳಲ್ಲಿ ಐದರಲ್ಲಿ ಸೋತಿದ್ದು, ಒಂದರಲ್ಲಿ ಮಾತ್ರ ಗೆದ್ದಿದೆ. ಸದ್ಯ ಪಾಯಿಂಟ್ಸ್​ ಟೇಬಲ್​ನಲ್ಲಿ 9ನೇ ಸ್ಥಾನದಲ್ಲಿದ್ದು, ಪ್ಲೇ ಆಫ್​​ ಹಾದಿ ಕಠಿಣವಾಗಿದೆ.
ಇನ್ನು, ಆರ್​​​​ಸಿಬಿ ಹೀನಾಯವಾಗಿ ಸೋತ ಬೆನ್ನಲ್ಲೇ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಮಾತಾಡಿದ್ದಾರೆ. ಆರ್​​​ಸಿಬಿ ಎದುರಾಳಿಗಳಿಗೆ ಚಾಲೆಂಜ್​ ಮಾಡೋ ರೀತಿ ಬೌಲಿಂಗ್​ ಪಡೆ ನಮ್ಮಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ನಾವು ಬೌಲಿಂಗ್​ ಅನ್ನು ನಂಬಲೇಬಾರದು. ಬ್ಯಾಟಿಂಗ್​ ದೃಷ್ಟಿಕೋನದಿಂದ ನಾವು 250ಕ್ಕಿಂತಲೂ ಹೆಚ್ಚು ರನ್​ ಕಲೆ ಹಾಕಲು ಯತ್ನಿಸಬೇಕು. ನಮ್ಮ ಬೌಲಿಂಗ್ ದಾಳಿಯಲ್ಲಿ ದೊಡ್ಡ ಅಸ್ತ್ರಗಳಿಲ್ಲ. ಹಾಗಾಗಿ ಬ್ಯಾಟಿಂಗ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು ಫಾಫ್​​.
ನಮ್ಮಲ್ಲಿ ಒಳ್ಳೆಯ ಬೌಲರ್​ಗಳ ಕೊರತೆ ಇದೆ. ನಾವು ಪವರ್ ಪ್ಲೇನಲ್ಲಿ 2 ಅಥವಾ 3 ವಿಕೆಟ್‌ಗಳನ್ನು ಪಡೆಯಬೇಕಿತ್ತು. ಮೊದಲ 4 ಓವರ್‌ಗಳ ನಂತರ ನಾವು ಹಿಂದೆ ಬೀಳುತ್ತೇವೆ ಎಂದು ಯಾವಾಗಲೂ ಅನಿಸುತ್ತದೆ ಎಂದರು.
ಇದನ್ನೂ ಓದಿ: ಎರಡೆರಡು ಬಾರಿ RCB ದಾಖಲೆ ಉಡೀಸ್.. IPLನಲ್ಲಿ ಕೆಲವೊಂದು ಅಚ್ಚರಿ ವಿಸ್ಮಯಗಳು ಇಲ್ಲಿವೆ!​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ