newsfirstkannada.com

VIDEO: ಕೆಟ್ಟ ಮೇಲೆ ಬುದ್ಧಿ ಕಲಿತ ಪಾಂಡ್ಯ; ಕೊನೆಗೂ ರೋಹಿತ್​ ಮಾತು ಕೇಳಿದ ಹಾರ್ದಿಕ್

Share :

Published March 27, 2024 at 9:21pm

    ಮುಂಬೈ ಇಂಡಿಯನ್ಸ್​ ಬೌಲರ್​ಗಳ ಬೆಂಡೆತ್ತಿದ ಹೈದರಾಬಾದ್​ ಬ್ಯಾಟರ್ಸ್​​

    ಕೆಟ್ಟ ಮೇಲೆ ಬುದ್ಧಿ ಕಲಿತ ಮುಂಬೈ ಇಂಡಿಯನ್ಸ್​​ ಹೊಸ ಕ್ಯಾಪ್ಟನ್​ ಪಾಂಡ್ಯ

    ಏನು ತೋಚದೆ ರೋಹಿತ್​ ಶರ್ಮಾ ಹೋದ ಹೊಸ ಕ್ಯಾಪ್ಟನ್​ ಹಾರ್ದಿಕ್​​!

ಸದ್ಯ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹೈವೋಲ್ಟೇಜ್​​ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದೆ.

ಮುಂಬೈ ಇಂಡಿಯನ್ಸ್​ ಬೌಲರ್​ಗಳ ಬೆಂಡೆತ್ತಿದ ಟ್ರಾವೀಸ್​ ಹೆಡ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 24 ಬಾಲ್​ನಲ್ಲಿ 3 ಸಿಕ್ಸರ್​​, 9 ಫೋರ್​​ ಸಮೇತ 64 ರನ್​​ ಸಿಡಿಸಿ ದಾಖಲೆ ಬರೆದರು. ಇವರ ಸ್ಟ್ರೈಕ್​​ ರೇಟ್​​ 260 ಇತ್ತು.

ಓಪನರ್​​​ ಟ್ರಾವಿಸ್​ ಹೆಡ್​ಗೆ ಸಾಥ್​ ನೀಡಿದ ಅಭಿಶೇಕ್​ ಶರ್ಮಾ ಮೊದಲು ಕೇವಲ 16 ಬಾಲ್​ನಲ್ಲಿ ಅರ್ಧಶತಕ ಸಿಡಿಸಿದ್ರು. ಬಳಿಕ ತಾನು ಆಡಿದ 23 ಬಾಲ್​ನಲ್ಲಿ 7 ಸಿಕ್ಸರ್​​, 3 ಫೋರ್​ ಸಮೇತ 63 ರನ್​ ಚಚ್ಚಿ ಕ್ಯಾಚ್​ ನೀಡಿದ್ರು.

ಇನ್ನು, ಏಡನ್​ ಮರ್ಕ್ರಮ್​​ ಮತ್ತು ಹೆನ್ರಿಕ್​ ಕ್ಲಾಸೆನ್​ ಕೂಡ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಹಾರ್ದಿಕ್​ ಕ್ಯಾಪ್ಟನ್ಸಿಯಿಂದಲೇ ಹೀಗಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇಂದು ಯಾರಿಗೂ ಬೌಲಿಂಗ್​ ನೀಡಿದ್ರೂ ಹೇಗೆ ಫೀಲ್ಡ್​ ಸೆಟ್​ ಮಾಡಿದ್ರೂ ಹಾರ್ದಿಕ್​​​ ಫೋರ್​, ಸಿಕ್ಸರ್​​ಗಳನ್ನು ತಡೆಯಲು ಆಗಲಿಲ್ಲ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೋಚದೆ ರೋಹಿತ್​ ಮೊರೆ ಹೋಗಿದ್ದಾರೆ.

ಮೊನ್ನೆ ರೋಹಿತ್​ಗೆ ನೀನು ಹಿಂದೆ ಹೋಗು ಎಂದಿದ್ದ ಪಾಂಡ್ಯ ಇಂದು ಹಿಟ್​ಮ್ಯಾನ್​ ಮಾತು ಕೇಳಿದ್ರು. ರೋಹಿತ್​ ಶರ್ಮಾನೇ ಕೊನೆಗೆ ಫೀಲ್ಡ್​ ಸೆಟ್​ ಮಾಡಿದ್ರು. ಹಿಟ್​ಮ್ಯಾನ್​​ ಹೇಳಿದಂತೆ ಹಾರ್ದಿಕ್​ ಬೌಂಡರಿ ಲೈನ್​ಗೆ ಹೋದರು.

ಇದನ್ನೂ ಓದಿ: ಕೇವಲ 24 ಬಾಲ್​​ನಲ್ಲಿ 62 ರನ್​ ಚಚ್ಚಿದ ಟ್ರಾವೀಸ್​ ಹೆಡ್​​.. ಬೆಚ್ಚಿಬಿದ್ದ ಹಾರ್ದಿಕ್​ ಪಾಂಡ್ಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೆಟ್ಟ ಮೇಲೆ ಬುದ್ಧಿ ಕಲಿತ ಪಾಂಡ್ಯ; ಕೊನೆಗೂ ರೋಹಿತ್​ ಮಾತು ಕೇಳಿದ ಹಾರ್ದಿಕ್

https://newsfirstlive.com/wp-content/uploads/2024/03/Rohit_Hardik00.jpg

Load More