newsfirstkannada.com

ಪೋಷಕರೇ ನಿಮ್ಮ ಮಕ್ಕಳು ಓದುತ್ತಿರೋ ಶಾಲೆ ಇದೇನಾ! ಹಾಗಾದ್ರೆ ನೀವು ಓದಲೇಬೇಕಾದ ಸ್ಟೋರಿ..!

Share :

Published March 27, 2024 at 10:51pm

  ಪೋಷಕರೇ ಎಚ್ಚರ.. ಈ ಸ್ಕೂಲ್​ಗೆ ಮಾನ್ಯತೆಯೇ ಇಲ್ಲ

  ಮೇಲಿರೋದು ಒಂದು ಹೆಸ್ರು.. ಒಳಗಿರೋದು ಮತ್ತೊಂದು

  ಅನುಮತಿಯೇ ಇಲ್ಲದೇ CBSC ಶಾಲೆ ನಡೆಸಿ ಅಕ್ರಮ..!

ಬೆಂಗಳೂರು: ಪೋಷಕರೇ ಎಚ್ಚರ.. ನೋಡೋಕೆ ಒಳ್ಳೆ ಸ್ಕೂಲ್​ ಅಂತ ಹಿಂದೆ ಮುಂದೆ ವಿಚಾರಿಸದೆ ಐಷಾರಾಮಿ ಸ್ಕೂಲ್​ಗೆ ನಿಮ್ಮ ಮಕ್ಕಳನ್ನ ಸೇರಿಸಿದ್ರೆ ನಿಮ್ಮ ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಬೋದು. ನಿಮ್ಮ ಮಕ್ಕಳೇನಾದ್ರೂ ನಾವ್​ ಇವತ್ತು ಹೇಳ್ತಿರೋ ಸ್ಕೂಲ್​ನಲ್ಲಿ ಓದ್ತಿದ್ರೆ ಎಚ್ಚೆತ್ತುಕೊಳ್ಳಿ ಯಾಮಾರಬೇಡಿ.

ಇದು ಹೆಸರಘಟ್ಟ ಮುಖ್ಯ ರಸ್ತೆ ಎಂ.ಎಸ್​ ಪಾಳ್ಯದ ಶಾರದ ಹಿಲ್ಸ್​​ನಲ್ಲಿರುವ ರಾಯಲ್​​ ಕಾನ್​ಕಾರ್ಡ್ ​​ಶಾಲೆ. ಇಲ್ಲಿ ನೂರಾರು ಮಕ್ಕಳು ಶಿಕ್ಷಣ ಪಡೀತಿದ್ದಾರೆ. ಆದ್ರೆ ಅಸಲಿಗೆ ಮಾನ್ಯತೆಯೇ ಇಲ್ಲದ ಈ ಶಾಲೆ ನಡೀತಿರೋದು ಬೇರೆ ಶಾಲೆ ಹೆಸರಲ್ಲಿ. ರಾಯಲ್ ಕಾನ್‌ಕಾರ್ಡ್‌ ನಡೆಸ್ತಿರೋ ಅಕ್ರಮದ ಪಟ್ಟಿ ಬಿಚ್ಚಿಡ್ತೀವಿ ಓದಿ.

ಈ ಕಟ್ಟಡದಲ್ಲಿ ಮೊದ್ಲು ನಡೀತಿದ್ದಿದ್ದು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ. ಆದ್ರೆ ಈ ಶಾಲೆಯನ್ನ ಶೇರಿಂಗ್‌ನಲ್ಲಿ ನಡೆಸ್ತೀವಿ ಅಂತ ತಗೊಂಡವ್ರು ಈಗ ರಾಯಲ್​​ ಕಾನ್​ಕಾರ್ಡ್ ಅಂತ ಹೆಸ್ರು ಬದ್ಲಾಯಿಸಿದ್ದಾರೆ. ಶಾಲೆ ನಡೆಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಇದ್ದಿದ್ದು ಶಾರದಾ ವಿದ್ಯಾನಿಕೇತನ ಸಂಸ್ಥೆಗೆ ಮಾತ್ರ. ಆದ್ರೆ ರಾಯಲ್ ಕಾನ್‌ಕಾರ್ಡ್‌ ಪೋಷಕರಿಗೆ ಯಾಮಾರಿಸಿ ಮಕ್ಕಳನ್ನ ಅಡ್ಮಿಶನ್​​ ಮಾಡಿಕೊಳ್ತಿದ್ಯಂತೆ.

ಖಾಸಗಿ ಶಾಲೆ ಕಳ್ಳಾಟ!

ಶಾರದಾ ವಿದ್ಯಾನಿಕೇತನ ಶಾಲೆಯದ್ದೇ ಮಾನ್ಯತೆ ಬಳಸಿಕೊಂಡು ರಾಯಲ್ ಕಾನ್‌ಕಾರ್ಡ್ ಶಾಲೆ ನಡೆಸ್ತಿದ್ರೂ ಆ ಮಾನ್ಯತೆ ಕೂಡ ಈಗಾಗ್ಲೇ ಮುಗಿದು ಹೋಗಿದೆ. ಏಪ್ರಿಲ್​​ 2018ಕ್ಕೆ ಪಡೆದಿದ್ದ ಮಾನ್ಯತೆ 2023ರ ಮಾರ್ಚ್​​ 31ಕ್ಕೆ ಕೊನೆಯಾಗಿದೆ. ಇದೇ ಕಾರಣಕ್ಕೆ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಎಲ್ಲಾ ಶಾಲೆಗಳನ್ನ ಮಾನ್ಯತೆ ಮಾಹಿತಿ ಸಿಕ್ಕಿದ್ರೂ ಈ ಶಾಲೆಯ ಮಾಹಿತಿ ಸಿಗಲ್ಲ. ಹಾಗಂತ ಶಾಲೆಗೆ ಹೋಗಿ ಕೇಳಿದ್ರೆ ಅವ್ರು 1/4/2021ರಂದು ಪಡೆದಿದ್ದ ನವೀಕೃತ ಮಾನ್ಯತೆ 31/3/2026ರವರೆಗೂ ಇದೆ ಅಂತ ನಕಲಿ ಡಾಕ್ಯುಮೆಂಟ್ ತೋರಿಸ್ತಿದ್ದಾರೆ. ಯಾಕಂದ್ರೆ ಈ ನವೀಕೃತ ಮಾನ್ಯತೆ ಇಲಾಖೆ ವೆಬ್​ಸೈಟ್‌ನಲ್ಲಿ ಕಾಣ್ಸಲ್ಲ. ಇದಲ್ಲದೆ ಸಿಬಿಎಸ್​ಸಿ ಮಾನ್ಯತಾ ನವೀಕರಣ ಮುಂದುವರೆಸಬೇಕಾದರೆ ಸ್ಥಳೀಯ DDPI ರಿಂದ NOC ಪಡೆಯಬೇಕು. ಇವ್ರು ಅದನ್ನೂ ಪಡೆದಿಲ್ಲ. ಈ ಅಕ್ರಮ ಗಮನಕ್ಕೆ ಬರ್ತಿದ್ದಂತೆ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಬಿಇಒ ಸದ್ಯ 7 ದಿನಗಳ ಒಳಗೆ ಉತ್ತರಿಸಲು ಗಡುವು ನೀಡಿದ್ದಾರೆ. CBSC ಬೋರ್ಡ್​​ನಲ್ಲೂ ಈ ಶಾಲೆ ವಿರುದ್ಧ ದೂರು ದಾಖಲಾಗಿದೆ. ಇದೆಲ್ಲದ್ರ ಮಧ್ಯೆ ಈ ಶಾಲೆ ನಡೀತಿರೋ ಕಟ್ಟಡವೂ ಸುರಕ್ಷಿತವಲ್ಲ ಅಂತ PWD ಇಲಾಖೆಯೇ ವರದಿ ನೀಡಿದೆ. ಶಾಲೆಯ ತಳಪಾಯ ಮತ್ತು ಕಟ್ಟಡ ಗೋಡೆಯ ತಳಪಾಯ ಶಿಥಿಲಗೊಂಡಿದೆ ಅನ್ನೋ ವರದಿ ಇದ್ರೂ ಶಾಲೆ ಮಾತ್ರ ಮಕ್ಕಳ ಬದುಕಲ್ಲಿ ಚೆಲ್ಲಾಟವಾಡ್ತಿದೆ. ಒಟ್ನಲ್ಲಿ ಶಿಕ್ಷಣದ ಹೆಸರಲ್ಲಿ ಬ್ಯುಸಿನೆಸ್ ಮಾಡೋಕೆ ಹೊರಟವ್ರು ಮಕ್ಕಳ ಭವಿಷ್ಯವನ್ನೇ ಅಪಾಯಕ್ಕೆ ತಳ್ತಿರೋದು ವಿಪರ್ಯಾಸ.

ಇದನ್ನೂ ಓದಿ: RCB ದಾಖಲೆ ಮುರಿದ ಹೈದರಾಬಾದ್​​.. ಮುಂಬೈಗೆ ಬರೋಬ್ಬರಿ 278 ರನ್​ ಟಾರ್ಗೆಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪೋಷಕರೇ ನಿಮ್ಮ ಮಕ್ಕಳು ಓದುತ್ತಿರೋ ಶಾಲೆ ಇದೇನಾ! ಹಾಗಾದ್ರೆ ನೀವು ಓದಲೇಬೇಕಾದ ಸ್ಟೋರಿ..!

https://newsfirstlive.com/wp-content/uploads/2023/12/School-2.jpg

Load More