newsfirstkannada.com

ಜೈಲಲ್ಲಿ ಪ್ರಿಂಟಿಂಗ್ ಕಲೆ ಕರಗತ ಮಾಡಿಕೊಂಡ ಭೂಪ.. ರಿಲೀಸ್ ಆದ ಮೇಲೆ ಮಾಡಿದ್ದೇನು ಗೊತ್ತಾ?

Share :

Published March 25, 2024 at 8:39pm

    ಕೈದಿಗಳ ಜೀವನೋಪಾಯಕ್ಕೆ ಸಹಾಯವಾಗಲಿ ಎಂದು ಜೈಲಿನಲ್ಲಿ ತರಬೇತಿ

    ಸೆರೆವಾಸದಲ್ಲಿ ಇದ್ದಷ್ಟು ದಿನ ಮಾಸ್ಟರ್ ಪ್ಲಾನ್ ಮಾಡಿ ಬಂದ ಭೂಪೇಂದ್ರ ಸಿಂಗ್‌

    ನಕಲಿ ನೋಟು ಪ್ರಿಂಟ್ ಮಾಡಿ ಆರಾಮಾಗಿ ಜೀವನ ನಡೆಸುತ್ತಿದ್ದ ಭೂಪ

ಭೋಪಾಲ್‌:  ಮಧ್ಯಪ್ರದೇಶದಲ್ಲೊಂದು ವಿಚಿತ್ರ ಕಳ್ಳನ ಪ್ರಕರಣ ಬೆಳಕಿಗೆ ಬಂದಿದೆ. ಭೂಪೇಂದ್ರ ಸಿಂಗ್ ಧಕತ್ ಎಂಬಾತ 11 ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜೈಲಿನಲ್ಲೂ ತನ್ನ ಚಾಳಿ ಬಿಡದ ಭೂಪೇಂದ್ರ ಸಿಂಗ್‌ ಸೆರೆವಾಸದಲ್ಲಿ ಇದ್ದಷ್ಟು ದಿನ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಕಾರಾಗೃಹದಿಂದ ಬಿಡುಗಡೆ ಆಗುತ್ತಿದ್ದಂತೆ ಮತ್ತೆ ಖತರ್ನಾಕ್ ಕೆಲಸ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

35 ವರ್ಷದ ಭೂಪೇಂದ್ರ ಸಿಂಗ್ ಧಕತ್, ಜೈಲಿನಲ್ಲಿದ್ದಾಗಲೇ ಪ್ರಿಂಟಿಂಗ್ ಮಾಡುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾನೆ. ತನ್ನ ಜೈಲು ಶಿಕ್ಷೆಯ ಅವಧಿ ಮುಗಿದ ಬಳಿಕ ಬಿಡುಗಡೆಯಾಗಿದ್ದಾನೆ. ಜೈಲಲ್ಲಿ ಪ್ರಿಂಟಿಂಗ್ ಮಾಡುವುದನ್ನು ಕಲಿತಿದ್ದ ಈತ ಮನೆಯಲ್ಲಿ ನಕಲಿ ನೋಟುಗಳನ್ನ ಪ್ರಿಂಟ್ ಮಾಡಲು ಆರಂಭಿಸಿದ್ದಾನೆ. ಹಲವು ತಿಂಗಳುಗಳ ಕಾಲ ನಕಲಿ ನೋಟುಗಳನ್ನ ಪ್ರಿಂಟ್ ಮಾಡಿ ಚಲಾವಣೆ ಆರಾಮಾಗಿ ಜೀವನ ನಡೆಸಿದ್ದಾನೆ.

ಬರೀ 200 ರೂಪಾಯಿ ಮುಖಬೆಲೆಯ ನೋಟುಗಳನ್ನೇ ಭೂಪೇಂದ್ರ ಸಿಂಗ್ ಮನೆಯಲ್ಲಿ ಪ್ರಿಂಟ್ ಮಾಡುತ್ತಿದ್ದ. ಆ ನೋಟುಗಳು ಅಸಲಿ ನೋಟುಗಳ ರೀತಿಯಲ್ಲೇ ಇದ್ದಿದ್ದರಿಂದ ಮೊದಲಿಗೆ ಯಾರಿಗೂ ಅನುಮಾನ ಬಂದಿಲ್ಲ. ನಕಲಿ ನೋಟುಗಳನ್ನ ಅಕ್ರಮ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಿದ್ದ. ಕೆಲವೇ ತಿಂಗಳ ಬಳಿಕ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಈ ಖೋಟಾ ನೋಟುಗಳು ಚಲಾವಣೆ ಆಗಿದೆ. ಪೊಲೀಸರಿಗೆ ಅನುಮಾನ ಬಂದು ತನಿಖೆ ನಡೆಸಿದಾಗ ಖತರ್ನಾಕ್ ಕಳ್ಳನ ಅಸಲಿ ಬಣ್ಣ ಬಯಲಾಗಿದೆ.

ಇದನ್ನೂ ಓದಿ: ವಿಶ್ವದ ಖ್ಯಾತ ಸಲಿಂಗ ದಾಂಪತ್ಯದಲ್ಲಿ ಬಿರುಕು; ಅಂಜಲಿ ಚಕ್ರ- ಸೂಫಿ ಮಲಿಕ್ ಈಗ ಬೇರೆ, ಬೇರೆ; ಯಾಕೆ?

ಭೂಪೇಂದ್ರ ಸಿಂಗ್ ಮನೆ ಮೇಲೆ ರೇಡ್ ಮಾಡಿದ ಪೊಲೀಸರು ನಿಜಕ್ಕೂ ಶಾಕ್‌ ಆಗಿದ್ದಾರೆ. ಇವನಿಗೆ ಪ್ರಿಂಟಿಂಗ್ ಕಲೆ ಎಷ್ಟು ಚೆನ್ನಾಗಿತ್ತು ಅಂದ್ರೆ ಅಸಲಿ ನೋಟುಗಳ ರೀತಿಯ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸಿದ ಪೊಲೀಸರು 95 ಖೋಟಾ ನೋಟುಗಳು ಹಾಗೂ ಪ್ರಿಂಟಿಂಗ್‌ಗೆ ಬಳಸುತ್ತಿದ್ದ ಇಂಕ್, ಪೇಪರ್‌ ಹಾಗೂ ಮೆಷಿನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಜೈಲಿನಲ್ಲಿ ಕೈದಿಗಳ ಜೀವನೋಪಾಯಕ್ಕೆ ಸಹಾಯವಾಗಲಿ ಎಂದು ಪ್ರಿಂಟಿಂಗ್ ಮೆಷಿನ್‌ನಲ್ಲಿ ಕೆಲಸ ಮಾಡುವ ತರಬೇತಿ ನೀಡಲಾಗುತ್ತದೆ. ಆದರೆ ಪ್ರಿಂಟಿಂಗ್ ಮಾಡುವ ವಿಧಾನವನ್ನೇ ಈತ ಖೋಟಾ ನೋಟು ಪ್ರಿಂಟ್ ಮಾಡಲು ಬಳಸಿಕೊಂಡಿದ್ದೇನೆ. ಮಧ್ಯಪ್ರದೇಶದ ಪೊಲೀಸರು ಈ ಸಿನಿಮೀಯ ಪ್ರಕರಣವನ್ನು ಬೇಧಿಸಿ ಬೆಚ್ಚಿ ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಲ್ಲಿ ಪ್ರಿಂಟಿಂಗ್ ಕಲೆ ಕರಗತ ಮಾಡಿಕೊಂಡ ಭೂಪ.. ರಿಲೀಸ್ ಆದ ಮೇಲೆ ಮಾಡಿದ್ದೇನು ಗೊತ್ತಾ?

https://newsfirstlive.com/wp-content/uploads/2024/03/Note-Printing.jpg

Load More