newsfirstkannada.com

RCB ದಾಖಲೆ ಮುರಿದ ಹೈದರಾಬಾದ್​​.. ಮುಂಬೈಗೆ ಬರೋಬ್ಬರಿ 278 ರನ್​ ಟಾರ್ಗೆಟ್​​

Share :

Published March 27, 2024 at 9:42pm

Update March 27, 2024 at 9:44pm

    ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ಹೈವೋಲ್ಟೇಜ್​ ಪಂದ್ಯ

    ಮುಂಬೈ ಇಂಡಿಯನ್ಸ್​ಗೆ ಸನ್​​ರೈಸರ್ಸ್​ ಹೈದರಾಬಾದ್ 278 ರನ್​ ಬಿಗ್​ ಟಾರ್ಗೆಟ್​​

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ದಾಖಲೆ ಮುರಿದ ಸನ್​ರೈಸರ್ಸ್​ ಹೈದರಾಬಾದ್

ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಮುಂಬೈ ವಿರುದ್ಧದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡ ಇಡೀ ಐಪಿಎಲ್​ ಇತಿಹಾಸದಲ್ಲಿ ಅತ್ಯಂತ ಅಧಿಕ ರನ್​ ಗಳಿಸಿ ದಾಖಲೆ ಬರೆದಿದೆ. ಈ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೆಸರಲ್ಲಿದ್ದ ದಾಖಲೆಯನ್ನು ಹೈದ್ರಾಬಾದ್​ ಟೀಮ್​ ಬ್ರೇಕ್ ಮಾಡಿದೆ.

ಟಾಸ್​ ಗೆದ್ದುಕೊಂಡ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು ಅಕ್ಷರಶಃ ತಲೆಕೆಳಗಾಯಿತು. ಸನ್​ರೈಸರ್ಸ್​ ಹೈದರಾಬಾದ್​​​ ಮೊದಲು ಬ್ಯಾಟಿಂಗ್​ ಮಾಡಿ ನಿಗದಿತ 20 ಓವರ್​ಗಳಲ್ಲಿ 278 ರನ್​ಗಳ ಬೃಹತ್​ ಟಾರ್ಗೆಟ್​ ಅನ್ನು ಮುಂಬೈಗೆ ನೀಡಿದೆ. ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ ಹೈದರಾಬಾದ್ ತಂಡದ ಬ್ಯಾಟ್ಸ್​ಮನ್​ಗಳು ಬೆಂಕಿ ಬ್ಯಾಟಿಂಗ್ ಮಾಡಿದರು.

ಇದನ್ನೂ ಓದಿ: VIDEO: ಕೆಟ್ಟ ಮೇಲೆ ಬುದ್ಧಿ ಕಲಿತ ಪಾಂಡ್ಯ; ಕೊನೆಗೂ ರೋಹಿತ್​ ಮಾತು ಕೇಳಿದ ಹಾರ್ದಿಕ್

ಮುಂಬೈ ಇಂಡಿಯನ್ಸ್​ ಬೌಲರ್​ಗಳ ಬೆಂಡೆತ್ತಿದ ಟ್ರಾವೀಸ್​ ಹೆಡ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 24 ಬಾಲ್​ನಲ್ಲಿ 3 ಸಿಕ್ಸರ್​​, 9 ಫೋರ್​​ ಸಮೇತ 64 ರನ್​​ ಸಿಡಿಸಿ ದಾಖಲೆ ಬರೆದರು. ಓಪನರ್​​​ ಟ್ರಾವಿಸ್​ ಹೆಡ್​ಗೆ ಸಾಥ್​ ನೀಡಿದ ಅಭಿಶೇಕ್​ ಶರ್ಮಾ ಮೊದಲು ಕೇವಲ 16 ಬಾಲ್​ನಲ್ಲಿ ಅರ್ಧಶತಕ ಸಿಡಿಸಿದ್ರು. ಬಳಿಕ ತಾನು ಆಡಿದ 23 ಬಾಲ್​ನಲ್ಲಿ 7 ಸಿಕ್ಸರ್​​, 3 ಫೋರ್​ ಸಮೇತ 63 ರನ್​ ಚಚ್ಚಿ ಕ್ಯಾಚ್​ ನೀಡಿದ್ರು. ಇನ್ನು, ಏಡನ್​ ಮರ್ಕ್ರಮ್​​ ಮತ್ತು ಹೆನ್ರಿಕ್​ ಕ್ಲಾಸೆನ್​ ಕೂಡ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ. ಹೆನ್ರಿಕ್​ ಕ್ಲಾಸೆನ್ ಅಂತೂ ರೌದ್ರವಾತಾರ ತಾಳಿದರು. ಕೇವಲ 34 ಎಸೆತ ಎದುರಿಸಿದ ಕ್ಲಾಸೆನ್ 4 ಫೋರ್, 7 ಅಮೋಘವಾದ ಸಿಕ್ಸರ್ ನೆರವಿನಿಂದ 80 ರನ್​ಗಳನ್ನ ಬಾರಿಸಿದರು. ಮಾರ್ಕರಮ್ ಕೂಡ 28 ಎಸೆತದಲ್ಲಿ 1 ಸಿಕ್ಸ್​, 2 ಫೋರ್​ನಿಂದ 42 ರನ್​ಗಳನ್ನು ಕೆಲಹಾಕಿದರು. ಇದರಿಂದ ಹೈದರಾಬಾದ್ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 278 ರನ್​ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿದೆ.

ಹಾರ್ದಿಕ್​ ಕ್ಯಾಪ್ಟನ್ಸಿಯಿಂದಲೇ ಹೀಗಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇಂದು ಯಾರಿಗೂ ಬೌಲಿಂಗ್​ ನೀಡಿದ್ರೂ ಹೇಗೆ ಫೀಲ್ಡ್​ ಸೆಟ್​ ಮಾಡಿದ್ರೂ ಹಾರ್ದಿಕ್​​​ ಫೋರ್​, ಸಿಕ್ಸರ್​​ಗಳನ್ನು ತಡೆಯಲು ಆಗಲಿಲ್ಲ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೋಚದೆ ರೋಹಿತ್​ ಮೊರೆ ಹೋಗಿದ್ದರು.

​ಇನ್ನು 2013ರಲ್ಲಿ ಆರ್​ಸಿಬಿ ತಂಡ ಪುಣೆ ವಾರಿಯರ್ಸ್​ ವಿರುದ್ಧ 5 ವಿಕೆಟ್​ಗೆ 263 ರನ್​ಗಳನ್ನ ಗಳಿಸಿರುವುದು ಇದುವರೆಗೆ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಎನಿಸಿತ್ತು. ಆದರೆ ಈ ಬಾರಿ ಆರ್​ಸಿಬಿ ದಾಖಲೆಯನ್ನು ಬ್ರೇಕ್ ಮಾಡಿದ ಹೈದ್ರಾಬಾದ್ 278 ರನ್​ಗಳನ್ನ ಬಾರಿಸಿ ದಾಖಲೆ ಬರೆದಿದೆ. 3ನೇ ಸ್ಥಾನದಲ್ಲಿ ಲಕ್ನೋ ಇದ್ದು 2023ರಲ್ಲಿ 256 ರನ್​ಗಳನ್ನ ಗಳಿಸಿದೆ. ನಾಲ್ಕನೇ ಸ್ಥಾನದಲ್ಲಿ ಮತ್ತೆ ಆರ್​ಸಿಬಿ ಇದ್ದು 2016ರಲ್ಲಿ 248 ರನ್​ಗಳನ್ನು ಕಲೆ ಹಾಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ದಾಖಲೆ ಮುರಿದ ಹೈದರಾಬಾದ್​​.. ಮುಂಬೈಗೆ ಬರೋಬ್ಬರಿ 278 ರನ್​ ಟಾರ್ಗೆಟ್​​

https://newsfirstlive.com/wp-content/uploads/2024/03/HRS.jpg

Load More